ಸಾಮಾಜಿಕ ಜಾಲತಾಣದಲ್ಲಿ ಬೆನ್ನಿನ ಮೇಲೆ ಮಂಕಿಪಾಕ್ಸ್ ಗಾಯಗಳನ್ನು ಹೊಂದಿರುವ ವ್ಯಕ್ತಿಯನ್ನು ತೋರಿಸುವ ಚಿತ್ರವೊಂದು ವೈರಲ್ ಆಗಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಸಿಂಗಾಪುರದಲ್ಲಿ ಮಂಕಿಪಾಕ್ಸ್‌ನ 10 ಪ್ರಕರಣ ವರದಿಯಾಗಿದೆ ಮತ್ತು ಸಾಂಕ್ರಾಮಿಕವಾಗಿ ಹರಡುತ್ತಿದೆ ಎಂದು ಶೀರ್ಷಿಕೆ ನೀಡಲಾಗಿದೆ. ಮತ್ತು ಇದು ಹೆಚ್ಚು ಸಾಂಕ್ರಾಮಿಕವಾಗಿರುವುದರಿಂದ ಮಾಸ್ಕ್‌ಗಳನ್ನು ಧರಿಸಲು, ಕೈಗಳನ್ನು ಆಗಾಗ ತೊಳೆಯಲು ಮತ್ತು ಜನಸಂದಣಿಯನ್ನು ತಪ್ಪಿಸಲು ಜನರನ್ನು ಒತ್ತಾಯಿಸಲಾಗುತ್ತಿದೆ.
ಫ್ಯಾಕ್ಟ್ ಚೆಕ್:
ರಿವರ್ಸ್ ಇಮೇಜ್ ಹುಡುಕಾಟವು 11 ಅಕ್ಟೋಬರ್ 2022 ರಂದು ಮೆಕ್ಸಿಕನ್ ಸಾಂಕ್ರಾಮಿಕ ರೋಗ ತಜ್ಞ ಜೋಸ್ ಹಿರಾಮ್ ಹೆರ್ನಾಂಡೆಜ್ ಜೆರೊನಿಮೊ ಪೋಸ್ಟ್ ಮಾಡಿದ ಫೋಟೋಗೆ ನಮ್ಮನ್ನು ಕರೆದೊಯ್ಯಿತು. ಇದು 250 ಕ್ಕೂ ಹೆಚ್ಚು ಹುಣ್ಣುಗಳೊಂದಿಗೆ ಮಂಕಿಪಾಕ್ಸ್‌ನ ತೀವ್ರ ಪ್ರಕರಣವನ್ನು ತೋರಿಸಿದೆ ಎಂದು ಅವರು ಹೇಳಿದ್ದಾರೆ ಕಾಮೆಂಟ್‌ಗಳಲ್ಲಿ, ರೋಗಿಯು ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾನೆ ಎಂದು ಅವರು ಉಲ್ಲೇಖಿಸಿದ್ದಾರೆ. ಇದು ವೈರಲ್ ಪೋಸ್ಟ್‌ನಲ್ಲಿರುವ ಫೋಟೋ ಇತ್ತೀಚಿನದಲ್ಲ ಎಂದು ಇದು ದೃಢಪಡಿಸುತ್ತದೆ.
Un caso grave de VS con más de 250 lesiones y sobre infección pic.twitter.com/Siy67Piza6
— Hiram Jerónimo☣️ (@JeronimoHiram) October 11, 2022
ನಮ್ಮ ತನಿಖೆಯ ಭಾಗವಾಗಿ, ನಾವು ಸಿಂಗಾಪುರದ ಆರೋಗ್ಯ ಸಚಿವಾಲಯದ ವೆಬ್ಸೈಟ್ ಅನ್ನು ನೋಡಿದ್ದೇವೆ ಮತ್ತು 22 ಆಗಸ್ಟ್ 2024 ರ ಹೊತ್ತಿಗೆ, 2024 ರಲ್ಲಿ 13 ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ ಎಂದು ಕಂಡುಕೊಂಡಿದ್ದೇವೆ. ಈ ಎಲ್ಲಾ ಪ್ರಕರಣಗಳು ಕಡಿಮೆ ತೀವ್ರತೆಯ ಕ್ಲೇಡ್ II ಪ್ರಕಾರದವು. ಇಲ್ಲಿಯವರೆಗೆ, ಸಿಂಗಾಪುರದಲ್ಲಿ ಹೆಚ್ಚು ಗಂಭೀರವಾದ ಕ್ಲೇಡ್ 1 ಪ್ರಕಾರದ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಮೆಕ್ಸಿಕೊದಲ್ಲಿ ಅಕ್ಟೋಬರ್ 2022 ರಿಂದ ತೀವ್ರವಾದ ಮಂಕಿಪಾಕ್ಸ್ ಪ್ರಕರಣವನ್ನು ತೋರಿಸುವ ವೈರಲ್ ಫೋಟೋವನ್ನು ಸಿಂಗಾಪುರದಲ್ಲಿ ಇತ್ತೀಚೆಗೆ 2024 ರ ಪೋಟೋ ಎಂದು ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ: ಪ್ಯಾಲೆಸ್ತೀನ್ ಅನ್ನು ಬ್ರಿಕ್ಸ್‌ಗೆ ಸೇರಿಸಲು ಭಾರತ ವಿರೋಧಿಸಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇ