ಸಾಮಾಜಿಕ ಜಾಲತಾಣದಲ್ಲಿ ” ಪ್ಯಾಲೆಸ್ತೀನ್ ಬ್ರಿಕ್ಸ್‌ಗೆ ಸೇರುವ ಇಂಗಿತವನ್ನು ವ್ಯಕ್ತ ಪಡಿಸಿದೆ. ಇದಕ್ಕೆ ರಷ್ಯಾ ಮತ್ತು ಚೀನಾ ದೇಶಗಳು ಸಂಪೂರ್ಣವಾಗಿ ಬೆಂಬಲವನ್ನು ನೀಡಿವೆ. ಆದರೆ ಭಾರತ ಪ್ಯಾಲೆಸ್ತೀನ್ ಬ್ರಿಕ್ಸ್‌ಗೆ ಸೇರುವುದನ್ನು ಇಷ್ಟ ಪಡದ ಕಾರಣ ಈಗ ಪ್ಯಾಲಿಸ್ತೀನ್‌ಗೆ ಸಂಕಷ್ಟ ಎದುರಾಗಿದೆ ಮತ್ತು ಪ್ಯಾಲೆಸ್ತೀನ್ ಅನ್ನು ಬಿಕ್ಸ್‌ಗೆ ಸೇರಿಸದಂತೆ ಭಾರತ ಮಾಡಿದ್ದ ಮನವಿಯನ್ನು ರಷ್ಯಾ ಮತ್ತು ಚೀನಾ ತಿರಸ್ಕರಿಸಿವೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ನಲ್ಲಿ ಹಲವರು ಕೇಂದ್ರ ಸರ್ಕಾರವನ್ನು ಕೂಡ ಟೀಕೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಪೋಸ್ಟ್‌ಗಳು ರಾಜಕೀಯವಾಗಿ ಚರ್ಚೆಯನ್ನು ಕೂಡ ಹುಟ್ಟು ಹಾಕಿದೆ.
INDIA asked BRICS to not include Palestine in BRICS but Russia and China rejected India's stance
One Word for India pic.twitter.com/IjDUdkhjnd
— Palestinian (@drrpalestine) August 26, 2024
ಇತ್ತೀಚೆಗಿನ ದಿನಗಳಲ್ಲಿ ಭಾರತ ಇಸ್ರೇಲ್ ಪರವಾದ ನಿಲುವುಗಳನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದು, ಇದು ಪ್ಯಾಲೆಸ್ತೀನ್‌ಗೆ ಕಂಟಕವಾಗುತ್ತಿದೆ ಎಂಬ ವಾದದ ನಡುವೆ, ಈ ರೀತಿಯ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುವ ಕಾರಣ ಹಲವರು ಇದು ನಿಜವೆಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಇದು ಭಾರತ ಸರ್ಕಾರದ ಮುಸ್ಲಿಂ ವಿರೋಧಿ ನೀತಿ ಎಂದು ವಿಮರ್ಶೆ ಮಾಡಿ ಭಾರತವನ್ನು ಟೀಕಿಸುತ್ತಿದ್ದಾರೆ. ಇದು ಭಾರತೀಯರ ಆಕ್ರೋಶಕ್ಕೆ ಕೂಡ ಕಾರಣವಾಗುತ್ತಿದೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್‌ನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
INDIA asked BRICS to not include Palestine in BRICS but Russia and China rejected India's stance. pic.twitter.com/vPipmr9oWs
— Md.Majharul Islam (@majharul_m38317) August 26, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ವಿವಿಧ ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ಬ್ರಿಕ್ಸ್‌ಗೆ ಸೇರುವ ಪ್ಯಾಲೆಸ್ತೀನ್ ಪ್ರಯತ್ನದ ವಿರುದ್ಧ ಭಾರತ ನಿಲುವು ಹೊಂದಿದೆ ಎಂಬುದಕ್ಕೆ ಯಾವುದೇ ರೀತಿಯಾದ ವರದಿಗಳು ಕಂಡು ಬಂದಿಲ್ಲ. ಒಂದು ವೇಳೆ ವೈರಲ್ ಪೋಸ್ಟ್ ನಿಜವೆ ಆಗಿದ್ದರೆ ವರದಿಗಳು ಪ್ರಕಟಗೊಳ್ಳುಬೇಕಿತ್ತು. ಆದರೆ ಅಂತಹ ಯಾವುದೇ ಮಾಹಿತಿಗಳು ಇಲ್ಲಿ ಲಭ್ಯವಾಗಿಲ್ಲ.
ಹೀಗಾಗಿ ಹೆಚ್ಚಿನ ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ 12 ಜೂನ್ 2024ರಂದು ದಿ ಎಕನಾಮಿಕ್ಸ್ ಟೈಮ್ಸ್ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಈ ವರದಿಯ ಪ್ರಕಾರ ಇತರೆ ಬಿಕ್ಸ್ ದೇಶಗಳ ಸದಸ್ಯರೊಂದಿಗೆ ಭಾರತವು ಜಂಟಿ ಹೇಳಿಕೆಯಲ್ಲಿ ಗಾಜಾದಲ್ಲಿ ಇಸ್ರೇಲ್‌ನ ಮಿಲಿಟರಿ ಕ್ರಮಗಳನ್ನು ಖಂಡಿಸಿದೆ ಎಂದು ಉಲ್ಲೇಖವಾಗಿರುವುದು ಕಂಡು ಬಂದಿದೆ. ಆದರೆ ಈ ವರದಿಯಲ್ಲಿ ಎಲ್ಲಿಯೂ ಭಾರತ ಇಸ್ರೇಲ್ ಪರವಾದ ನಿಲುವು ಹೊಂದಿದೆ ಮತ್ತು ಪ್ಯಾಲೆಸ್ತೀನ್‌ಗೆ ಎಲ್ಲಾ ರೀತಿಯ ನೆರವು ನೀಡುವುದನ್ನು ವಿರೋಧಿಸಿದ್ದು, ಪ್ಯಾಲೆಸ್ತೀನ್ ಬ್ರಿಕ್ಸ್‌ಗೆ ಸೇರುವುದನ್ನು ಭಾರತ ತಡೆಯುತ್ತಿದೆ ಎಂಬುದಕ್ಕೆ ಉಲ್ಲೇಖವಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ಪ್ಯಾಲೆಸ್ತೀನ್ ಬ್ರಿಕ್ಸ್‌ಗೆ ಸೇರುವ ಇಂಗಿತವನ್ನು ವ್ಯಕ್ತ ಪಡಿಸಿದರೂ ಭಾರತದ ವಿರೋಧದಿಂದಾಗಿ ಪ್ಯಾಲೆಸ್ತೀನ್‌ಗೆ ಬ್ರಿಕ್ಸ್ ಸೇರಲು ಸಾಧ್ಯವಾಗಿಲ್ಲ ಎಂಬುದು ಸುಳ್ಳು. ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಯಾವುದೇ ರೀತಿಯಾದ ಪುರಾವೆಗಳು ಸಿಕ್ಕಿಲ್ಲ. ಹಾಗಾಗಿ ವೈರಲ್ ಪೋಸ್ಟ್ ಅನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : Fact Check: ಬಾಂಗ್ಲಾದೇಶದ ಪ್ರವಾಹ ಎಂದು ಎಐ-ರಚಿಸಿದ ಚಿತ್ರಗಳ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.