” 7 ಪಾಕಿಸ್ತಾನಿಗಳು ಸೌದಿ ಅರೇಬಿಯಾದಲ್ಲಿ 16 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದಿದ್ದಾರೆ. ಮರುದಿನ ಅವರನ್ನು ಹಿಡಿಯಲಾಯಿತು ಮತ್ತು ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತು. ಶಿಕ್ಷೆಯ ವೀಡಿಯೋ ತೆಗೆದು ಇತರರಿಗೆ ಜಾಗೃತಿ ಮೂಡಿಸಲು ಪ್ರಸಾರ ಮಾಡಲಾಗಿತ್ತು. ಇದು ನ್ಯಾಯ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಲವರು ಈ ರೀತಿಯಾದ ಶಿಕ್ಷೆಗಳು ಭಾರತದಲ್ಲಿ ಕೂಡ ಜಾರಿಯಾಗಬೇಕು ಎಂದು ಕೂಡ ಆಗ್ರಹಿಸುತ್ತಿದ್ದಾರೆ.
*सऊदी अरब में सात पाकिस्तानी ने एक 16 वर्षीय लड़की के साथ बलात्कार किया और उसकी हत्या कर दी। अगले दिन, उन्होंने उन सभी को गिरफ्तार कर लिया गया। उन्हें अदालत में पेश किया गया। अदालत ने उनके सिर काटने और दूसरों को देखने के लिए वीडियो जारी करने का आदेश दिया…. इसे कहते हैं न्याय। pic.twitter.com/6cxnSEos1F
— Naeem farhazz (@NaeemFarhazz) August 26, 2024
ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಹಲವರು ವಿವಿಧ ಟಿಪ್ಪಣಿಗಳೊಂದಿಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹಲವರು ಈ ವಿಡಿಯೋವನ್ನು ಗಮನಿಸಿ, ಇದು ಸೌದಿ ಅರೇಬಿಯಾಗೆ ಸಂಬಂಧ ಪಟ್ಟ ವಿಡಿಯೋವಲ್ಲ ಎಂದು ಕೂಡ ಕಮೆಂಟ್ ಮಾಡುತ್ತಿದ್ದಾರೆ. ಹೀಗೆ ವಿವಿಧ ಅಭಿಪ್ರಾಯಗಳೊಂದಿಗೆ ಹಂಚಿಯಾಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
सऊदी अरब में सात पाकिस्तानी ने एक 16 वर्षीय लड़की के साथ बलात्कार किया और उसकी हत्या कर दी। अगले दिन, उन्होंने उन सभी को गिरफ्तार कर लिया और उन्हें अदालत में पेश किया। अदालत ने उनका सिर काटने और दूसरों को देखने के लिए वीडियो जारी करने का आदेश दिया इसे कहते हैं न्याय।
— Aftab official IYI AIMIM 🇮🇳 (@AftabIndian3) August 24, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಶೇರ್ ಮಾಡಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧ ಪಟ್ಟಂತೆ ವಿವಿಧ ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 30 ಸೆಪ್ಟೆಂಬರ್ 2015ರಂದು ಅಲ್-ಅಲಾಮ್ ಎಂಬ ವೆಬ್‌ತಾಣ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಈ ವರದಿಯ ಪ್ರಕಾರ ಈ ರೀತಿಯ ಸಮೂಹಿಕ ಹತ್ಯೆ ಪ್ರಕರಣ ಸೌದಿ ಅರೇಬಿಯಾದಲ್ಲಿ ನಡೆದೇ ಇಲ್ಲ ಎಂಬುದು ತಿಳಿದು ಬಂದಿದೆ.
ಸಂಪೂರ್ಣ ವರದಿಯನ್ನು ಪರಿಶೀಲಿಸಿದಾಗ “ಐಸಿಸ್ ಭಯೋತ್ಪಾದಕ ಗುಂಪು ಪೇಶ್ಮೆರ್ಗಾ ಪಡೆಗಳಿಗಾಗಿ ಬೇಹುಗಾರಿಕೆ ಮಾಡುವ ನೆಪದಲ್ಲಿ 16 ಇರಾಕಿ ಯುವಕರು ಸಿಕ್ಕಿಬಿದ್ದಿದ್ದರು. ಈಗ ಅವರ ಶಿರಶ್ಚೇದ ಮಾಡಲಾಗಿದ್ದು, ಈ ಹೀನ ಕೃತ್ಯದ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.” ಎಂದು ಈ ವರದಿಯಲ್ಲಿ ಉಲ್ಲೇಖವಾಗಿರುವುದು ಕಂಡು ಬಂದಿದೆ. ಕೇವಲ ಇಷ್ಟು ಮಾತ್ರವಲ್ಲ ಈ ವಿಡಿಯೋದಲ್ಲಿ ಐಸಿಸ್ ಉಗ್ರರು ಧರಿಸಿದ ಬಟ್ಟೆಗಳಿಗೆ ಹಾಗೂ ವಿವಿಧ ಪ್ರಕರಣಗಳಲ್ಲಿ ಅಮಾಯಕರನ್ನು ಕೊಂದಿರುವ ವಿಡಿಯೋಗಳಲ್ಲಿನ ಪೋಷಾಕುಗಳಿಗೆ ಕೂಡ ಹೊಂದಿಕೆಯಾಗಿರುವುದು ಕಂಡು ಬಂದಿದೆ. ಇದೇ ರೀತಿಯ ಪ್ರಕರಣಗಳು ಈ ಹಿಂದೆಯೂ ನಡೆದಿರುವ ಕುರಿತು ಕೆಲವೊಂದು ವರದಿಗಳಲ್ಲಿ ಉಲ್ಲೇಖವಾಗಿದೆ
ಇನ್ನು ವೈರಲ್ ವಿಡಿಯೋದೊಂದಿಗೆ ಹಂಚಿಕೊಳ್ಳಲಾದ ರೀತಿ 16 ವರ್ಷದ ಬಾಲಕಿಯನ್ನು ಏಳು ಮಂದಿ ಪಾಕಿಸ್ತಾನಿಗಳು ಅತ್ಯಾಚಾರ ಮಾಡಿ ಕೊಂದ ಹಿನ್ನೆಲೆ ಸೌದಿಯಲ್ಲಿ ಗಲ್ಲಿಗೇರಿಸಿರುವುದು ನಿಜವೆ ಎಂದು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹಲವು ವರದಿಗಳಿಗಾಗಿ ಪರಿಶೀಲನೆಯನ್ನು ನಡೆಸಲಾಯಿತು. ಆದರೆ ಆ ರೀತಿಯ ಯಾವುದೇ ವರದಿಗಳು ಕಂಡು ಬಂದಿಲ್ಲ. ಒಂದು ವೇಳೆ ಇದೇ ಕಾರಣಕ್ಕಾಗಿ ಘಟನೆ ನಡೆದಿದ್ದು ನಿಜವಾಗಿದ್ದರೆ, ಪಾಕಿಸ್ತಾನದ ಮಾಧ್ಯಮಗಳಾದರು ಈ ಕುರಿತು ವರದಿ ಮಾಡಬೇಕಿತ್ತು. ಆದರೆ ಆ ರೀತಿಯ ಯಾವುದೇ ವರದಿಗಳು ಕಂಡು ಬಾರದ ಕಾರಣ ವೈರಲ್ ಸುದ್ದಿ ನಂಬಲು ಅರ್ಹವಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಸೌದಿ ಅರೇಬಿಯದಲ್ಲಿ 16 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ಕಾರಣಕ್ಕಾಗಿ 7 ಮಂದಿಯನ್ನು ತಲೆಕಡಿದು ಕೊಲ್ಲುವ ಶಿಕ್ಷೆಯನ್ನು ನೀಡಲಾಯಿತು ಎಂಬುದು ಸುಳ್ಳು. ಅದಕ್ಕೆ ಸಂಬಂಧ ಪಟ್ಟಂತೆ ಯಾವುದೇ ರೀತಿಯಾದ ವರದಿಗಳು ಇದುವರೆಗೂ ಕಂಡು ಬಂದಿಲ್ಲ. ವೈರಲ್ ಪೋಸ್ಟ್ ಐಸಿಸ್ ಉಗ್ರರು ನಡೆಸಿದ ಹತ್ಯಾಕಾಂಡಕ್ಕೆ ಸಂಬಂಧ ಪಟ್ಟಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : Fact Check| ಗಾಜಾದಲ್ಲಿ ಹಮಾಸ್ ನಿರ್ಮಿಸಿದ ಸುರಂಗ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಹಂಗೇರಿಯದ್ದು!
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ