ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ಸದಾ ದ್ವೇಷ ಹರಡಲು ಯತ್ನಿಸುವ ಸುದರ್ಶನ್ ಟಿವಿ ಸಂಸ್ಥಾಪಕ ಸುರೇಶ್ ಚವ್ಹಾಂಕೆ ಮತ್ತೊಮ್ಮೆ ಅಂತಹುದ್ದೇ ವಿಡಿಯೋವೊಂದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರಿಂದ ಮತ್ತೊಮ್ಮೆ ಪಾಠ ಹೇಳಿಸಿಕೊಂಡಿದ್ದಾರೆ.
ಚಿಕ್ಕ ಹುಡುಗರು ರೈಲು ಹಳಿಯನ್ನು ಧ್ವಂಸಗೊಳಿಸುವ/ ಕಳ್ಳತನ ಮಾಡಲು ಯತ್ನಿಸುತ್ತಿರುವ ವಿಡಿಯೋ ಹಂಚಿಕೊಂಡಿರುವ ಚವ್ಹಾಂಕೆ,
“ಈ ವಯಸ್ಸಿನಲ್ಲಿ ಇವರು ರೈಲ್ವೆ ಹಳಿಗಳನ್ನು ಅಗೆಯುತ್ತಿದ್ದಾರೆ. ಮುಂದಿನ 50 ವರ್ಷಗಳಲ್ಲಿ ಇವರು ಏನು ಮಾಡಬಹುದೆಂದು ಯೋಚಿಸಿ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಇವರ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಸರ್ಕಾರ ಓದಿ ಅರ್ಥ ಮಾಡಿಕೊಳ್ಳಬೇಕು. ಕೇವಲ ಇವರ ಹೆಸರನ್ನು ಜಪಿಸುವುದರಿಂದ ಏನೂ ಸಾಧಿಸಲಾಗುವುದಿಲ್ಲ. @Ashwini Vaishnawಸರ್, ಇಂತಹ ಚಟುವಟಿಕೆಗಳನ್ನು ನೋಡಿದ ತಕ್ಷಣ, @RPF_INDIAಗೆ ಗುಂಡಿಟ್ಟು ಕೊಲ್ಲಲು ಆದೇಶ ನೀಡಿ, ಆಗ ಮಾತ್ರ ಸ್ವಲ್ಪ ಭಯ ಹುಟ್ಟಿಕೊಳ್ಳಬಹುದು.” ಎಂದು ಎಕ್ಸ್ ಖಾತೆಯಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ದ್ವೇಷಪೂರಿತ ಸಂದೇಶ ಹಂಚಿಕೊಂಡಿದ್ದಾರೆ.
ಇದೇರೀತಿ, ಎಕ್ಸ್‌ಸೆಕ್ಯೂಲರ್ ಎಂಬ ಎಕ್ಸ್ ಖಾತೆಯಲ್ಲಿ ಇದೇ ವಿಡಿಯೋವನ್ನು ಹಂಚಿಕೊಂಡಿದ್ದು,
“ಈ ವೀಡಿಯೊ ಎಲ್ಲಿಯದು ಎಂದು ಗೊತ್ತಿಲ್ಲ, ಆದರೆ ನೀವು ಈ ಹಂದಿ ಮರಿಗಳನ್ನು ಅವುಗಳ ಬಟ್ಟೆಯಿಂದ ಗುರುತಿಸಬಹುದು. @RailMinIndia @AshwiniVaishnaw ಸರ್, ರೈಲ್ವೇ ಹಳಿಯ ಬಳಿ ಇರುವ ಸ್ಲಮ್‌ಗಳಲ್ಲಿ ವಾಸಿಸುವ ಎಲ್ಲಾ ಮುಸ್ಲಿಮರನ್ನು ತೆರವುಗೊಳಿಸಬೇಕು, ಇಲ್ಲದಿದ್ದರೆ ಈ ಜಿಹಾದಿಗಳು ಒಂದು ದಿನ ದೊಡ್ಡ ಕೋಲಾಹಲ ಸೃಷ್ಟಿಸುತ್ತಾರೆ.” ಎಂದು ಮುಸ್ಲಿಮರನ್ನು ಗುರಿಯಾಗಿಸಿ ಟ್ವೀಟ್ ಮಾಡಿದ್ದಾರೆ.
ಫ್ಯಾಕ್ಟ್‌ಚೆಕ್:
ಚಿಕ್ಕ ಹುಡುಗರು ರೈಲ್ವೇ ಹಳಿಗಳನ್ನು ಧ್ವಂಸಗೊಳಿಸುವುದು ಅಥವಾ ಕಳ್ಳತನದಲ್ಲಿ ತೊಡಗಿರುವುದನ್ನು ತೋರಿಸುವ ವಿಡಿಯೋ ದೃಶ್ಯಗಳು ಭಾರತದಲ್ಲಿ ನಡೆದುದಲ್ಲ ಬದಲಾಗಿ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ ಎಂದು ಸತ್ಯಶೋಧಕ ಸಂಸ್ಥೆ ದಿ ಇಂಟೆಂಟ್ ಡಾಟಾ ವರದಿ ಮಾಡಿದೆ.
ಪಾಕಿಸ್ತಾನದ ಕರಾಚಿಯಲ್ಲಿ 2023ರಲ್ಲಿ ನಡೆದ ವಿಡಿಯೋ ಎಂಬುದಾಗಿ ದಿ ಇಂಟೆಂಟ್ ಡಾಟಾ ಪುಷ್ಠಿಕರಿಸಿದೆ.
2023ರ ಡಿಸೆಂಬರ್ 5ರಂದು ಪಾಕಿಸ್ತಾನಿ ಟ್ರೈನ್ಸ್ ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸರ್ತಾಜ್ ಖಾನ್ ಪಾಠಕ್ ಬೋಟ್ ಬಾಸಿನ್ ಚೌಕಿಯಲ್ಲಿ ಬಾಲಕರು ರೈಲ್ವೆ ಹಳಿಗಳಲ್ಲಿ ಭಾರೀ ಮೌಲ್ಯದ ವಸ್ತುಗಳ ಕಳ್ಳತನ ನಡೆಯುತ್ತಿದೆ ಎಂದು ಉಲ್ಲೇಖಿಸಿದೆ.
अरे नफरती कीड़े यह पाकिस्तान का वीडियो है अपने आप को पत्रकार कहता पहले इसकी सत्यता तो जांच लेता है या नफरत में इतना अंधा हो चुका है कि आंखों और दिमाग में मोतियाबिंद हो गया है
— Rajendra kumar saini🇮🇳 (@Rajendr2014) August 30, 2024
“ಏ.. ದ್ವೇಷಪೂರಿತ ಹುಳವೇ, ನಿನ್ನನ್ನು ನೀನು ಪತ್ರಕರ್ತ ಅನ್ನುತ್ತಿಯಾ? ಪರ್ತಕರ್ತನಾದವ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಾನೆ. ಅದನ್ನು ನೀನು ಮೊದಲು ಕಲಿ. ನಿನ್ನ ಕಣ್ಣು ಮತ್ತು ಮನಸ್ಸಿನಲ್ಲಿ ಪೊರೆ ಬೆಳೆದಿದೆಯಾ?” ಎಂದು ಸಾಮಾಜಿಕ ಜಾಲತಾಣದಲ್ಲಿ ಸುರೇಶ್ ಚವ್ಹಾಂಕೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದು ಪಾಕಿಸ್ತಾನದ ವೀಡಿಯೋ ಆಗಿದ್ದು, ದ್ವೇಷ ಹರಡುವುದನ್ನು ನಿಲ್ಲಿಸಿ ಎಂದಿದ್ದಾರೆ.
ಇದನ್ನು ಓದಿದ್ದೀರಾ? Fact Check| ಗಾಜಾದಲ್ಲಿ ಹಮಾಸ್ ನಿರ್ಮಿಸಿದ ಸುರಂಗ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಹಂಗೇರಿಯದ್ದು!
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.