Fact Check: ಇಂಡೋನೇಷ್ಯಾದಲ್ಲಿ RSS ಇಲ್ಲದ ಕಾರಣ ಅಲ್ಲಿ ಕೋಮುಗಲಭೆ ಇಲ್ಲ ಎಂದು ನಟ ಪ್ರಕಾಶ್ ರಾಜ್ ಹೇಳಿಕೆ ನೀಡಿಲ್ಲ

ಪ್ರಕಾಶ್ ರಾಜ್

ಕಳೆದ ಅನೇಕ ವರ್ಷಗಳಿಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳುವಳಿಯಲ್ಲಿ ತನ್ನನ್ನು ತಾನು ಹೆಚ್ಚು ತೊಡಗಿಸಿಕೊಳ್ಳುತ್ತಿರುವ ನಟ ಪ್ರಕಾಶ್‌ ರಾಜ್ ಅವರು ರಾಜಕೀಯ ವಿಶ್ಞೇಷಕರು ಸಹ ಆಗಿದ್ದಾರೆ. ಕೇಂದ್ರ ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಆಗಾಗ ತಮ್ಮ ಮೊನಚಾದ ಮೂತುಗಳಿಂದ ತಿವಿಯುತ್ತಿರುತ್ತಾರೆ. ಹೀಗಾಗಿ ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳ ಬೆಂಗಲಿಗರ ಕೆಂಗಣ್ಣಿಗೆ ಸಹ ಇವರು ಗುರಿಯಾಗಿದ್ದಾರೆ.

ಈಗ, “ಇಂಡೋನೇಷ್ಯಾದಲ್ಲಿ ಶೇ.90ರಷ್ಟು ಮುಸ್ಲಿಮರು ಮತ್ತು ಶೇ.2ರಷ್ಟು ಹಿಂದೂಗಳಿರುವ ದೇಶದಲ್ಲಿ 11,000 ದೇವಾಲಯಗಳಿವೆ, ಆದರೆ ಅಲ್ಲಿ ಯಾವುದೇ ಗಲಭೆಗಳ ಬಗ್ಗೆ ಕೇಳಿಲ್ಲ, ಏಕೆಂದರೆ ಅಲ್ಲಿ ಆರ್‌ಎಸ್‌ಎಸ್‌ ಇಲ್ಲ” ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ ಎಂಬ ಪೋಸ್ಟರ್ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. 


ಮೇಲಿನ ಪೋಸ್ಟ್ ಅನ್ನು ಇಲ್ಲಿ ಪರಿಶೀಲಿಸಿ (ಆರ್ಕೈವ್)

ಫ್ಯಾಕ್ಟ್ ಚೆಕ್:

ಕನ್ನಡ ಫ್ಯಾಕ್ಟ್‌ ಚೆಕ್ ತಂಡ ಈ ಹೇಳಿಕೆಯನ್ನು ಪರಿಶೀಲಿಸಿದಾಗ, ನಟ ಪ್ರಕಾಶ್‌ ರೈ ಅವರು ಇತ್ತೀಚೆಗೆ ಇಂತಹ ಯಾವುದೇ ಹೇಳಿಕೆ ನೀಡಿರುವುದು ವರದಿಯಾಗಿಲ್ಲ.

‘ಇಂಡೋನೇಷ್ಯಾ-ಆರ್‌ಎಸ್‌ಎಸ್‌’ ಬಗ್ಗೆ ಪ್ರಕಾಶ್‌ ರಾಜ್‌ ಹೇಳಿಕೆಗೆ ಸಂಬಂಧಿಸಿದಂತೆ ಗೂಗಲ್‌ನಲ್ಲಿ ಕೀವರ್ಡ್‌ಗಳೊಂದಿಗೆ ಹುಡುಕಿದಾಗ, ಪ್ರಕಾಶ್ ರಾಜ್‌ ಅವರು ಅಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸೂಚಿಸುವ ಯಾವುದೇ ವರದಿ ನಮ್ಮ ತಂಡಕ್ಕೆ ಲಭ್ಯವಾಗಿಲ್ಲ.

ಇದಲ್ಲದೆ, ಆಗಸ್ಟ್ 26, 2024 ರಂದು, ನಟ ಪ್ರಕಾಶ್ ರಾಜ್‌ ಅವರು ತನ್ನ ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ವೈರಲ್ ಪ್ರತಿಪಾದನೆಯನ್ನು ಉದ್ದೇಶಿಸಿ ಮಾತನಾಡಿದರು. ಅದೇ ವೈರಲ್ ಹೇಳಿಕೆಯನ್ನು ಪುನರಾವರ್ತಿಸಿದ ಮೇಘ್ ಅಪ್ಡೇಟ್ಸ್‌ನ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪ್ರಕಾಶ್ ಅವರು, ಈ ಹೇಳಿಕೆಯನ್ನು ನಾನು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

“ಅದು ನೀನೇ ಆಗಿದ್ದರೆ @MeghUpdates. ಅಥವಾ ಇದನ್ನು ಯಾರು ಸೃಷ್ಟಿಸಿದ್ದಾರೆ.. ಅದನ್ನು ತನ್ನದಾಗಿಸಿಕೊಳ್ಳಿ. ಇದು ನನ್ನ ಹೇಳಿಕೆಯಲ್ಲ, ನಿಮ್ಮ ಹೇಳಿಕೆಗಳನ್ನು ನನ್ನ ಹೆಸರಿನಲ್ಲಿ #justasking ಹಾಕಬೇಡಿ” ಎಂದು ಪ್ರಕಾಶ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

Megh Updates ಕೋಮು ದ್ವೇಷ ಹರಡುವ ಒಂದು ಬಲಪಂಥೀಯ ಎಕ್ಸ್‌(ಟ್ವಿಟರ್‌) ಖಾತೆಯಾಗಿದ್ದು ಈ ಹಿಂದೆ ಸಾಕಷ್ಟು ಸುಳ್ಳು ಸುದ್ದಿಗಳನ್ನು, ದ್ವೇಷ ಭಾಷಣಗಳನ್ನು ಮತ್ತು ಎಡಿಟ್‌ ಮಾಡಲಾಗ ವೀಡಿಯೋಗಳನ್ನು ಹಂಚಿಕೊಂಡು ಸಿಕ್ಕಿಬಿದ್ದಿದೆ. ಕನ್ನಡ ಫ್ಯಾಕ್ಟ್‌ ಚೆಕ್ ತಂಡವೇ ಈ ಖಾತೆ ಹಂಚಿಕೊಳ್ಳುವ ಅನೇಕ ಸುಳ್ಳುಗಳನ್ನು ಸತ್ಯಶೋಧನೆ ನಡೆಸಿ ಬಯಲಗೊಳಿಸಿದೆ.

ಹೀಗಾಗಿ, ಪ್ರಕಾಶ್ ರಾಜ್‌ ಅಂತಹ ಯಾವುದೇ ಹೇಳಿಕೆ ನೀಡದ ಕಾರಣ, ವೈರಲ್ ಹೇಳಿಕೆ ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದು ತೀರ್ಮಾನಿಸಬಹುದು.


ಇದನ್ನು ಓದಿ: ರೈಲ್ವೆ ಹಳಿಗಳಲ್ಲಿ ಮುಸ್ಲಿಮ್ ಹುಡುಗರು ಕಳ್ಳತನ ಮಾಡುತ್ತಿದ್ದಾರೆ ಎಂದು ಸುರೇಶ್ ಚವ್ಹಾಂಕೆ ಹಂಚಿಕೊಂಡ ವಿಡಿಯೋ ಪಾಕಿಸ್ತಾನದ್ದು!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *