ತೀವ್ರವಾಗಿ ಗಾಯಗೊಂಡ ವ್ಯಕ್ತಿಯು ನೆಲದ ಮೇಲೆ ಮಲಗಿರುವ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಟೋವನ್ನು ಹಿಂದೂ ದೇವತೆ ಸೀತೆಯ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಹರಿಯಾಣದ ಮೇವಾತ್ನ ಮುಸ್ಲಿಂ ವ್ಯಕ್ತಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಹಂಚಿಕೊಳ್ಳುವವರು ಹೇಳಿದ್ದಾರೆ.
ಪೋಸ್ಟ್ ಹಿಂಸಾತ್ಮಕ ಸ್ವರೂಪದಿಂದ ಇರುವುದರಿಂದ ನಾವು ಅದರ ಆರ್ಕೈವ್ ಅನ್ನು ಸೇರಿಸುವುದನ್ನು ತಪ್ಪಿಸಿದ್ದೇವೆ.

ಫ್ಯಾಕ್ಟ್ ಚೆಕ್:
ವೈರಲ್ ಹೇಳಿಕೆ ಸುಳ್ಳಾಗಿದ್ದು, ಈ ಘಟನೆ 2022 ರಲ್ಲಿ ಕರ್ನಾಟಕದ ಚಿತ್ರದುರ್ಗದಲ್ಲಿ ಹಲ್ಲೆಗೊಳಗಾದ ಮುಸ್ಲಿಂ ವ್ಯಕ್ತಿಯನ್ನು ತೋರಿಸುತ್ತದೆ. ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ನಾವು ಚಿತ್ರದ ಮೇಲೆ ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ 2022 ರಿಂದ @MdFurkanIdris ಎಂಬ ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರ ಪೋಸ್ಟ್ ಅನ್ನು ಕಂಡುಕೊಂಡಿದ್ದೇವೆ.
ಅವರು, “ಚಿತ್ರದುರ್ಗದ ಸಮೀವುಲ್ಲಾ (38) ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಅವರು ವಕ್ಫ್ ಸಮಿತಿಯಿಂದ ನೇಮಕಗೊಂಡ ಜಾಮಾ ಮಸೀದಿ ಆಲೂರಿನ ಉಸ್ತುವಾರಿಯಾಗಿದ್ದಾರೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಮಗ್ರಿಬ್ ನಮಾಜ್ ಮುಗಿಸಿ ಹಿಂದಿರುಗುತ್ತಿದ್ದಾಗ ನೂತನ್ ಗೌಡ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.” ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
.png?auto=format%2Ccompress&fmt=webp&width=720)
ಸಮೀವುಲ್ಲಾ ಆಲೂರು ಜಾಮಾ ಮಸೀದಿಯ ಉಸ್ತುವಾರಿ ವಹಿಸಿದ್ದರು ಎಂದು ಅವರು ಹೇಳಿದ್ದಾರೆ.
ನಾವು ಈ ಬಗ್ಗೆ ಪೊಲೀಸ್ ವರದಿಗಳನ್ನು ಹುಡುಕಿದಾಗ 2022 ರಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸರು ಎಕ್ಸ್ ನಲ್ಲಿ ಮಾಡಿದ ಪೋಸ್ಟ್ ಅನ್ನು ಕಂಡುಕೊಂಡಿದ್ದೇವೆ.
22 ವರ್ಷದ ನೂತನ್ ಚಿತ್ರದುರ್ಗದಲ್ಲಿ ಸಮೀವುಲ್ಲಾಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಅವರು ಬರೆದಿದ್ದಾರೆ. ಸಂತ್ರಸ್ತನಿಗೆ ಸ್ಥಳೀಯ ಸೌಲಭ್ಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
On 02nd July 2022 a boy by name Nuthan(22)Stabbed to Samiulla at Alur village, Hiriyur Tq, Chitradurga Dist,
Injured Samiulla is being treated at Basaveshwara Medicle collage&hospital Chitradurga and he is out of danger.@DgpKarnataka @alokkumar6994 @igperdvg @ParashuramaKal1— Chitradurga District Police (@DistrictPolice1) July 3, 2022
ಸ್ಥಳೀಯ ಕನ್ನಡ ವಾಹಿನಿಗಳಾದ ಪಬ್ಲಿಕ್ ಟಿವಿ ಮತ್ತು ಆರ್ಡಿ ನ್ಯೂಸ್ ಕೂಡ 2022 ರಲ್ಲಿ ಈ ಘಟನೆಯನ್ನು ವರದಿ ಮಾಡಿವೆ. 2022 ರಲ್ಲಿ, ಈ ಘಟನೆಯು ಕೋಮು ಸ್ವರೂಪದ್ದಾಗಿದೆ ಎಂದು ಹೇಳಲಾಗಿತ್ತು, ಏಕೆಂದರೆ ಸಂಘಪರಿವಾರದ(ಆರ್ಎಸ್ಎಸ್) ನೂತನ್ ಯಾವುದೇ ವೈಯಕ್ತಿಕ ದ್ವೇಷ ಅಥವಾ ಮನಸ್ಥಾಪ ಇಲ್ಲದಿದ್ದರೂ ಮಸೀದಿಯ ಉಸ್ತುವಾರಿಯೊಬ್ಬನ ಕೊಲೆಗೆ ಪ್ರಯತ್ನಿಸಿದ್ದಾನೆ. ಆದರೆ ಪೊಲೀಸರು ಈ ಆರೋಪಗಳನ್ನು ನಿರಾಕರಿಸಿದರು. ಮಿರರ್ ನೌ ವರದಿಯ ಪ್ರಕಾರ, ಪೊಲೀಸರು ಕೋಮು ಆರೋಪಗಳನ್ನು ನಿರಾಕರಿಸಿದ್ದರು.
ಆದ್ದರಿಂದ ಕರ್ನಾಟಕದ ಹಳೆಯ ಘಟನೆಯನ್ನು ಹರಿಯಾಣದಲ್ಲಿ ನಡೆದ ಇತ್ತೀಚಿನ ಘಟನೆ ಎಂದು ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ: ಇಂಡೋನೇಷ್ಯಾದಲ್ಲಿ RSS ಇಲ್ಲದ ಕಾರಣ ಅಲ್ಲಿ ಕೋಮುಗಲಭೆ ಇಲ್ಲ ಎಂದು ನಟ ಪ್ರಕಾಶ್ ರಾಜ್ ಹೇಳಿಕೆ ನೀಡಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.