ಉತ್ತರಾಖಂಡದಲ್ಲಿ 2000 ಇಸವಿಯಲ್ಲಿ ಶೇಕಡಾ 1.5ರಷ್ಟಿದ್ದ ಮುಸ್ಲಿಮರ ಜನಸಂಖ್ಯೆಯು 2024ರ ಹೊತ್ತಿಗೆ ಶೇಕಡಾ 16ರಷ್ಟು ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. “ಎಚ್ಚರಿಕೆಯ ಕರೆಗಂಟೆ” ಎಂದು ಮುಸ್ಲಿಮರನ್ನು ಗುರಿಯಾಗಿಸಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಳ್ಳಲಾಗುತ್ತಿದೆ.
Muslim Population in Uttarakhand
Year 2000 : 1.5%
Year 2024 : 16%You are not only blind but a traitor too if you are unable to see this. pic.twitter.com/SFCbWRBz5x
— Baba Banaras™ (@RealBababanaras) August 30, 2024
ಫ್ಯಾಕ್ಟ್‌ಚೆಕ್
24 ವರ್ಷಗಳಲ್ಲಿ ಉತ್ತರಾಖಂಡದಲ್ಲಿರುವ ಮುಸ್ಲಿಮರ ಸಂಖ್ಯೆ ಶೇಕಡಾ.1 ರಿಂದ ಶೇಕಡಾ 16ರಷ್ಟು ಏರಿಕೆಯಾಗಿದೆ ಎಂದು ಹಂಚಿಕೊಳ್ಳುತ್ತಿರುವ ಮಾಹಿತಿ ಸಂಪೂರ್ಣ ಸುಳ್ಳು.
ದಿ ಇಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಉತ್ತರಾಖಂಡದ ಮುಸ್ಲಿಂ ಜನಸಂಖ್ಯೆಯು 2001ರಲ್ಲಿ 11.9% ರಷ್ಟಿತ್ತು ಮತ್ತು 2011ರ ವೇಳೆಗೆ 13.9% ಕ್ಕೆ ಏರಿಕೆ ಆಗಿದೆ. ಅಂದರೆ ಹತ್ತು ವರ್ಷಗಳಲ್ಲಿ ಶೇ.2 ರಷ್ಟು ಏರಿಕೆಯಾಗಿದೆ. 2011ರ ಜನಗಣತಿಯ ಬಳಿಕ ಉತ್ತರಾಖಂಡದಲ್ಲಿ ಯಾವುದೇ ಧರ್ಮವಾರು ಜನಸಂಖ್ಯಾ ಜನಗಣತಿಗಳು ನಡೆದಿಲ್ಲ. ಹೀಗಾಗಿ 2024ರಲ್ಲಿ ಯಾವ ಧರ್ಮೀಯರ ಸಂಖ್ಯೆ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ.
“2001-11ರ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆಯಲ್ಲಿ ಶೇಕಡಾ 24 ರಷ್ಟು ಏರಿಕೆ” ಎಂಬ ಶೀರ್ಷಿಕೆಯಲ್ಲಿ 2015ರ ಜನವರಿ 22ರಂದು ದಿ ಇಕನಾಮಿಕ್ ಟೈಮ್ಸ್ ವರದಿ ಮಾಡಿದ್ದು, ಯಾವ ಯಾವ ರಾಜ್ಯಗಳಲ್ಲಿ ಮುಸ್ಲಿಮರ ಜನಸಂಖ್ಯೆ ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬ ಬಗ್ಗೆ ಜನಗಣತಿಯ ವರದಿಯನ್ನು ಆಧಾರವಾಗಿಸಿ ವಿಶ್ಲೇಷಣೆ ಮಾಡಿದೆ.
ಒಟ್ಟಾರೆಯಾಗಿ ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಮುಸ್ಲಿಮರನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಂಚಿಕೊಳ್ಳಲಾಗುತ್ತಿದೆ ಎಂದು ಸತ್ಯಶೋಧನಾ ಸಂಸ್ಥೆ ದಿ ಇಟೆಂಟ್ ಡಾಟಾ ವರದಿ ಮಾಡಿದೆ.