“ನಾನು ಹಿಂದೂಗಳ ದೊಡ್ಡ ಅಭಿಮಾನಿ ಮತ್ತು ಭಾರತ ದೇಶದ ದೊಡ್ಡ ಅಭಿಮಾನಿ” ಎಂದು ಅಮೇರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು 2024ರ ಯುಎಸ್ ಚುನಾವಣೆಗೆ ಮುಂಚಿತವಾಗಿ ರ್ಯಾಲಿಯಲ್ಲಿ ಹೇಳುತ್ತಿದ್ದಾರೆ.
ಫ್ಯಾಕ್ಟ್ ಚೆಕ್ :
ಈ ವೀಡೀಯೊದ ಕುರಿತು ನಾವು ಕೀಫ್ರೇಮ್‌ಗಳ ರಿವರ್ಸ್ ಇಮೇಜ್‌ನ ಹುಡುಕಾಟವನ್ನು ನಡೆಸಿದೆವು. ಈ ವೀಡೀಯೋವನ್ನು ಅಕ್ಟೋಬರ್ 16, 2016 ರಂದು ಫೇಸ್‌ಬುಕ್‌ನಲ್ಲಿ ANI ಪೋಸ್ಟ್‌ರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಯುಎಸ್ 2016ರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ರವರು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾಗ “ನಾನು ಹಿಂದೂಗಳ ಮತ್ತು ಭಾರತ ದೇಶದ ದೊಡ್ಡ ಅಭಿಮಾನಿ” ಎಂದು ಹೇಳಿದ್ದಾರೆ. ಭಾರತೀಯ ಸಮುದಾಯದವರು ಶ್ವೇತಭವನದಲ್ಲಿ ಪ್ರಾಮಾಣಿಕವಾದ ಸ್ನೇಹಿತರನ್ನು ಹೊಂದಿರುತ್ತಾರೆಂದು ವೈರಲ್ ವೀಡೀಯೊದಲ್ಲಿ ಸ್ಪಷ್ಟವಾಗಿ ಹಂಚಿಕೊಂಡಿದ್ದಾರೆ. ಇದೇ ರೀತಿಯ ವೀಡೀಯೊಗಳನ್ನು ಇಲ್ಲಿ ಮತ್ತು ಇಲ್ಲಿ ನೀವು ನೋಡಬಹುದು.
ಅಕ್ಟೋಬರ್ 16, 2016 ರ ದಿನಾಂಕದ ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ಟ್ರಂಪ್‌ರವರು ಆಗಿನ ಅಧ್ಯಕ್ಷೀಯ ಚುನಾವಣೆ ನಡೆಯುವ ದಿನಕ್ಕಿಂತ ಮೂರು ವಾರಗಳ ಮೊದಲು ಪ್ರಚಾರದ ವೇಳೆಯಲ್ಲಿ ಎನ್‌ಜೆಯ ಎಡಿಸನ್‌ನಲ್ಲಿರುವ ಕನ್ವೆನ್ಷನ್ ಸೆಂಟರ್‌ನಲ್ಲಿ ರಿಪಬ್ಲಿಕನ್ ಹಿಂದೂ ಒಕ್ಕೂಟದ ಪ್ರಯೋಜನಗಳ ಕುರಿತು ಮಾತನಾಡಿದ್ದರು ಎಂದು ವರದಿ ಮಾಡಿದೆ. ಚುನಾವಣೆಗೆ ಸಂಬಂಧಿಸಿದಂತೆ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ವೈರಲ್ ವೀಡಿಯೊವನ್ನು 2016ರಲ್ಲಿ ಹಂಚಿಕೊಳ್ಳಲಾಗಿದೆ ಎಂದು ನಿಖರವಾಗಿ ನಾವು ಹೇಳಬಹುದು.