Fact Check: ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕಿಯನ್ನು ಅವಮಾನಿಸಿದ್ದಾರೆ ಎಂಬ ವೀಡಿಯೊ ಸುಳ್ಳು

ಬಾಂಗ್ಲಾದೇಶ

ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕಿಯನ್ನು ಅವಮಾನಿಸಲಾಗಿದೆ ಎಂದು ಆರೋಪಿಸುವ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಕಥೆ-ನಾಯಕ-img

ಬಾಂಗ್ಲಾದೇಶದಲ್ಲಿ  ಹಿಂದೂ ಶಿಕ್ಷಕರಿಗೆ ರಾಜೀನಾಮೆಯನ್ನು ಕೊಡಿಸಿ ಸಾರ್ವಜನಿಕವಾಗಿ ಅವಮಾನ ಮಾಡುತ್ತಿದ್ದಾರೆ” ಎಂದು ಈ ವೀಡಿಯೊವನ್ನು ಎಕ್ಸ್‌ (ಟ್ವಿಟರ್‌) ನ ಬಳಕೆದಾರರಾದ ಸುನಂದಾ ರಾಯ್ ಮತ್ತು ಅಜಯ್ ಚೌಹಾಣ್ ರವರು ತಮ್ಮ ಪುಟಗಳಲ್ಲಿ ಹಂಚಿಕೊಂಡಿದ್ದಾರೆ.

ವೀಡಿಯೊದಲ್ಲಿರುವ ಮಹಿಳೆ ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಣೆಗಾಗಿ ಸಿಕ್ಕಿಬಿದ್ದಿದ್ದಾಳೆ.

ಫ್ಯಾಕ್ಟ್‌ ಚೆಕ್‌:

ಬಾಂಗ್ಲಾದೇಶದ ಪತ್ರಕರ್ತರಾದ  ಶೋಹನೂರ್ ರಹಮಾನ್‌,  ರವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ವೀಡಿಯೋದಲ್ಲಿರುವ ಮಹಿಳೆ ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿಬಿದ್ದಿದ್ದಳು ಎಂದು ತಿಳಿಸಿದ್ದಾರೆ. ಇದಲ್ಲದೆ, ವೇಶ್ಯಾವಾಟಿಕೆ ಮತ್ತು ಮಹಿಳಾ ಕಳ್ಳಸಾಗಣೆಯ ಆರೋಪದಲ್ಲಿ ಈ ವೀಡಿಯೊದಲ್ಲಿರುವ ಮಹಿಳೆ ಮತ್ತು ಕೆಲವರನ್ನು ಸಾರ್ವಜನಿಕವಾಗಿ ಹಿಡಿಯಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಘಟನೆಗೆ ಸಂಬಂಧಿಸಿ ರೆಹಮಾನ್ ರವರು  ಎರಡು ಫೇಸ್‌ಬುಕ್ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ “Body businessman, traffickers and extortionist arrested Maona Chowrasta Sripur, Gazipur.” ಎಂದು ಬರೆಯಲಾಗಿದೆ.

ವೀಡಿಯೊದಲ್ಲಿರುವ ಮಹಿಳೆ ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಣೆಗಾಗಿ ಸಿಕ್ಕಿಬಿದ್ದಿದ್ದಾಳೆ.

ವೀಡಿಯೊದಲ್ಲಿನ ಮಹಿಳೆಯ ಕೊರಳಲ್ಲಿ ಬಾಂಗ್ಲಾ ಭಾಷೆಯಲ್ಲಿ ” ನಾನು ಮಹಿಳೆಯರ ಕಳ್ಳ ಸಾಗಾಣಿಕೆ ಮಾಡುವವಳು” ಎಂಬ ಫಲಕವನ್ನು ಚಪ್ಪಲಿ ಹಾರದೊಂದಿಗೆ ಹಾಕಲಾಗಿದೆ.  ಈ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ತೆಗೆದು, ಕೆಲವು ಪೋಟೊಗಳನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಿದಾಗ ಆಗಸ್ಟ್‌ 17 ರಂದು ‘ ಬುರಿಗಂಗಾ ಟಿವಿ ‘ ಹೆಸರಿನ YouTube ಚಾನಲ್‌ನಲ್ಲಿ ಇದರ ಕುರಿತು   ಸುದೀರ್ಘ ವೀಡಿಯೊವೊಂದು ಲಭಿಸಿದೆ. ಈ ವೀಡಿಯೊದಲ್ಲಿ “ಛತ್ರ ದಾಲ್ ” ಎಂಬ ಹೆಸರನ್ನು ಬಳಸಿಕೊಂಡಿದ್ದಾರೆ. ಮಹಿಳೆಯ ಪಕ್ಕದಲ್ಲಿ ನಿಂತಿರುವ ವ್ಯಕ್ತಿಯ ಎದೆಯ ಮೇಲೆ ತೂಗೂ ಹಾಕಿದ್ದ ಬೋರ್ಡ್‌ನ ಫಲಕವನ್ನು ಬಂಗಾಳಿ ಭಾಷೆಯಲ್ಲಿ ಬರೆಯಲಾಗಿದೆ.  ಅದನ್ನು ನಾವು ಕನ್ನಡ ಭಾಷೆಗೆ ಭಾಷಾಂತರಿಸಿದಾಗ ‘ನಾನು ಮಹಿಳೆಯರ ಕಳ್ಳಸಾಗಣೆದಾರ’ ಎಂದು ತಿಳಿದು ಬರುತ್ತದೆ. ಇದನ್ನು ಫೇಸ್‌ಬುಕ್‌ನ ಪೋಸ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.

ವೀಡಿಯೊದಲ್ಲಿರುವ ಮಹಿಳೆ ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಣೆಗಾಗಿ ಸಿಕ್ಕಿಬಿದ್ದಿದ್ದಾಳೆ. ವೈರಲ್ ಪೊಲಾಪಿನ್  ಯೂಟ್ಯೂಬ್‌ ಚಾನೆಲ್‌ನಲ್ಲಿಯೂ ಕೂಡ ಈ ವೀಡಿಯೊವನ್ನು ಆಗಸ್ಟ್ 19 ರಂದು “Body businessman, traffickers and extortionist arrested Maona Chowrasta Sripur, Gazipur.” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ವೀಡಿಯೊದಲ್ಲಿರುವ ಮಹಿಳೆ ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಣೆಗಾಗಿ ಸಿಕ್ಕಿಬಿದ್ದಿದ್ದಾಳೆ.

ಆದ್ದರಿಂದ ಬಾಂಗ್ಲಾದೇಶದಲ್ಲಿನ ಜನರ ಸಮೂಹವು ಮಹಿಳೆಯನ್ನು ಥಳಿಸುವ  ವೀಡಿಯೊವನ್ನು ಹಿಂದೂ ಶಿಕ್ಷಕಿಯನ್ನು ಅವಮಾನಿಸುತ್ತಿರುವ ವೀಡಿಯೊ ಎಂದು ಕೋಮು ಆಯಾಮವನ್ನು ನೀಡಿ ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ.


ಇದನ್ನು ಓದಿದ್ದೀರಾ?


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

 

 

 

Leave a Reply

Your email address will not be published. Required fields are marked *