ವ್ಯಕ್ತಿಯೊಬ್ಬ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾನೆಂದು ಹಿಂದೂಗಳು ಅವನನ್ನು ದೊಣ್ಣೆ ಮತ್ತು ಲಾಠಿಗಳಿಂದ ನಿರಂತರವಾಗಿ ಹಲ್ಲೆ ನಡೆಸುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್:
ಈ ವೈರಲ್ ಆದ ವೀಡಿಯೊದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್‌ನ್ನು ಹುಡುಕಿದಾಗ, ಇದು 4 ಜುಲೈ 2022 ರಂದು X ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದು ತೆಲಂಗಾಣದ ಸಂಗಾರೆಡ್ಡಿಯಲ್ಲಿರುವ 26 ವರ್ಷದ ಬೀಗರಿ ನರೇಶ್ ಎಂಬ ವ್ಯಕ್ತಿಯ ಮೇಲೆ ನಡೆದ ದೈಹಿಕ ಹಲ್ಲೆಯನ್ನು ತೋರಿಸುತ್ತದೆ.
ಬೀಗರಿ ನರೇಶ್ ಎಂಬ ವ್ಯಕ್ತಿಯ ಹೆಸರು ಮತ್ತು ತೆಲಂಗಾಣದ ಸಂಗಾರೆಡ್ಡಿ ಎಂಬ ಸ್ಥಳವನ್ನು ಕೀವರ್ಡ್‌ಗಳನ್ನಾಗಿ ಬಳಸಿಕೊಂಡು ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, ಈ ಘಟನೆ ತೆಲಂಗಾಣ ರಾಜ್ಯದ ಚೆಲೆಮಾಮಿಡಿ ಎಂಬ ಗ್ರಾಮದಲ್ಲಿ ನಡೆದ ಘಟನೆಯಾಗಿದೆ. ಆ ಗ್ರಾಮದ “ವಿವಾಹೇತರ ಮಹಿಳೆಯೊಬ್ಬಳ ಜೊತೆಗೆ ಪುರುಷನೊಬ್ಬ ಅಕ್ರಮ ಸಂಬಂಧ ಹೊಂದಿದ್ದಾನೆ” ಎಂದು ಆರೋಪಿಸಿ ಆ ವ್ಯಕ್ತಿಯನ್ನು ಜನರು ದೊಣ್ಣೆಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ತೆಲಂಗಾಣ ಟುಡೇ ವರದಿಯನ್ನು ತಯಾರಿಸಿದೆ.
ಆ ವ್ಯಕ್ತಿಯ ಕುಟುಂಬದವರು ಈ ವಿಷಯವನ್ನು ತಿಳಿದು, ಅವನ ಸಹಾಯಕ್ಕೆ ಬಂದಾಗ ಅವರ ಮೇಲೆಯೂ ಸಹಿತ ಜನರು ಹಲ್ಲೆ ನಡೆಸಿದ್ದಾರೆ. ನರೇಶ್ ಮತ್ತು ಆತನ ಕುಟುಂಬವನ್ನು ಜಹೀರಾಬಾದ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿವಾಹಿತ ಮಹಿಳೆ ಮತ್ತು ಆಕೆಯ ಸಂಬಂಧಿಕರ ವಿರುದ್ಧ ಝರಸಂಗಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಯಾಸತ್ ಎಂಬ ವೆಬ್‌ಸೈಟ್ ವರದಿಯನ್ನು ತಯಾರಿಸಿದೆ. ಮತ್ತು ಈ ಘಟನೆಗೆ ಸಂಬಂಧಿಸಿದಂತೆ 11 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹಿಂದಿ ನ್ಯೂಸ್ ಪೋರ್ಟಲ್ ದಿ ಮೂಕ್ನಾಯಕ್ ವರದಿಯನ್ನು ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಲಾದ ಹಳೆಯ ವೀಡಿಯೊವನ್ನು ಸುಳ್ಳು ಕೋಮುವಾದಿ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿದ್ದೀರಾ?