“ಇದೇ ಸೆಪ್ಟೆಂಬರ್ 10 ರಂದು ಇನ್‌ಸ್ಟಾಗ್ರಾಂ ಬ್ಯಾನ್ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ದೇಶಾದ್ಯಂತ Instagram ಬ್ಯಾನ್ ಆಗಲಿದೆ. ಈ ವಿಚಾರವನ್ನು ಎಲ್ಲರಿಗೂ ಹಂಚಿಕೊಳ್ಳಿ.” ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೆಲವೊಂದು ಬರಹಗಳಲ್ಲಿ ಅತಿ ಶೀಘ್ರದಲ್ಲಿ ಟೆಲಿಗ್ರಾಂ ಬಂದ್ ಆಗುವ ಹಿನ್ನಲೆಯಲ್ಲಿ ಇನ್‌ಸ್ಟಾಗ್ರಾಂ ಕೂಡ ಬಂದ್ ಆಗಲಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ.
ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ಪೋಸ್ಟ್‌ಗಳನ್ನು ಗಮನಿಸಿದ ಜನಸಾಮಾನ್ಯರು ಕೂಡ ಇದು ನಿಜವೆಂದು ಭಾವಿಸಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಹಲವರು ನಿಜಕ್ಕೂ ಇನ್ಸ್ಟಾಗ್ರಾಮ್ ಬ್ಯಾನ್ ಆಗಲಿದೆ ಎಂದು ನಂಬಿಕೊಂಡಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದಾದರು ವರದಿಗಳು ಪ್ರಕಟವಾಗಿದೆಯೇ ಎಂದು ಪರಿಶೀಲನೆಯನ್ನು ನಡೆಸಲಾಯಿತು. ಆದರೆ ಈ ಕುರಿತು ಯಾವುದೇ ರೀತಿಯಾದಂತಹ ವರದಿಗಳು ಕಂಡುಬಂದಿಲ್ಲ. ಹಾಗಾಗಿ ವೈರಲ್ ಪೋಸ್ಟ್ ಹಲವು ಅನುಮಾನಗಳನ್ನು ಹುಟ್ಟುಹಾಕಿತು.
ಈ ಕಾರಣದಿಂದಾಗಿ ಇನ್‌ಸ್ಟಾಗ್ರಾಂನ ಮಾತೃ ಸಂಸ್ಥೆಯಾದ ಮೆಟಾದ ಅಧಿಕೃತ ವೆಬ್‌ಸೈಟ್‌ನಲ್ಲಿ, ಈ ಕುರಿತು ಯಾವುದಾದರೂ ಮಾಧ್ಯಮ ಪ್ರಕಟಣೆ ಇದೆಯೇ ಎಂದು ಪರಿಶೀಲನೆಯನ್ನು ನಡೆಸಲಾಯಿತು. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ ಇನ್‌ಸ್ಟಾಗ್ರಾಂ ಬಂದ್ ಆಗುವುದು ಖಚಿತವಾಗಿದ್ದಾರೆ, ಅದರ ಸಿಇಓ ಅಧಿಕೃತವಾದ ಹೇಳಿಕೆಯನ್ನು ನೀಡಬೇಕಾಗಿತ್ತು. ಆದರೆ ಅಂತಹ ಹೇಳಿಕೆಯನ್ನು ಅವರು ನೀಡಿಲ್ಲ. ಹೀಗಾಗಿ ವೈರಲ್ ಸುದ್ದಿ ನಂಬಿಕೆಗೆ ಅರ್ಹವಾಗಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ.. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ರೀತಿಯಲ್ಲಿ ಇನ್‌ಸ್ಟಾಗ್ರಾಂ ಬಂದ್ ಆಗಲಿದೆ ಎಂಬುದಕ್ಕೆ ಯಾವುದೇ ರೀತಿಯ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ ಹಾಗೂ ಈ ಕುರಿತು ಯಾವುದೇ ಅಧಿಕೃತ ಮಾಧ್ಯಮ ವರದಿಗಳು ಕೂಡ ಕಂಡು ಬಂದಿಲ್ಲ. ಹಾಗಾಗಿ ವೈರಲ್ ಪೋಸ್ಟ್ ಸುಳ್ಳಿನಿಂದ ಕೂಡಿದೆ. ಹಾಗಾಗಿ ಇಂತಹ ಪೋಸ್ಟ್‌ಗಳನ್ನು ನಂಬುವ ಮುನ್ನ ಎಚ್ಚರವಹಿಸಿ.
ಇದನ್ನೂ ಓದಿ : Fact Check | ಕಂದಹಾರ್ ವಿಮಾನ ಅಪಹರಣದ ವೆಬ್ ಸೀರಿಸ್‌ನಲ್ಲಿ ಮುಸ್ಲಿಂ ಹೆಸರನ್ನು ಉದ್ದೇಶಪೂರ್ವಕವಾಗಿ ತಿದ್ದಲಾಗಿದೆ ಎಂಬುದು ಸುಳ್ಳು