ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಮೇಲಿನ ದಾಳಿಯನ್ನು ಕೋಲ್ಕತ್ತಾದ ಪಾರ್ಕ್ ಸರ್ಕಸ್‌ನಲ್ಲಿ ಇಸ್ಲಾಮಿಕ್ ಧರ್ಮದವರು ಆಚರಿಸುತ್ತಿದ್ದಾರೆ ಎಂಬ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್:
ಈ ವೀಡಿಯೊ ಜೂನ್2023ರಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಜಮಾತೆ ಇಸ್ಲಾಮಿ ಹಿಂದ್ ಢಾಕಾ ಮೆಟ್ರೋಪಾಲಿಟನ್ ಪೋಲಿಸ್ (DMP) ಪಡೆಯಿಂದ ಅನುಮತಿಯನ್ನು ಪಡೆದುಕೊಂಡು ಪ್ರತಿಭಟನೆಯನ್ನು ನಡೆಸಿತ್ತು. ಪ್ರತಿಭಟನೆಯಲ್ಲಿ ಜಮಾತೆ ಇಸ್ಲಾಮಿ ಹಿಂದ್ ಪಕ್ಷದ ನಾಯಕರಾದ ಶಫೀಕುರ್ರೆಹಮಾನ್ ಸೇರಿದಂತೆ, ಪಕ್ಷದ ಬಂಧಿತ ಸದಸ್ಯರನ್ನು ಬಿಡುಗಡೆಗೊಳಿಸಬೇಕು. ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಹಾಗಾಗಿ ಕೋಲ್ಕತ್ತಾದಲ್ಲಿ ನಡೆದ ಸಂಭ್ರಮಾಚರಣೆಯ ವೀಡಿಯೊ ಅಲ್ಲವೆಂದು ಸ್ಪಷ್ಟವಾಗುತ್ತದೆ.
ವೈರಲ್ ಆದ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್‌ನ ಸ್ಥಳವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಫೈ ಓವರ್‌ನ ಅಡಿಯಲ್ಲಿ ಮೂರು ಕಂಬಗಳನ್ನು ಹೊಂದಿರುವ ಸ್ಥಳದಲ್ಲಿ ನಡೆದ ಮೆರವಣಿಗೆ ಎಂಬುದು ತಿಳಿದುಬಂದಿದೆ. ಈ ಸ್ಥಳವನ್ನು ಗೂಗಲ್ ಮ್ಯಾಪ್‌ನ ಸಹಾಯದಿಂದ ಹುಡುಕಿದಾಗ ಇದು ಢಾಕಾ-ಮೈಮೆನ್‌ಸಿಂಗ್ ಹೆದ್ದಾರಿಯಲ್ಲಿ ಈ ಮೆರವಣಿಗೆ ನಡೆದಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ. ಗೂಗಲ್ ಮ್ಯಾಪ್‌ನ ಸ್ಥಳಗಳ ಚಿತ್ರಗಳನ್ನು ಕೆಳಗಿನ ಚಿತ್ರಗಳಲ್ಲಿ ನೀವು ನೋಡಬಹುದು.
ವೈರಲ್ ವೀಡಿಯೊದಲ್ಲಿ ಕಂಡುಬರುವ ಹೊಂದಾಣಿಕೆಯ ಚಿತ್ರಗಳನ್ನು ಈ ಕೆಳಗಿನ ಚಿತ್ರಗಳಲ್ಲಿ ನೀವು ನೋಡಬಹುದು.
ಮತ್ತಷ್ಟು ಮಾಹಿತಿಗಾಗಿ ಕೀವರ್ಡ್‌ನ ಸಹಾಯದಿಂದ ಹುಡುಕಿದಾಗ ಕೆಲವೊಂದು ವರದಿಗಳು ( ಇಲ್ಲಿ ಮತ್ತು ಇಲ್ಲಿ ) ದೊರೆತಿವೆ. ಬಾಂಗ್ಲಾದೇಶದ ಜಮಾಅತೆ ಇಸ್ಲಾಮೀ ಹಿಂದ್ ಎಂಬ ರಾಜಕೀಯ ಪಕ್ಷವು ಜೂನ್ 2023 ರಲ್ಲಿ ಢಾಕಾ ಮೆಟ್ರೋಪಾಲಿಟನ್ ಪೋಲಿಸ್ (DMP) ಪಡೆಯಿಂದ ಅನುಮತಿಯನ್ನು ಪಡೆದುಕೊಂಡು ಢಾಕಾದಲ್ಲಿ ಪ್ರತಿಭಟನೆಯನ್ನು ಕೈಗೊಂಡಿತು. ಈ ಪ್ರತಿಭಟನೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಪಕ್ಷದ ಮುಖ್ಯಸ್ಥ ಶಫೀಕರ್ ರೆಹಮಾನ್ ಮತ್ತು ಪಕ್ಷದ ಬಂಧಿತ ಸದಸ್ಯರನ್ನು ಬಿಡುಗಡೆಗೊಳಿಸಬೇಕು.ಮತ್ತು ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸುವ ಬೇಡಿಕೆಗಳನ್ನು ಮುಂದಿಟ್ಟಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ ಈ ವೈರಲ್ ವೀಡಿಯೊದಲ್ಲಿರುವ ಮಾಹಿತಿಗೂ ಪಶ್ಚಿಮ ಬಂಗಾಳಕ್ಕೂಯಾವುದೇ ರೀತಿಯ ಸಂಬಂಧವಿಲ್ಲ.ಈ ವೈರಲ್ ವೀಡಿಯೊ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ 2023ರ ಜಮಾಅತೆ ಇಸ್ಲಾಮೀ ಹಿಂದ್‌ನ ಪ್ರತಿಭಟನೆಗೆ ಸಂಬಂಧಿಸಿದ್ದಾಗಿದೆ.
ಇದನ್ನು ಓದಿದ್ದೀರಾ?