ಭಾರತದ ದೇವಾಲಯದ ಚಿತ್ರವನ್ನು, ಬಾಂಗ್ಲಾದೇಶದ ಪ್ರವಾಹದಲ್ಲಿ ಸಿಲುಕಿಕೊಂಡಿರುವ ದೇವಾಲಯ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ” ಭಾರತ ದೇಶವು ತನ್ನ ಎಲ್ಲಾ ಆಣೆಕಟ್ಟೆಗಳನ್ನು ತೆರೆದಾಗ ಪ್ರವಾಹ ಉಂಟಾಗಿ ಬಾಂಗ್ಲಾದೇಶದಲ್ಲಿನ ದೇವಾಲಯವು ನೀರಿನಲ್ಲಿ ಮುಳುಗುತ್ತಿದೆ” ಎಂದು ಹಂಚಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ಸಂಭವಿಸಿದ ಪ್ರವಾಹಕ್ಕೆ ಭಾರತವನ್ನು ಆರೋಪಿಸಿ ಅನೇಕ ಸುಳ್ಳುಗಳು ಇತ್ತೀಚೆಗೆ ಕಂಡುಬರುತ್ತಿವೆ.
ಫ್ಯಾಕ್ಟ್ ಚೆಕ್ :
ಗೂಗಲ್ ರಿವರ್ಸ್ ಇಮೇಜ್‌ನ್ನು ಬಳಸಿಕೊಂಡು ಈ ಚಿತ್ರವನ್ನು ಹುಡುಕಿದಾಗ ಇದು 2019ರದ್ದಾಗಿದೆ. ಭಾರತದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಕಂಡು ಬಂದ ಚಿತ್ರವಾಗಿದೆ. ಇದು ಪಶ್ಚಿಮ ಬಂಗಾಳದ ಗಂಗಾಸಾಗರ್‌ನಲ್ಲಿರುವ ಕಪಿಲ್ ಮುನಿ ದೇವಸ್ಥಾನವು ನೀರಿನಲ್ಲಿ ಮುಳುಗಿದ್ದ ಚಿತ್ರವಾಗಿದೆ. ಈ ಪ್ರವಾಹ ಪೀಡಿತ ಪ್ರದೇಶದ ದೃಶ್ಯಗಳನ್ನು ದಿ ಹಿಂದೂ ಮತ್ತು ಡೌನ್‌ಟುಅರ್ತ್ ಎಂಬ ಪತ್ರಿಕೆಗಳು ವರದಿಯನ್ನು ತಯಾರಿಸಿವೆ.
ವೈರಲ್ ಆದ ಚಿತ್ರವನ್ನು ಹೋಲುವ ಚಿತ್ರಗಳನ್ನು ಈ ವರದಿಗಳಲ್ಲಿ ನೋಡಬಹುದು. ಮತ್ತು ಈ ವೈರಲ್ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಬಿಂಬಿತವಾಗಿ ಕಾಣುತ್ತವೆ. ಅವುಗಳ ಹೋಲಿಕೆಯನ್ನು ಈ ಕೆಳಗಿನ ದೃಶ್ಯಗಳಲ್ಲಿ ನೋಡಬಹುದು.
ಈ ದೇವಾಲಯ ಬಹಳಷ್ಟು ಬಾರಿ ಪ್ರವಾಹಗಳನ್ನು ಎದುರಿಸುತ್ತಿದ್ದು ಕೆಲವೇ ವರ್ಷಗಳಲ್ಲಿ ಮುಳುಗಿಹೋಗಬಹುದು ಎಂದು ವರದಿಗಳು ತಿಳಿಸಿವೆ. ಸ್ಟೇಟ್ಸ್‌ಮನ್ ಮತ್ತು ETV ಯ ಇತರ ವರದಿಗಳು ಇದೇ ರೀತಿಯ ದೇವಾಲಯದ ಚಿತ್ರಗಳನ್ನು ಒಳಗೊಂಡಿವೆ. ಈ ಸ್ಥಳವನ್ನು ಗೂಗಲ್ ಮ್ಯಾಪ್‌ನಲ್ಲಿ ಹುಡುಕಿದಾಗ ಇದು ಪಶ್ಚಿಮ ಬಂಗಾಳದ ಕಪಿಲ್ ಮುನಿ ದೇವಸ್ಥಾನ ಎಂಬುದು ನಿಖರವಾಗಿ ಕಂಡುಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಭಾರತದ ದೇವಾಲಯದ ಹಳೆಯ ಚಿತ್ರವನ್ನು ಬಾಂಗ್ಲಾದೇಶದಲ್ಲಿ ಪ್ರವಾಹಕ್ಕೆ ಒಳಗಾದ ಹಿಂದೂ ದೇವಾಲಯ ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿದ್ದೀರಾ?