“ಹರಿಯಾಣದಲ್ಲಿ ಅಕ್ಟೋಬರ್ 5, 2024 ರಂದು 90 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಬರಲಿದೆ. ಬಹುಮತಕ್ಕೆ 46 ಸ್ಥಾನಗಳು ಬೇಕಾಗುತ್ತವೆ. ಈ ಮಧ್ಯೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 35-40 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿರುವ ರಿಪಬ್ಲಿಕ್ ಟಿವಿ ಮತ್ತು ಪೋಲಿಂಗ್ ಏಜೆನ್ಸಿ ಮ್ಯಾಟ್ರಿಜ್ ನಡೆಸಿದ ಅಭಿಪ್ರಾಯ ಸಂಗ್ರಹವನ್ನು ತೋರಿಸುವ ಒಂದು ಗ್ರಾಫಿಕ್ ಪ್ಲೇಟ್ ಇಲ್ಲಿದ್ದು, ಇದನ್ನು ಸೂಕ್ಷ್ಮವಾಗಿ ಗಮನಿಸಿ ಈ ಬಾರಿ ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ” ಎಂದು ಗ್ರಾಫಿಕ್ ಚಿತ್ರವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
हम सर्वे में नहीं सीधा सरकार में आते है। हरियाणा की जनता की राजनैतिक समझ को हल्के में लेने की गलती नहीं करनी चाहिए ।
ये सत्ता परिवर्तन की लड़ाई है और परिवर्तन कभी पुरानी पार्टी नहीं लाती।@SandeepPathak04 @sphavisha @anuragdhanda @Drsarika005 @AAPHaryana pic.twitter.com/WoZRiSO6eh— Satyendra Rao (@rao_satyendra) August 29, 2024
ಇದನ್ನು ಗಮನಿಸಿದ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಇದೇ ಫೋಟೋವನ್ನು ಹಂಚಿಕೊಂಡು, ವಿವಿಧ ರೀತಿಯಾದ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇನ್ನೂ ಕೆಲ ರಾಜಕೀಯ ಪಕ್ಷದ ಮುಖಂಡರು ಚುನಾವಣೆಗೂ ಮುನ್ನವೇ ಈ ಗ್ರಾಫಿಕ್ ಚಿತ್ರಗಳನ್ನು ಬಳಸಿ ಜನರಲ್ಲಿ ಬೇರೆಯದ್ದೇ ರೀತಿಯಾದ ಅಭಿಪ್ರಾಯವನ್ನು ಮೂಡಿಸಲು ಯತ್ನಿಸುತ್ತಿದ್ದಾರೆ. ಹೀಗೆ ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
हम सर्वे में नहीं सीधा सरकार में आते है। हरियाणा की जनता की राजनैतिक समझ को हल्के में लेने की गलती नहीं करनी चाहिए ।
ये सत्ता परिवर्तन की लड़ाई है और परिवर्तन कभी पुरानी पार्टी नहीं लाती।@SandeepPathak04 pic.twitter.com/hYs1efrmMS— Arti Bhatt 🇮🇳 (@ArtiBhattAAP) August 29, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದ್ದೇವೆ. ಈ ವೇಳೆ 1 ಜೂನ್ 2024ರಂದು ಹರಿಯಾಣದ ಈಟಿವಿ ಭಾರತ್ ವೆಬ್ ಸುದ್ದಿತಾಣ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಎಕ್ಸಿಟ್ ಪೋಲ್ ಮಾಹಿತಿಯನ್ನು ನೀಡಿದ್ದು ಕಂಡು ಬಂದಿದೆ. ಇದರ ಗ್ರಾಫಿಕ್ ಚಿತ್ರ ಮತ್ತು ವೈರಲ್ ಗಾಫ್ರಿಕ್ ಚಿತ್ರಕ್ಕೆ ಹೋಲಿಕೆ ಇರುವುದು ಪತ್ತೆಯಾಗಿದ್ದು, ವೈರಲ್ ಪೋಸ್ಟ್ ಸುಳ್ಳು ಎಂಬುದು ಬಹುತೇಖ ಸಾಬೀತಾಗಿದೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ನಾವು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ ಕಾಂಗ್ರೆಸ್ ಪಕ್ಷವು 40 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತದೆ ಎಂದು ರಿಪಬ್ಲಿಕ್ ಟಿವಿ – ಮ್ಯಾಟ್ರಿಜ್ ಯಾವುದೇ ಅಭಿಪ್ರಾಯ ಸಂಗ್ರಹವನ್ನು ಮಾಡಿಲ್ಲ ಎಂಬುದು ತಿಳಿದು ಬಂದಿದೆ. ಇನ್ನು ಇದೇ ವೇಳೆ ಟೈಮ್ಸ್ ನೌ ಜೊತೆಗೆ ಪೋಲಿಂಗ್ ಏಜೆನ್ಸಿ ಮ್ಯಾಟ್ರಿಜ್ ಆಗಸ್ಟ್ 2024 ರಲ್ಲಿ ಅಭಿಪ್ರಾಯ ಸಂಗ್ರಹವನ್ನು ಬಿಡುಗಡೆ ಮಾಡಿರುವುದು ಪತ್ತೆಯಾಗಿದೆ. ಆಗಸ್ಟ್ 18, 2024 ರಂದು X ನಲ್ಲಿ ಮ್ಯಾಟ್ರಿಜ್ ಅನ್ನು ಟೈಮ್ಸ್ ನೌ ಟ್ಯಾಗ್ ಮಾಡಿ ತಮ್ಮ ಅಭಿಪ್ರಾಯ ಸಂಗ್ರಹ ಸಂಖ್ಯೆಯನ್ನು ಬಿಡುಗಡೆ ಮಾಡಿರುವುದು ಕಂಡು ಬಂದಿದೆ. ಹಾಗಾಗಿ ವೈರಲ್ ಪೋಸ್ಟ್ ಯಾವುದೇ ರೀತಿಯಲ್ಲಿ ನಂಬಿಕೆಗೆ ಅರ್ಹವಾಗಿಲ್ಲ ಎಂಬುದು ಸಾಬೀತಾಗಿದೆ.
.@Matrize_NC Survey on TIMES NOW
Opinion poll for #Haryana Assembly elections (Total Seats: 90) || Seatshare:
– BJP+: 37-42
– INC: 33-38
– JJP: 03-08
– Others: 07-12
Watch @TheNewshour as @NavikaKumar decodes the survey numbers. pic.twitter.com/efhAprdwFV
— TIMES NOW (@TimesNow) August 18, 2024
ಒಟ್ಟಾರೆಯಾಗಿ ಹೇಳುವುದಾದರೆ ಕಾಂಗ್ರೆಸ್ ಮುನ್ನಡೆಯನ್ನು ಸಾಧಿಸಲಿದೆ ಎಂದು ತೋರಿಸಲಾದ ಗ್ರಾಫಿಕ್ಸ್ ಚಿತ್ರ ಸಂಪೂರ್ಣವಾಗಿ ಸುಳ್ಳು ಪ್ರತಿಪಾದನೆಯಿಂದ ಕೂಡಿದ್ದು, ಈ ಕುರಿತು ರಿಪಬ್ಲಿಕ್ ಟಿವಿ ಅಭಿಪ್ರಾಯ ಸಂಗ್ರಹಿಸಿದೆ ಎಂಬುದು ಕೂಡ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ. ಹಾಗಾಗಿ ಯಾವುದೇ ಸುದ್ದಿಗಳು ಕಂಡು ಬಂದರು ಅವುಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ
ಇದನ್ನೂ ಓದಿ : Fact Check | ಗ್ಯಾಂಗ್‌ರೇಪ್ ಆರೋಪಿಗಳು ಜಾಮೀನಿನಲ್ಲಿ ಬಿಡುಗಡೆಯಾದ ಬಳಿ ಕೇಕ್ ಕತ್ತರಿಸಿ ಸಂಭ್ರಮಿಸಿರುವ ಫೋಟೊ ನಕಲಿ!