ಬಾಲಿವುಡ್ ಸಿನೆಮಾ ನಿರ್ದೇಶಕ ಅನುಭವ್ ಸಿನ್ಹಾರವರು , ನಟಿ ತಾಪ್ಸೀ ಪನ್ನು ಮತ್ತು ನಟ ರಜತ್ ಕಪೂರ್ ರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ “ಹಿಂದೂಗಳು ಭಯೋತ್ಪಾದನೆಯನ್ನು ಪ್ರಾಂಭಿಸಿದ್ದಾರೆ” ಎಂದು ಹೇಳಿದ್ದಾರೆ ಎಂಬ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್:
ಈ ವೀಡಿಯೊದ ಕೆಲವು ಪೋಟೊಗಳನ್ನು ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ ಈ ವೀಡಿಯೊ 9 ಜುಲೈ 2018 ರಂದು YouTube ನಲ್ಲಿ ಹಂಚಿಕೊಳ್ಳಲಾಗಿರುವುದು ಕಂಡುಬಂದಿದೆ. ಈ ವೀಡಿಯೊದಲ್ಲಿ ಅನುಭವ್ ಸಿನ್ಹಾ, ” ಭಯೋತ್ಪಾದನೆ ಪ್ರಾರಂಭವಾಗಲು ಹಿಂದೂಗಳು ಕಾರಣ”ಎಂದು ಹೇಳಿಲ್ಲ. “ಭಯೋತ್ಪಾದನೆ” ಎಂಬ ಪದವನ್ನು ಯಾರು ಬಳಸಲು ಪ್ರಾರಂಭಿಸಿದರು? ಎಂದು ವರದಿಗಾರರಿಗೆ ಪ್ರಶ್ನೆಯನ್ನು ಕೇಳಿದ್ದಾರೆ.
ಸಿನ್ಹಾರವರು ನಿರ್ದೇಶಿಸಿದ ಬಾಲಿವುಡ್ ಚಲನಚಿತ್ರವಾದ ಮುಲ್ಕ್‌ನ ಟ್ರೈಲರ್ ಲಾಂಚ್‌ನ ಬಿಡುಗಡೆಯ ಸಮಯದಲ್ಲಿ ಈ ವೀಡಿಯೊವನ್ನು ಬಾಲಿವುಡ್ ಹೆಸರಿನ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ, “ಭಾರತೀಯ ಮುಸ್ಲಿಮರು ಭಯೋತ್ಪಾದನೆಯನ್ನು ಏಕೆ ಆರಿಸಿಕೊಳ್ಳುತ್ತಿದ್ದಾರೆ”? ಎಂದು ಟೈಮ್‌ಸ್ಟ್ಯಾಂಪ್‌ನಲ್ಲಿ ವರದಿಗಾರರೊಬ್ಬರು ಸಿನ್ಹಾರವರನ್ನು ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿನ್ಹಾ, “ನೀವು ಪತ್ರಿಕೆಗಳನ್ನು ಓದುತ್ತೀರಾ? ಟಿವಿಯಲ್ಲಿ ನ್ಯೂಸ್‌ಗಳನ್ನು ನೋಡುತ್ತೀರಾ? ನಿನ್ನೆ ನಿಮ್ಮ ರಾಷ್ಟ್ರದ ಇಬ್ಬರು ಮಂತ್ರಿಗಳು ಹಿಂಸಾಚಾರದಲ್ಲಿ ತೊಡಗಿರುವ ಹಿಂದೂಗಳಿಗೆ ಸಹಾಯ ಮಾಡಿಕೊಟ್ಟಿದ್ದಾರೆ. ಇದನ್ನೆಲ್ಲ ನೀವು ತಿಳಿದುಕೊಂಡಿದ್ದರೆ ಆ ವಿಷಯವೆ ನಿಮಗೆ ಉತ್ತರವನ್ನು ತಿಳಿಸಿಕೊಡುತ್ತದೆ”ಎಂದು ಪ್ರತಿಕ್ರಿಯಿಸಿದರು. ಮುಂದುವರೆದು “ಮುಸ್ಲಿಂರು ಭಯೋತ್ಪಾದನೆಯನ್ನು ಏಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ? ಎಂದು ತಿಳಿದುಕೊಳ್ಳಬೇಕಾದರೆ ಮೊದಲು ನಾವೆಲ್ಲರೂ ಸಂಪೂರ್ಣವಾಗಿ ನಮ್ಮ ಇತಿಹಾಸವನ್ನು ಅರಿತುಕೊಳ್ಳಬೇಕಾಗಿದೆ. ಅದಕ್ಕೆ ನಾವೆಲ್ಲರೂ ಸರಿಯಾದ ಸಮಯವನ್ನು ಕೊಟ್ಟು ಇತಿಹಾಸವನ್ನು ತಿಳಿದುಕೊಳ್ಳಬೇಕು. ಈ ಸಮ್ಮೇಳನದಲ್ಲಿಯೇ ಮುಸ್ಲಿಂರು ಮತ್ತು ಭಯೋತ್ಪಾದನೆಯ ಬಗ್ಗೆ ಎಲ್ಲವನ್ನೂ ನನಗೆ ಹೇಳಲು ಸಾಧ್ಯವಿಲ್ಲ. ಭಯೋತ್ಪಾದನೆಯನ್ನು ಪ್ರಾರಂಭಿಸಿದವರು ಯಾರು? ಭಯೋತ್ಪಾದನೆ ಎಂಬ ಪದದ ಬಳಕೆ ಯಾವಾಗ ಪ್ರಂಭವಾಯಿತು? ಎಂಬುದರ ಬಗ್ಗೆ ನಿಮಗೆ ಗೊತ್ತಿದ್ದರೆ ದಯವಿಟ್ಟು ಮೊದಲು ನೀವು ನನಗೆ ತಿಳಿಸಿ ” ಎಂದು ಪತ್ರಕರ್ತನ ಮೇಲೆ ಹರಿಹಾಯ್ದಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ, ಅನುಭವ್ ಸಿನ್ಹಾ ಅವರ ಕ್ಲಿಪ್ ಮಾಡಿದ ವೀಡಿಯೊದಲ್ಲಿ ಅವರು ಭಯೋತ್ಪಾದನೆಯನ್ನು ಹಿಂದೂಗಳು ಪ್ರಾರಂಭಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ವೀಡಿಯೊ ಕೋಮು ಸನ್ನಿವೇಶದಿಂದ ವೈರಲ್ ಆಗುತ್ತಿರುವುದು ಸಂಪೂರ್ಣವಾಗಿ ಸುಳ್ಳು ಮಾಹಿತಿಯಿಂದ ಕೂಡಿದೆ.
ಇದನ್ನು ಓದಿದ್ದೀರಾ?
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.