ಭಾರತದ ಮುಸ್ಲಿಂ ಯುವಕನೊಬ್ಬ ಸಾರ್ವಜನಿಕ ಮೂಲಸೌಕರ್ಯವಾದ ವಿದ್ಯುತ್ ಕಂಬವನ್ನು ಹಾನಿಗೊಳಿಸುತ್ತಿದ್ದಾನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ಪಾಕಿಸ್ತಾನದ ಹುಡುಗನೊಬ್ಬ ವಿದ್ಯುತ್ ಕಂಬದ ಕೆಳಗಿರುವ ಕೇಬಲ್‌ಗಳನ್ನು ಕತ್ತರಿಸಲು ಪ್ರಯತ್ನಿಸುತ್ತಿರುವ ಹಳೆಯ ವೀಡಿಯೊ ಆಗಿದೆ.
ಈ ವೀಡಿಯೊದಲ್ಲಿ ಬಾಲಕನು ಕಂಬ ಮತ್ತು ಗಡಿ ಗೋಡೆಯ ನಡುವಿನ ಅಂತರದಲ್ಲಿ ಸಣ್ಣ ಕೋಲನ್ನು ಹಿಡಿದು ತಂತಿಯನ್ನು ತಳ್ಳುತ್ತಿರುವುದನ್ನು ಕಾಣಬಹುದು. ಈ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಿಂದಿ ಶೀರ್ಷಿಕೆಯೊಂದಿಗೆ, ಭಾರತದ್ದು ಎಂದು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ವಿಡಿಯೋದ ಸ್ಕ್ರೀನ್‌ಶಾಟ್ ಚಿತ್ರಗಳನ್ನು ಗೂಗಲ್ ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ ಇದು ಪಾಕಿಸ್ತಾನದ ಕರಾಚಿಯ ಮಾರ್ವತ್ ಪಾರ್ಕ್‌ನ ಮಂಜೂರ್ ಕಾಲೋನಿಯಲ್ಲಿ ನಡೆದ ಘಟನೆ ಎಂದು ತಿಳಿದುಬರುತ್ತದೆ. ಇದು ಭಾರತದ್ದಲ್ಲ ಎಂದು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಕಂಡುಕೊಂಡಿದೆ. 2023ರ ಜುಲೈನಲ್ಲಿ X ನಲ್ಲಿ ಅದೇ ವೀಡಿಯೊವನ್ನು, ಭಾರತದಲ್ಲಿ ಕೆಲವರು ಕೋಮು ವೈಷಮ್ಯ ಭಾವನೆಯಿಂದ ಫೇಸ್‌ಬುಕ್ ಮತ್ತು YouTube ನಲ್ಲಿ ಉರ್ದು ಭಾಷೆಯಲ್ಲಿ ಹಲವಾರು ಪೋಸ್ಟ್‌ಗಳನ್ನುಹಂಚಿಕೊಂಡಿದ್ದಾರೆ.
ಕರಾಚಿಯ ಮಾರ್ವತ್ ಪಾರ್ಕ್‌ನ ಮಂಜೂರ್ ಕಾಲೋನಿಯ ಬಳಕೆದಾರರು ಫೇಸ್‌ಬುಕ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. 2023 ರ ಜೂನ್ 30ರಂದು ಈ ಫೇಸ್‌ಬುಕ್ ಪೋಸ್ಟ್‌ನ ಉರ್ದು ಭಾಷೆಯ ಶೀರ್ಷಿಕೆಯನ್ನು ಇಂಗ್ಲಿಷ್ ಭಾಷೆಗೆ “Such thieves have children. Daytime street light cables are being cut. No one is going to ask. Manzoor Colony Awami Chowk hill town Marwat Park” ಅನುವಾದಿಸಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.
ಈ ವೈರಲ್ ಘಟನೆ ಯಾವಾಗ ನಡೆದಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಆದರೆ ಈ ವೀಡಿಯೊವನ್ನು 2023 ಜೂನ್‌ನಲ್ಲಿ ಪಾಕಿಸ್ತಾನದ ಫೇಸ್‌ಬುಕ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದ ಸ್ಥಳವನ್ನು ಗೂಗಲ್ ನಕ್ಷೆಗಳ ಸಹಾಯದಿಂದ ಹುಡುಕಿದಾಗ, ಇದು ಪಾಕಿಸ್ತಾನದ ಕರಾಚಿಯ ಮಂಜೂರ್ ಕಾಲೋನಿ ಮತ್ತು ಅವಾಮಿ ಚೌಕ್‌ನ ಸಮೀಪದಲ್ಲಿದೆ ಎಂದು ತಿಳಿದುಬಂದಿದೆ.
ಆದ್ದರಿಂದ ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಆಗಿರುವ ವೀಡಿಯೊದಲ್ಲಿ ಯುವಕನೊಬ್ಬ ವಿದ್ಯುತ್ ಕಂಬದ ಕೆಳಗಿರುವ ಕೇಬಲ್‌ಗಳನ್ನು ಕತ್ತರಿಸುತ್ತಿರುವ ಘಟನೆ ಪಾಕಿಸ್ತಾನದ ಕರಾಚಿಯ ಮಂಜೂರ್ ಕಾಲೋನಿ ಮತ್ತು ಅವಾಮಿ ಚೌಕ್‌ನ ಬಳಿ ನಡೆದ ಘಟನೆಯಾಗಿದೆ. ಇದಕ್ಕೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ.
ಇದನ್ನು ಓದಿದ್ದೀರಾ?
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.