“ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೇ ಬೆಂಕಿ ಇಡಲು @INCIndia ಚಿಂತನೆ ನಡೆಸಿದೆ. ಮಂದ ಬುದ್ಧಿಯ ಬಾಲಕ @RahulGandhi ಅವರು ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನೇ ಕಿತ್ತು ಹಾಕುವುದಾಗಿ ದೂರದ ಅಮೆರಿಕದಲ್ಲಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಬಡವರು, ದೀನ ದಲಿತರು, ಶೋಷಿತರು, ಪರಿಶಿಷ್ಟರು, ಬುಡಕಟ್ಟು ಸಮುದಾಯದವರ ವಿರೋಧಿ ಎನ್ನುವುದಕ್ಕೆ ಇದಕ್ಕಿಂತಲೂ ಸಾಕ್ಷಿ ಇನ್ನೇನು ಬೇಕು?” ಎಂದು ಬಿಜೆಪಿ ಕರ್ನಾಟಕ ತನ್ನ ಎಕ್ಸ್ ( ಈ ಹಿಂದಿನ ಟ್ವಿಟರ್)ನಲ್ಲಿ ಎಡಿಟೆಡ್ ವಿಡಿಯೋದೊಂದಿಗೆ ಹಂಚಿಕೊಂಡಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೇ ಬೆಂಕಿ ಇಡಲು @INCIndia ಚಿಂತನೆ ನಡೆಸಿದೆ.
ಮಂದ ಬುದ್ಧಿಯ ಬಾಲಕ @RahulGandhi ಅವರು ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನೇ ಕಿತ್ತು ಹಾಕುವುದಾಗಿ ದೂರದ ಅಮೆರಿಕದಲ್ಲಿ ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್ ಬಡವರು, ದೀನ ದಲಿತರು, ಶೋಷಿತರು, ಪರಿಶಿಷ್ಟರು, ಬುಡಕಟ್ಟು ಸಮುದಾಯದವರ ವಿರೋಧಿ… pic.twitter.com/fWrmPyMYrs
— BJP Karnataka (@BJP4Karnataka) September 11, 2024
ಈ ವಿಡಿಯೋ ನೋಡಿದ ಹಲವು ಮಂದಿ ರಾಹುಲ್ ಗಾಂಧಿ ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ಅಮೆರಿಕದಲ್ಲಿ ಘೋಷಿಸಿದ್ದಾರೆ ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದನ್ನೇ ಬಳಸಿಕೊಂಡು ಹಲವು ಬಿಜೆಪಿ ಬೆಂಬಲಿತ ಮಾಧ್ಯಮಗಳು ಕೂಡ ಸುದ್ದಿಯನ್ನು ಮಾಡುತ್ತಿವೆ. ಆದರೆ ಈ ವಿಡಿಯೋಗಳಲ್ಲಿ ರಾಹುಲ್ ಗಾಂಧಿ ಅವರ ಪೂರ್ಣ ಹೇಳಿಕೆ ಏನು ಎಂಬುದನ್ನು ಎಲ್ಲಿಯೂ ಹಂಚಿಕೊಳ್ಳುತ್ತಿಲ್ಲ. ಹೀಗಾಗಿ ಈ ವಿಚಾರ ಈಗ ಬಹುದೊಡ್ಡ ವಿವಾದಕ್ಕೆ ಕಾರಣವಾಗುತ್ತಿದೆ. ಹೀಗೆ ವಿವಾದಕ್ಕೆ ಕಾರಣವಾಗಿರುವ ವಿಡಿಯೋದ ಅಸಲಿಯತ್ತು ಏನು? ರಾಹುಲ್ ಗಾಂಧಿ ಹೇಳಿಕೆಯ ವಿಡಿಯೋದಲ್ಲಿನ ಪೂರ್ಣ ಆವೃತ್ತಿಯಲ್ಲಿ ಯಾವ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
We will remove Reservation~ Rahul Gandhipic.twitter.com/XF9spofmUJ
— Squint Neon (@TheSquind) September 10, 2024
ಫ್ಯಾಕ್ಟ್‌ಚೆಕ್
ಬಿಜೆಪಿ ಬೆಂಬಲಿತ ಮಾಧ್ಯಮಗಳು ಮತ್ತು ಹಲವು ಬಿಜೆಪಿಯ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವಂತೆ ರಾಹುಲ್ ಗಾಂಧಿ ಅವರು ನಿಜಕ್ಕೂ ಮೀಸಲಾತಿಯನ್ನು ರದ್ದುಗೊಳಿಸುತ್ತೇವೆ ಎಂದು ಘೋಷಣೆ ಮಾಡಿದ್ದಾರೆಯೇ ಎಂಬುದನ್ನು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ರಾಹುಲ್ ಗಾಂಧಿ ಅವರ ಅಧಿಕೃತ ಯುಟ್ಯೂಬ್ ಚಾನಲ್ ಅನ್ನು ಪರಿಶೀಲನೆ ನಡೆಸಿದೆವು. ಈ ವೇಳೆ 10 ಸೆಪ್ಟೆಂಬರ್ 2024 ರಂದು Watch: Interaction with Students & Faculty | Georgetown University | Washington DC, USA ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಸಾರವಾಗಿದ್ದ ಲೈವ್ ವಿಡಿಯೋ ಕಂಡು ಬಂದಿದೆ. ಇದರಲ್ಲಿ ರಾಹುಲ್ ಗಾಂಧಿ ಅವರ ಪೂರ್ಣ ಹೇಳಿಕೆ ಕಂಡು ಬಂದಿದೆ.
ಈ ವಿಡಿಯೋದ 56 ನಿಮಿಷ 58 ಸೆಕೆಂಡ್ ಟೈಮ್ ಸ್ಟ್ಯಾಂಪ್‌ನಲ್ಲಿ ರಾಹುಲ್ ಗಾಂಧಿ ಅವರು ಭಾರತದಲ್ಲಿ “ಸಮಾನತೆ ಸಾರ್ವತ್ರಿಕವಾದಾಗ ನಾವು ಮೀಸಲಾತಿ ರದ್ದತಿ ಬಗ್ಗೆ ಯೋಚಿಸುತ್ತೇವೆ. ಈಗ ಆ ಸಮಾನತೆ ಇಲ್ಲ .ಸಮಸ್ಯೆ ಏನೆಂದರೆ, ಭಾರತದ ಶೇಕಡಾ 90ರಷ್ಟು ಜನರಿಗೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ದೇಶದ ಉದ್ಯಮಿಗಳ ಪಟ್ಟಿ ತೆಗೆದು ನೋಡಿ. ಅದರಲ್ಲಿ ಆದಿವಾಸಿಗಳು, ದಲಿತರು ಮತ್ತು ಒಬಿಸಿಗಳ ಹೆಸರು ತೋರಿಸಿ. ಈ ಜನರು ಭಾರತ ಶೇ.50ರಷ್ಟು ಇದ್ದಾರೆ. ಆದರೆ, 200 ಜನ ಉದ್ಯಮಿಗಳ ಪಟ್ಟಿಯಲ್ಲಿ ಕೇವಲ ಒಬ್ಬ ಒಬಿಸಿಯ ಹೆಸರು ಇರಬಹುದು. ಈ ಸಮಸ್ಯೆಗೆ ನಾವು ಪರಿಹಾರ ಕಂಡುಕೊಳ್ಳುತ್ತಿಲ್ಲ. ಮೀಸಲಾತಿ ತೆಗೆದು ಹಾಕಿದ ತಕ್ಷಣ ಎಲ್ಲವೂ ಸರಿಯಾಗುವುದಿಲ್ಲ. ಬೇರೆ ಮಾರ್ಗಗಳೂ ಇವೆ” ಎಂದು ಹೇಳಿಕೆಯನ್ನು ನೀಡಿದ್ದಾರೆ. ರಾಹುಲ್ ಗಾಂಧಿ ಅವರ ಪೂರ್ಣ ಹೇಳಿಕೆಯನ್ನು PTI ವರದಿ ಮಾಡಿದ್ದು ಕೂಡ ಕಂಡು ಬಂದಿದೆ. ಈ ಮೂಲಕ ರಾಹುಲ್ ಗಾಂಧಿ ಅವರ ಹೇಳಿಕೆಯ ಆಯ್ದ ಭಾಗವನ್ನು ಮಾತ್ರ ಬಳಸಿ ಕರ್ನಾಟಕದ ಬಿಜೆಪಿ ಹಾಗೂ ಬಿಜೆಪಿ ಬೆಂಬಲಿತ ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಹರಡುತ್ತಿರುವುದು ಸಾಭೀತಾಗಿದೆ.
STORY | We will think of scrapping reservation when India is a fair place: Rahul Gandhi (@RahulGandhi)
READ: https://t.co/YFI3ZwOKQD
VIDEO:
(Source: Third Party)
(Full video available on PTI Videos – https://t.co/n147TvqRQz) pic.twitter.com/usfRm3uE1d
— Press Trust of India (@PTI_News) September 10, 2024
ಇನ್ನು ಬಿಜೆಪಿ ಬೆಂಬಲಿತ ಮಾಧ್ಯಮಗಳು ಮತ್ತು ಬಿಜೆಪಿ ಕರ್ನಾಟಕ ಸೇರಿದಂತೆ ಹಲವರು ರಾಹುಲ್ ಗಾಂಧಿ ಅವರು ಮೀಸಲಾತಿ ವಿರೋಧಿ ಎಂಬಂತೆ ಬಿಂಬಿಸುತ್ತಿರುವುದನ್ನು ಅರಿತ ರಾಹುಲ್ ಗಾಂಧಿ ” ಮೀಸಲಾತಿ ಹೇಳಿಕೆಯ ಕುರಿತು ತಪ್ಪು ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ. ನಾನು ಮೀಸಲಾತಿ ವಿರೋಧಿಯಲ್ಲ. ನಾವು ಶೇ.50 ರಷ್ಟು ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಆಲೋಚಿಸಿದ್ದೇವೆ.” ಎಂಬ ಹೇಳಿಕೆಯನ್ನು ಕೂಡ ನೀಡಿದ್ದಾರೆ. ಈ ಮೂಲಕ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸ್ವತಃ ರಾಹುಲ್ ಗಾಂಧಿ ಅವರೇ ಸ್ಪಷ್ಟನೆಯನ್ನು ನೀಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ.. ಅಮೆರಿಕದಲ್ಲಿ ರಾಹುಲ್ ಗಾಂಧಿ ಅವರು ಮೀಸಲಾತಿಯನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿದ್ದಾರೆ ಎಂಬುದು ಸುಳ್ಳಾಗಿದೆ. ಅವರ ವಿಡಿಯೋವಿನ ಪೂರ್ಣ ಆವೃತ್ತಿಯಲ್ಲಿ ಅರ್ಧ ಹೇಳಿಕೆಯನ್ನು ಮಾತ್ರ ಆಯ್ದುಕೊಂಡು ಎಡಿಟ್ ಮಾಡಿ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳಿನಿಂದ ಕೂಡಿದೆ.
ಇದನ್ನೂ ಓದಿ : Fact Check : ಮಧ್ಯಪ್ರದೇಶದಲ್ಲಿ ಪ್ರತಿಮೆಯನ್ನು ದ್ವಂಸಗೊಳಿಸಿರುವ ವೀಡಿಯೊವನ್ನು ಕರ್ನಾಟಕದ್ದು ಎಂದು ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.