“ಈ ವಿಡಿಯೋ ನೋಡಿ ಇವರು ಮಹಿಳಾ ಐಪಿಎಸ್ ಅಧಿಕಾರಿ ಅಂಕಿತ ಶರ್ಮ.. ಇವರು ಮನೆಯಲ್ಲಿ ಕುಳಿತುಕೊಂಡು ತಿಂಗಳಿಗೆ ಮೂವತ್ತು ಸಾವಿರ ರೂಪಾಯಿ ದುಡಿಯುವಂತಹ ಉದ್ಯೋಗ ಒಂದರ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯ ಪ್ರಕಾರ ಮನೆಯಲ್ಲಿಯೇ ಪೆನ್ಸಿಲ್ ಅನ್ನು ಪ್ಯಾಕ್ ಮಾಡುವ ಮೂಲಕ ತಿಂಗಳಿಗೆ ಉತ್ತಮ ಗಳಿಕೆಯನ್ನು ಕಾಣಬಹುದಾಗಿದೆ. ಇದರಿಂದ ಸಾಕಷ್ಟು ಮಂದಿ ಹಲವಾರು ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಈ ವಿಡಿಯೋದಲ್ಲಿ ಕೂಡ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಪೆನ್ಸಿಲ್ ಪ್ಯಾಕಿಂಗ್ ಉದ್ಯೋಗದ ಕುರಿತು ಮಾತನಾಡುತ್ತಿರುವುದನ್ನು ಕಾಣಬಹುದಾಗಿದ್ದು, ಈ ವಿಡಿಯೋ ನೋಡಿದ ಬಹುತೇಕರು ಇದು ನಿಜವೆಂದು ಭಾವಿಸಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಬೇರೆ ಬೇರೆ ಫೋಟೋಗಳೊಂದಿಗೆ ಕೂಡ ಇದೇ ಉದ್ಯೋಗ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದು, ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ಈ ಉದ್ಯೋಗ ಮಾಹಿತಿಯ ನಿಜವೆಷ್ಟು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಹಾಗೂ ಉದ್ಯೋಗ ಮಾಹಿತಿಯ ಬಗ್ಗೆ ಹುಡುಕಾಟವನ್ನು ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಪರಿಶೀಲನೆಯನ್ನು ನಡೆಸಿದವು. ಈ ವೇಳೆ ನಮಗೆ 13 ಆಗಸ್ಟ್ 2024 ರಂದು ಪತ್ರಕರ್ತರಾದ ಅಂಕಿತ್ ಸಿಂಗ್ ಎಂಬುವರು ಎಕ್ಸ್ ನಲ್ಲಿ ಮಾಡಿದ್ದ ಪೋಸ್ಟ್‌ವೊಂದು ಕಂಡು ಬಂದಿದೆ. ಈ ಪೋಸ್ಟಲ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಸುಳ್ಳಾಗಿದೆ. ಇಲ್ಲಿ ಐಪಿಎಸ್ ಅಧಿಕಾರಿ ಅಂಕಿತ ಶರ್ಮಾ ಅವರ ವಿಡಿಯೋವನ್ನು ಬಳಸಿಕೊಂಡು, ಅದಕ್ಕೆ ಅವರ ಧ್ವನಿಯಂತೆ AI( ಕೃತಕ ಬುದ್ಧಿಮತ್ತೆ) ಯನ್ನು ಬಳಸಿಕೊಂಡು ನಕಲಿ ವಿಡಿಯೋವನ್ನು ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
#कानपुर महिला आईपीएस अफसर का AI के दुरुपयोग से शातिरों ने बनाया वीडियो.
शातिरो ने आइपीएस अंकिता शर्मा के चेहरे और आवाज का किया इस्तेमाल,हजारों रुपए कमाने का लालच देने वाले वीडियो को सोशल मीडिया पर किया वायरल,गोविंद नगर पुलिस ने दर्ज की FIR.#kanpur #viralvideo #news #sirfsuch pic.twitter.com/UN4QkJh7Fh
— ठाkur Ankit Singh (@liveankitknp) August 13, 2024
ಇದರ ಆಧಾರದ ಮೇಲೆ ಇನ್ನಷ್ಟು ಪರಿಶೀಲನೆಯನ್ನು ನಡೆಸಲಾಗಿದ್ದು, ಈ ವೇಳೆ ನಮಗೆ ಪೊಲೀಸ್ ಕಮಿಷನರ್ ಕಾನ್ಪುರ್ ನಗರ ಎಂಬ ಎಕ್ಸ್ ಖಾತೆಯಲ್ಲಿ, 9 ಆಗಸ್ಟ್ 2024 ರಂದು ಇದೇ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್ಐರ್ ದಾಖಲಾಗಿದೆ ಹಾಗೂ ವೈರಲ್ ವಿಡಿಯೋ ನಕಲಿ ಎಂಬ ಉಲ್ಲೇಖವಿರುವ ಪೋಸ್ಟ್ ಕಂಡು ಬಂದಿದೆ. ಈ ಎರಡು ಪೋಸ್ಟ್ ಗಳ ಆಧಾರದ ಮೇಲೆ ವೈರಲ್ ಆಗುತ್ತಿರುವ ಐಪಿಎಸ್ ಅಧಿಕಾರಿ ಅಂಕಿತ ಶರ್ಮ ಅವರ ವಿಡಿಯೋ ನಕಲಿ ಎಂಬುದು ಸಾಬೀತಾಗಿದೆ.
कमिश्नरेट कानपुर नगर में पुलिस की छवि धूमिल करने वाले एवं लापरवाही के मामले में 01 निरीक्षक, 03 उ0नि0 तथा 03 आरक्षी सहित कुल 07 पुलिस कर्मी निलंबित की कार्यवाही के मामले में अपर पुलिस उपायुक्त दक्षिण @IPSAnkitaS द्वारा दी गई बाइट@Uppolice pic.twitter.com/DFn0I92tJd
— POLICE COMMISSIONERATE KANPUR NAGAR (@kanpurnagarpol) August 9, 2024
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಅಂಕಿತ ಶರ್ಮ ಎಂಬ ಐಪಿಎಸ್ ಅಧಿಕಾರಿಯವರು, ನಟರಾಜ್ ಕಂಪನಿ ಮತ್ತು ಅಪ್ಸರ ಕಂಪನಿಯ ಪೆನ್ಸಿಲ್‌ಗಳನ್ನು ಮನೆಯಲ್ಲಿ ಕುಳಿತು ಪ್ಯಾಕಿಂಗ್ ಮಾಡುವ ಮೂಲಕ, ಉತ್ತಮ ಗಳಿಕೆಯನ್ನು ಕಾಣಬಹುದು ಎಂದು ಹೇಳಿದ್ದಾರೆ ಎಂಬ ವಿಡಿಯೋ ನಕಲಿಯಾಗಿದೆ. ಆ ವಿಡಿಯೋಗೆ AI ವಾಯ್ಸ್ ಅನ್ನು ಬಳಸಿಕೊಂಡು, ವಿಡಿಯೋವನ್ನು ತಿರುಚಲಾಗಿದೆ ಎಂಬುದು ಸಾಬೀತಾಗಿದೆ. ಹಾಗಾಗಿ ಯಾವುದೇ ಉದ್ಯೋಗ ಸಂಬಂಧಿತ ಮಾಹಿತಿ ಇದ್ದರೂ ಒಮ್ಮೆ ಪರಿಶೀಲಿಸಿ ನೋಡಿ
ಇದನ್ನೂ ಓದಿ : Fact Check : ಪಶ್ಚಿಮ ಬಂಗಾಳದ ಮುಸ್ಲಿಂ ಯುವಕ ಹಿಂದೂ ಬಾಲಕಿಗೆ ಇರಿದಿದ್ದಾನೆ ಎಂಬ ವೈರಲ್ ವೀಡಿಯೊ ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.