ಟ್ರ್ಯಾಕ್ಟರ್‌ನಿಂದ ಪ್ರತಿಮೆಯನ್ನು ಕೆಡವುತ್ತಿರುವ ವೀಡಿಯೊವನ್ನು, ಕರ್ನಾಟಕದಲ್ಲಿ ನಡೆದ ಘಟನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಈ ವೀಡಿಯೊದಲ್ಲಿ ಟ್ರ್ಯಾಕ್ಟರ್ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸಲಾಗಿದೆ. ಮತ್ತು ಅಲ್ಲಿ ನೆರೆದಿದ್ದ ಜನರು ದೊಣ್ಣೆ ಮತ್ತು ಕಲ್ಲುಗಳನ್ನು ಬಳಸಿ ಪ್ರತಿಮೆಯನ್ನು ದ್ವಂಸ ಮಾಡುತ್ತಿರುವ ದೃಶ್ಯವು ಕಂಡುಬಂದಿದೆ. ಕೊನೆಯಲ್ಲಿ, ಒಬ್ಬ ವ್ಯಕ್ತಿ ಪ್ರಚೋದನಕಾರಿ ಕೋಮುವಾದಿ ಹೇಳಿಕೆಯನ್ನು ಕೊಡುತ್ತಾನೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ಘಟನೆಯ ಸ್ಕ್ರೀನ್‌ಶಾಟ್ ಪೋಟೊಗಳನ್ನು Google ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ ಈ ಘಟನೆ ಕರ್ನಾಟಕದ್ದಲ್ಲ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ. ಈ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯ ಮಕ್ಡೋನ್‌ನಲ್ಲಿ ನಡೆದಿದೆ. ಜನವರಿಯಲ್ಲಿ ಡಾ.ಭೀಮ್ ರಾವ್ ಅಂಬೇಡ್ಕರ್ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಎರಡು ಪಕ್ಷಗಳ ನಡುವೆ ಜಗಳ ನಡೆದಿದೆ. ಇದಾದ ಬಳಿಕ ಒಂದು ಪಕ್ಷದವರು ಪಟೇಲರ ಪ್ರತಿಮೆಯನ್ನು ಒಡೆದು ಹಾಕಿದ್ದಾರೆ.
ವೈರಲ್ ಘಟನೆಯ ಕುರಿತು ಜನವರಿ 25 ರಂದು ಟಿವಿ9 ಮಧ್ಯಪ್ರದೇಶ ಮತ್ತು ಆಜ್ ತಕ್ ಎಂಬ ಸುದ್ದಿ ವಾಹಿನಿಗಳು ವೀಡಿಯೊಗಳನ್ನು ಹಂಚಿಕೊಂಡಿವೆ. ಎರಡೂ ಚಿತ್ರಗಳ ಹೋಲಿಕೆಗಳನ್ನು ಈ ಕೆಳಗಿನ ಚಿತ್ರಗಳಲ್ಲಿ ನೋಡಬಹುದು.
ಪ್ರತಿಮೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಮಕ್ಡೋನ್‌ನಲ್ಲಿ ಪಾಟಿದಾರ್ ಸಮುದಾಯ ಮತ್ತು ಭೀಮ್ ಆರ್ಮಿ ಪಕ್ಷಗಳ ನಡುವೆ ವಿವಾದ ನಡೆದಿದೆ ಎಂದು ಈ ವರದಿಗಳು ತಿಳಿಸಿವೆ. ಭೀಮ್ ಆರ್ಮಿಯು ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಬಯಸಿತ್ತು, ಆದರೆ ಪಾಟಿದಾರ್ ಸಮುದಾಯವು ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಒತ್ತಾಯಿಸಿತ್ತು. ಇದು ಎರಡು ಪಕ್ಷಗಳ ನಡುವೆ ತೀವ್ರ ಘರ್ಷಣೆಗೆ ಕಾರಣವಾಯಿತು. ಒಂದು ಕಡೆಯಿಂದ ಜನರು ಟ್ರ್ಯಾಕ್ಟರ್ ಬಳಸಿ ಪಟೇಲ್ ಪ್ರತಿಮೆಯನ್ನು ಉರುಳಿಸಿ,ಧ್ವಂಸಗೊಳಿಸಿದರು. ಕೋಪಗೊಂಡ ಜನರು ಕಲ್ಲು ತೂರಾಡಿದರು ಮತ್ತು ಕೋಲುಗಳಿಂದ ಹಲವಾರು ವಾಹನಗಳನ್ನು ಧ್ವಂಸಗೊಳಿಸಿದರು.
ಈ ಘಟನೆಯ ಕುರಿತು ಎನ್‌ಡಿಟಿವಿ ಎಂಪಿ-ಛತ್ತೀಸ್‌ಗಢ ಎಂಬ ಸುದ್ದಿ ವಾಹಿನಿ ವರದಿ ತಯಾರಿಸಿದ ಮೂರು ದಿನಗಳ ನಂತರ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ. ಅಂಬೇಡ್ಕರ್ ಬಸ್ ನಿಲ್ದಾಣದಲ್ಲಿ ಅಂಬೇಡ್ಕರ್ ಮತ್ತು ಸರ್ದಾರ್ ಪಟೇಲ್ ಅವರ ಪ್ರತಿಮೆಗಳನ್ನು ಮಕ್ಡೋನ್‌ನ ಮಂಡಿ ಚೌಕ್‌ನಲ್ಲಿ ಸ್ಥಾಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಗಲಭೆಯಲ್ಲಿ ಪಾಲ್ಗೊಂಡ ಎರಡೂ ಪಕ್ಷಗಳ 72 ಜನರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿ, 19 ಮಂದಿಯನ್ನು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
#WATCH | Ujjain, Madhya Pradesh | ASP Guru Prasad Parashar says, "A statue of an eminent great leader installed at the intersection of Krishi Upaj Mandi was vandalised by persons of a particular community today. This led to clashes between the two groups. The situation is normal.… pic.twitter.com/Khi820U4Hh
— ANI MP/CG/Rajasthan (@ANI_MP_CG_RJ) January 25, 2024
ಒಟ್ಟಾರೆಯಾಗಿ ಹೇಳುವುದಾದರೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಅಂಬೇಡ್ಕರ್ ಮತ್ತು ಸರ್ದಾರ್ ಪಟೇಲ್ ಅವರ ಪ್ರತಿಮೆಗಳನ್ನು ಸ್ಥಾಪಿಸುವ ಸಲುವಾಗಿ ಸ್ಥಳೀಯ ಎರಡು ಪಕ್ಷಗಳ ನಡುವೆ ಉಂಟಾಗಿರುವ ಗಲಭೆಯನ್ನು, ಕರ್ನಾಟಕದಲ್ಲಿ ನಡೆದ ಘಟನೆ ಎಂದು ಕೋಮು ವೈಷಮ್ಯದ ಹೇಳಿಕೆಯೊಂದಿಗೆ ಹಂಚಿಕೊಂಡಿರುವ ಮಾಹಿತಿ ಸುಳ್ಳು.
ಇದನ್ನು ಓದಿದ್ದೀರಾ?
Fact Check : ಪಶ್ಚಿಮ ಬಂಗಾಳದ ಮುಸ್ಲಿಂ ಯುವಕ ಹಿಂದೂ ಬಾಲಕಿಗೆ ಇರಿದಿದ್ದಾನೆ ಎಂಬ ವೈರಲ್ ವೀಡಿಯೊ ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.