ಭಾರತದಲ್ಲಿ “ಮುಸ್ಲಿಂ ವೈದ್ಯರ ಸಂಘ” (MDA) ಕಾರ್ಯನಿರ್ವಹಿಸುತ್ತಿದೆ .ಮತ್ತು ಹಿಂದೂ ವೈದ್ಯರ ಸಂಘವಿದ್ದರೆ ಜಾತ್ಯತೀತರು ಹೇಗೆ ವರ್ತಿಸುತ್ತಿದ್ದರು? ಎಂಬ ಪೋಸ್ಟ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ಪೋಸ್ಟ್‌ರ್‌ನ ಹೆಸರನ್ನು ಕೀವರ್ಡ್ ಆಗಿ ಬಳಸಿಕೊಂಡು Google ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ “ಮುಸ್ಲಿಂ ವೈದ್ಯರ ಸಂಘ”ದ (MDA) ಅಧಿಕೃತ ಮುಸ್ಲಿಂ ಡಾಕ್ಟರ್ಸ್ ವೆಬ್‌ಸೈಟ್ ಲಭಿಸಿದೆ. ಅದರಲ್ಲಿ “ಮುಸ್ಲಿಂ ವೈದ್ಯರ ಸಂಘ ಮತ್ತು ಅಲೈಡ್ ಹೆಲ್ತ್ ಪ್ರೊಫೆಷನಲ್ಸ್ (CIC)” ಎಂಬ ಸಂಸ್ಥೆಗಳು ಯುಕೆಯಲ್ಲಿ 2004 ರಿಂದ ಕಾರ್ಯನಿರ್ವಹಿಸಿ ಪ್ರಶಸ್ತಿಗಳನ್ನು ಪಡೆದಿವೆ. ಆದರೆ ಈ ಸಂಸ್ಥೆಗಳು ಲಾಭದ ಉದ್ದೇಶಗಳನ್ನು ಹೊಂದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಂಘವು ಮೂಲತಃ ಲಂಡನ್‌ನಲ್ಲಿ ಪ್ರಾರಂಭವಾಗಿದ್ದು, ಮುಸ್ಲಿಂರು, ಅಲ್ಪಸಂಖ್ಯಾತರು, ಜನಾಂಗೀಯ ಮತ್ತು ಅಳಿವಿನ ಅಂಚಿನಲ್ಲಿರುವ ಸಮುದಾಯದವರನ್ನು ಬೆಂಬಲಿಸಿ ರಾಷ್ಟ್ರೀಯವಾಗಿ ಕಾರ್ಯನಿರ್ವಹಿಸಿದೆ. ಬ್ರಿಟನ್‌ದಾದ್ಯಂತ ಈ ಎಲ್ಲ ಸಮುದಾಯಗಳಲ್ಲಿ ದೈಹಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ಭಾವನಾತ್ಮಕವಾಗಿ ಯೋಗಕ್ಷೇಮವನ್ನು ಉತ್ತೇಜಿಸುವುದು ಸಂಘದ ಉದ್ದೇಶವಾಗಿದೆ.
ಈ ವೈರಲ್ ಪೋಸ್ಟ್‌ರ್ ಬಗ್ಗೆ ಮತ್ತಷ್ಟು ಹುಡುಕಿದಾಗ, 2019ರ ಸೆಪ್ಟೆಂಬರ್ 29 ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ರ್ ವೈರಲ್ ಆಗಿದ್ದು ಕಂಡುಬಂದಿತು. ಈ ಪೋಸ್ಟ್‌ರ್ ಮತ್ತು ವೈರಲ್ ಚಿತ್ರವೂ ಒಂದನ್ನೊಂದು ಹೋಲುತ್ತವೆ. ಫೇಸ್‌ಬುಕ್‌ನ ಪೋಸ್ಟ್‌ರ್‌ನಲ್ಲಿ “ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ನಮ್ಮ ಮೊದಲ ಮಿಡ್‌ಲ್ಯಾಂಡ್ಸ್ ಈವೆಂಟ್‌ನಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ಈ ಕಾರ್ಯಕ್ರಮ ಭಾಂದವ್ಯವನ್ನು ಬೆಸೆಯಲು ಉತ್ತಮವಾದ ಸಾಮಾಜಿಕ ಅವಕಾಶವಾಗಿದೆ. ನಮ್ಮ ಮುಂದಿನ ವಾರ್ಷಿಕ ಕೂಟದಲ್ಲಿ ಮತ್ತೆ ನಿಮ್ಮನ್ನು ಭೇಟಿಯಾಗಲು ಇಚ್ಛಿಸುತ್ತೇವೆ. ಹೆಚ್ಚಿನ ವಿವರಗಳನ್ನು ಅನುಸರಿಸಲಾಗುವುದು.” ಎಂದು ಹಂಚಿಕೊಂಡಿದ್ದಾರೆ. ಆದ್ದರಿಂದ ಈ ಕಾರ್ಯಕ್ರಮ ಭಾರತದಲ್ಲಿ ನಡೆದಿಲ್ಲ. ಇದು ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದೆ ಎಂಬುದು ನಿಖರವಾಗಿ ತಿಳಿದುಬಂದಿದೆ.
ಇದಲ್ಲದೆ, ತನಿಖೆಯ ಸಮಯದಲ್ಲಿ UK ಯಲ್ಲಿ ಹಿಂದೂ ವೈದ್ಯಕೀಯ ಸಂಘವಿದೆ ಎಂದು ತಿಳಿದು ಬಂದಿತು. ಈ ಸಂಘವು ಹಿಂದೂಗಳ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ ಬೆಂಬಲಿಸುತ್ತದೆ. ಮತ್ತು ಹಿಂದೂ ಧರ್ಮದ ತತ್ವಗಳ ಅಡಿಯಲ್ಲಿ ವೈದ್ಯರನ್ನು, ದಾದಿಯರನ್ನು ಮತ್ತು ಇತರ ಆರೋಗ್ಯ ಕಾರ್ಯಕರ್ತರನ್ನೆಲ್ಲ ಒಂದುಗೂಡಿಸಿ, ಅವರ ಅಭ್ಯಾಸಕ್ಕಾಗಿ ನೈತಿಕವಾದ ಚೌಕಟ್ಟನ್ನು ಒದಗಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದೆ ಎಂದು ವರದಿಯನ್ನು ತಯಾರಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬ್ರಿಟನ್ನಿನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ “ಮುಸ್ಲಿಂ ವೈದ್ಯರ ಸಂಘದ ಕಾರ್ಯಕ್ರಮ”ದ ಹಳೆಯ ಚಿತ್ರವನ್ನು ಭಾರತದ್ದು ಎಂದು ತಪ್ಪುದಾರಿಗೆಳೆಯುವ ರೀತಿಯಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿದ್ದೀರಾ?
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.