“ಈ ವಿಡಿಯೋ ನೋಡಿ ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಅಮೆರಿಕದ ಉಪಾಧ್ಯಕ್ಷೆ ಮತ್ತು ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಎಕ್ಸ್ ಅಂದರೆ ಈ ಹಿಂದಿನ ಟ್ವಿಟರ್ ಅನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ಮುಂದಿನ ದಿನಗಳಲ್ಲಿ ಡೆಮೊಕ್ರೆಟಿಕ್ ಪಕ್ಷ ಅಧಿಕಾರಕ್ಕೆ ಬಂದರೆ ಹೇಗೆ ಸರ್ವಾಧಿಕಾರ ನಡೆಯುತ್ತದೆ ಎಂಬುದಕ್ಕೆ ಕಮಲಾ ಅವರ ಹೇಳಿಕೆಯೇ ಉತ್ತಮ ಉದಾಹರಣೆ ಆಗಿದೆ.” ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
Kamala said she wants to shut down X if she wins.
pic.twitter.com/ASjdmxcjHt— aka (@akafacehots) September 2, 2024
ಇನ್ನೂ ಕೆಲವರು “ಇತ್ತೀಚಿಗೆ ಎಲಾನ್ ಮಾಸ್ಕ್ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸುತ್ತಿರುವ ಕಾರಣಕ್ಕಾಗಿ, ಕಮಲಾ ಹ್ಯಾರಿಸ್ ಅವರು ಈ ಬೆದರಿಕೆಯನ್ನು ಹಾಕಿದ್ದಾರೆ. ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನ ಹಿಂದಿನ ಸತ್ಯ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
Kamala supports what Brazil just did to X. How do I know? She wants to do it here: pic.twitter.com/nb4QXRiI9v
— End Wokeness (@EndWokeness) August 30, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜಿನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ 15 ಅಕ್ಟೋಬರ್ 2019ರ ಸಿಎನ್ಎನ್ ಡಿಬೇಟ್ ಪೋಸ್ಟ್ ಅನಲಿಸಿಸ್ ಎಂಬ ವೆಬ್‌ಸೈಟ್‌ನ ವರದಿಯೊಂದು ಇಂಟರ್‌ನೆಟ್ ಆರ್ಕೈವ್‌ನಲ್ಲಿ ಪತ್ತೆಯಾಗಿದೆ.
ಈ ವಿಡಿಯೋದಲ್ಲಿ ಕಮಲಾ ಹ್ಯಾರಿಸ್ ಅವರು ಸಿಎನ್ಎನ್ ನಿರೂಪಕನ ಪ್ರಶ್ನೆಗೆ ಉತ್ತರಿಸುತ್ತಾ, ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಫೇಸ್‌ಬುಕ್ ಖಾತೆ ಮತ್ತು ಟ್ವಿಟರ್ ಖಾತೆಯ ಅಮಾನತು ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ವಿಡಿಯೋದಲ್ಲಿ ಅವರು ಮಾತನಾಡಿದ್ದ ಕೆಲವೇ ಕೆಲವು ಕ್ಲಿಪ್‌ಗಳನ್ನು ಬೇರ್ಪಡಿಸಿ ಎಡಿಟ್ ಮಾಡಿ ಸುಳ್ಳು ನಿರೂಪಣೆ ಬರುವ ರೀತಿಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ ಎಂಬುದು ಪತ್ತೆಯಾಗಿದೆ. ಈ ಹಿಂದೆಯೂ ಕೂಡ ಡೊನಾಲ್ಡ್ ಟ್ರಂಪ್ ಅವರ ಸಾಮಾಜಿಕ ಜಾಲತಾಣದ ಅಮಾನತ್ತು ವಿಚಾರ ಚರ್ಚೆಯಾಗಿವೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಒಟ್ಟಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ, ಕಮಲ ಹಾರಿಸ್ ಅವರು ಎಕ್ಸ್ (ಈ ಹಿಂದಿನ ಟ್ವಿಟರ್) ಅನ್ನು ನಿಷೇಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಪ್ರತಿಪಾದನೆ ಸುಳ್ಳಾಗಿದೆ. ವೈರಲ್ ಆಗುತ್ತಿರುವ ವಿಡಿಯೋ ಎಡಿಟೆಡ್ ಆಗಿದ್ದು, ಈ ವಿಡಿಯೋ ಮೂಲಕ ಕಮಲಾ ಹ್ಯಾರಿಸ್ ಅವರ ವಿರುದ್ಧ ರಾಜಕೀಯ ಉದ್ದೇಶಕ್ಕಾಗಿ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ ಎಂಬುದು ಸಾಬೀತಾಗಿದೆ. ಈ ರೀತಿಯ ವಿಡಿಯೋಗಳು ನಿಮಗೆ ಅವುಗಳನ್ನು ನಂಬುವ ಅಥವಾ ಹಂಚಿಕೊಳ್ಳುವ ಮೊದಲು ಒಮ್ಮೆ ಪರಿಶೀಲಿಸಿ.
ಇದನ್ನೂ ಓದಿ : Fact Check | ಸಿಜೆಐ ಡಿ.ವೈ ಚಂದ್ರಚೂಡ್‌ರವರ ಕುಟುಂಬಕ್ಕೂ ಬಂಗಾಳ ಸಿಎಂರವರ ವೈದ್ಯರಾದ ಡಾ.ಎಸ್.ಪಿ ದಾಸ್‌ರವರಿಗೂ ಯಾವುದೇ ಸಂಬಂಧವಿಲ್ಲ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.