Fact Check : ಮೀಸಲಾತಿ ರದ್ದತಿಗೆ ಬೆಂಬಲಿಸಿದ್ದಾರೆ ಎಂದು ಭೂಪೇಂದರ್ ಸಿಂಗ್ ಹೂಡಾರವರ ತಿರುಚಿದ ವಿಡಿಯೋ ಹಂಚಿಕೆ

ಭಾರತದಲ್ಲಿ ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ಅಮೇರಿಕದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅಧಿಕಾರಕ್ಕೆ ಬಂದರೆ ಅವರ ಹೇಳಿಕೆಗಳನ್ನು ಬೆಂಬಲಿಸುತ್ತೇನೆ ಎಂಬ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

” ನಾನು ಅಧಿಕಾರಕ್ಕೆ ಬಂದರೆ ಜಾತಿ ಆಧಾರಿತ ಮೀಸಲಾತಿಯನ್ನು ರದ್ದುಗೊಳಿಸುವ ರಾಹುಲ್‌ ಗಾಂಧಿ ಹೇಳಿಕೆಗಳನ್ನು ಬೆಂಲಿಸುತ್ತೇನೆ” ಎಂದು ಭೂಪಿಂದರ್ ಸಿಂಗ್ ಹೂಡಾರ ವೀಡಿಯೊ ಕ್ಲಿಪ್‌ವೊಂದನ್ನು ಟೈಮ್ಸ್ ನೌ ನವಭಾರತ್ ನ್ಯೂಸ್ ಹಂಚಿಕೊಂಡಿದೆ.

ಫ್ಯಾಕ್ಟ್‌ ಚೆಕ್‌ :

ಈ ವೈರಲ್‌ ವೀಡಿಯೊದಲ್ಲಿನ ಭೂಪಿಂದರ್ ಸಿಂಗ್ ಹೂಡಾ ಮತ್ತು ಟೈಮ್ಸ್ ನೌ ನವಭಾರತ್’ ಎಂಬ ಕೀವರ್ಡ್‌ಗಳನ್ನು ಬಳಸಿಕೊಂಡು ಕೀಫ್ರೇಮ್‌ನ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ, 2024ರ ಮೇ 25ರಂದು ಹರಿಯಾಣ ಲೋಕಸಭೆಯ ಅಸೆಂಬ್ಲಿ ಚುನಾವಣೆಗೆ ಹೂಡಾ ಮತ ಚಲಾಯಿಸಿ, ಮಾಧ್ಯಮದವರೊಂದಿಗೆ ಮಾತನಾಡಿರುವ  YouTube ವೀಡಿಯೊ ಲಭಿಸಿದೆ. ಈ ಚುನಾವಣೆಯ ಸಮಯದಲ್ಲಿ ಮಾತನಾಡಿರುವ ಹೂಡಾರವರ ದೃಶ್ಯಗಳು ಮತ್ತು ಈ ವೈರಲ್‌ ವೀಡಿಯೊದಲ್ಲಿನ ಒಂದು ತುಣುಕಿನ ದೃಶ್ಯಗಳು ಒಂದನ್ನೊಂದು ಹೋಲುತ್ತವೆ. ಮೂಲ ವೀಡಿಯೋದಲ್ಲಿ, ಹೂಡಾ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಕಾಂಗ್ರೆಸ್ ಪರವಾಗಿ ಮಾತನಾಡಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಹಾಗಾಗಿ ಸುಳ್ಳು ಹೇಳಿಕೆಯನ್ನು ನೀಡಲು ನಕಲಿ ಹಿನ್ನೆಲೆ ಧ್ವನಿಯ ಮೂಲಕ ಭೂಪಿಂದರ್ ಸಿಂಗ್ ಹೂಡಾರಿಗೆ  ಸಂಬಂಧವಿಲ್ಲದ ಮಾಧ್ಯಮ ಸಂವಾದಗಳ ದೃಶ್ಯಗಳನ್ನು ಪೋಸ್ಟ್‌ಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ನಿಖರವಾಗಿ ಹೇಳಬಹುದು.

ವೈರಲ್ ವೀಡಿಯೋದಲ್ಲಿ ಹೂಡಾ ಸುದ್ದಿಗಾರರೊಂದಿಗೆ ಮಾತನಾಡುವ ಇತರ ದೃಶ್ಯಗಳು ಕಂಡುಬಂದಿವೆ. ಮತ್ತು ನಿರ್ದಿಷ್ಟ ಕೀವರ್ಡ್‌ನಿಂದ  ಹುಡುಕಿದಾಗ ಸೆಪ್ಟೆಂಬರ್ 11 ರಿಂದ ಕಾಂಗ್ರೆಸ್ ಅಭ್ಯರ್ಥಿಗಳ ನಾಮನಿರ್ದೇಶನಗಳ ಬಗ್ಗೆ ಮಾತನಾಡಿರುವ ಮೂಲ ವೀಡಿಯೊ ಲಭಿಸಿದೆ. ಎನ್‌ಡಿಟಿವಿ, ಎಬಿಪಿ ಮತ್ತು ಎಎನ್‌ಐ ಸೇರಿದಂತೆ ಹಲವಾರು ಸುದ್ದಿ ವಾಹಿನಿಗಳು ಹಂಚಿಕೊಂಡಿರುವ ಮೂಲ ವೀಡಿಯೊದಲ್ಲಿ ಮುಂಬರುವ ಚುನಾವಣೆಗಳಿಗೆ ಹರಿಯಾಣದಲ್ಲಿ ಆಪ್ ಜೊತೆಗಿನ ಪಕ್ಷದ ಮೈತ್ರಿ ಕುರಿತು ಹೂಡಾ ಅವರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಎರಡೂ ವೀಡಿಯೊಗಳಲ್ಲಿ ಹೂಡಾ ಜಾತಿ ಮೀಸಲಾತಿ ಕುರಿತು ಮಾತನಾಡಿಲ್ಲ. ಇತ್ತೀಚೆಗೆ, ಅಮೆರಿಕಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ “ಭಾರತವು ಸಮಾನ ಸ್ಥಿತಿಗೆ ಬಂದಾಗ” ಮಾತ್ರ ಮೀಸಲಾತಿಯನ್ನು ರದ್ದುಗೊಳಿಸುವ ಬಗ್ಗೆ ಪಕ್ಷವು ಯೋಚಿಸುತ್ತದೆ ಎಂದು ಹೇಳಿದರು. ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಜೊತೆಗಿನ ಚರ್ಚೆಯ ವೇಳೆಯಲ್ಲಿ ಕೊಟ್ಟ ಹೇಳಿಕೆಯೊಂದು ಗಾಂಧಿಯವರ ವಿರುದ್ಧ ರಾಜಕೀಯ ಕೋಲಾಹಲಕ್ಕೆ ಕಾರಣವಾಯಿತು. ನಂತರ ಅವರು ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದರು. ಮತ್ತು “ನಾನು ಮೀಸಲಾತಿಯ ವಿರುದ್ಧ ಅಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ” ಮತ್ತು 50% ಮಿತಿಯನ್ನು ಮೀರಿ ನಾವು ಮೀಸಲಾತಿಯನ್ನು ತೆಗೆದುಕೊಳ್ಳುತ್ತೇವೆ. ಹೆಚ್ಚುವರಿಯಾಗಿ ವೈರಲ್ ವೀಡಿಯೊದಲ್ಲಿನ ಅಕ್ಷರ, ವಿನ್ಯಾಸ ಮತ್ತು ಧ್ವನಿಯು ಟೈಮ್ಸ್ ನೌ ನವಭಾರತ್ ನ್ಯೂಸ್‌ ಹಂಚಿಕೊಂಡ ಸುದ್ದಿ ಯಾವುದೇ ಸುದ್ದಿಗಳೊಂದಿಗೆ ಹೊಂದಾಣಿಕೆಯಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಭೂಪಿಂದರ್ ಸಿಂಗ್ ಹೂಡಾರನ್ನು ಕುರಿತು ಸುಳ್ಳು ಸುದ್ದಿ ಹರಡಲು ಜಾತಿ ಮೀಸಲಾತಿಯ ಬಗ್ಗೆ ನಕಲಿ ಧ್ವನಿಯನ್ನು ಕೊಟ್ಟು ಹೂಡಾರವರಿಗೆ ಸಂಬಂಧವಿಲ್ಲದ ಮಾಧ್ಯಮ ಸಂವಾದಗಳ ದೃಶ್ಯಗಳನ್ನು ಪೋಸ್ಟ್‌ಗಳಲ್ಲಿ ಹಂಚಿಕೊಳ್ಳಲಾಗಿದೆ.


ಇದನ್ನು ಓದಿ:


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *