“1975, ತುರ್ತು ಪರಿಸ್ಥಿತಿ. ಇಂದಿರಾಗಾಂಧಿ ದೆಹಲಿ ಪೊಲೀಸರೊಂದಿಗೆ ಜೆಎನ್‌ಯುಗೆ ಪ್ರವೇಶಿಸಿದರು ಮತ್ತು ಆ ಸಮಯದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಸಿಪಿಐ ನಾಯಕ ಸೀತಾರಾಮ್ ಯೆಚೂರಿ ಅವರನ್ನು ಕ್ಷಮೆ ಕೇಳಲು ಒತ್ತಾಯಿಸಿದರು. ಇದರ ಜೊತೆಗೆ ಅಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದ ಅವರನ್ನು ರಾಜಿನಾಮೆ ನೀಡುವಂತೆ ಒತ್ತಾಯಿಸಿದರು. ಇದು ಇಂದಿರಾ ಗಾಂಧಿ ಅವರ ನಿಜವಾದ ಸರ್ವಾಧಿಕಾರ” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
@KarunaGopal1 @ShainaNC @smritiirani @TVMohandasPai @narendramodi @fayedsouza @ShivAroor @amitmalviya @RahulGandhi @SachinPilot Now i wud like d Cong. stooges to stand up n admit to wat dey did at JNU. Amit shah made a mistake to stick w/democratic response to dese Cong.hoodlums pic.twitter.com/A6lT6aheU4
— Fighting for d Truth (@FightingForLif6) January 10, 2020
ಈ ಫೋಟೋ ನೋಡಿದ ಸಾಕಷ್ಟು ಮಂದಿ ವೈರಲ್ ಫೋಟೋದಲ್ಲಿನ ಟಿಪ್ಪಣಿಯನ್ನು ನೋಡಿ, ಇದು ನಿಜವಾದ ಘಟನೆ ಇರಬಹುದು ಎಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗೆ ಬಿಜೆಪಿ ಬೆಂಬಲಿಗರು ಸೇರಿ ವಿವಿಧ ರಾಜಕೀಯ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧದ ಬರಹಗಳನ್ನು ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್‌ನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
Folks is this true @SitaramYechury ? pic.twitter.com/kS5fqAeYi2
— Mohandas Pai (@TVMohandasPai) January 10, 2020
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು ಈ ವೇಳೆ ನಮಗೆ 28 ಫೆಬ್ರವರಿ 2016ರಂದು ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದ Hanging up sacred thread: Yechury on combining class and caste struggle ಎಂಬ ಶೀರ್ಷಿಕೆಯಡಿ ಪ್ರಕಟಿಸಿದ ಅಂಕಣವೊಂದು ಕಂಡುಬಂದಿದೆ.
ಈ ಅಂಕಣದಲ್ಲಿ ವೈರಲ್ ಫೋಟೋ ಕೂಡ ಕಂಡು ಬಂದಿದ್ದು ಅದರಲ್ಲಿ “ಜೆಎನ್‌ಯುನಲ್ಲಿ ವಿದ್ಯಾರ್ಥಿ ನಾಯಕರಾಗಿ ಸೀತಾರಾಮ್ ಯೆಚೂರಿ ಅವರು ಸೆಪ್ಟೆಂಬರ್ 5, 1977 ರಂದು ಇಂದಿರಾ ಗಾಂಧಿ ಅವರಿಗೆ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಸಲ್ಲಿಸಿದ ಜ್ಞಾಪಕ ಪತ್ರವನ್ನು ಓದದಿದ್ದರು” ಎಂದು ಉಲ್ಲೇಖಿಸಲಾಗಿತ್ತು. ಇನ್ನು CPI(M)ನ ವೆಬ್‌ಸೈಟ್‌ನಲ್ಲಿರುವ ಸೀತಾರಾಮ್ ಯೆಚೂರಿ ಅವರ ಪ್ರೊಫೈಲ್‌ನಲ್ಲಿ ಕೂಡ 1977 ರಲ್ಲಿ JNU ನಲ್ಲಿ ಯೆಚೂರಿ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾದರು ಎಂದು ದೃಢಪಡಿಸುತ್ತದೆ. ಯೆಚೂರಿ ಅವರು CPI(M) ಗೆ ಸೇರಿದರು ಮತ್ತು 1975 ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಂಧಿಸಲ್ಪಟ್ಟರು. ತುರ್ತು ಪರಿಸ್ಥಿತಿಯ ನಂತರವೇ 1977ರಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು ಎಂಬ ಮಾಹಿತಿ ಕೂಡ ಇದೆ.
ಒಟ್ಟಾರೆಯಾಗಿ ಹೇಳುವುದಾದರೆ 1975, ತುರ್ತು ಪರಿಸ್ಥಿತಿ. ಇಂದಿರಾಗಾಂಧಿ ದೆಹಲಿ ಪೊಲೀಸರೊಂದಿಗೆ ಜೆಎನ್‌ಯುಗೆ ಪ್ರವೇಶಿಸಿದರು ಮತ್ತು ಆ ಸಮಯದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಸಿಪಿಐ ನಾಯಕ ಸೀತಾರಾಮ್ ಯೆಚೂರಿ ಅವರನ್ನು ಕ್ಷಮೆ ಕೇಳಲು ಒತ್ತಾಯಿಸಿದರು ಹಾಗೂ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದ ಅವರನ್ನು ರಾಜಿನಾಮೆ ನೀಡುವಂತೆ ಒತ್ತಾಯಿಸಿದರು ಎಂಬುದು ಸುಳ್ಳು. ಸೀತಾರಾಮ್ ಯೆಚೂರಿ 1977 ರಲ್ಲಿ JNU ಅಧ್ಯಕ್ಷರಾಗಿದ್ದರು. ಹಾಗಾಗಿ ವೈರಲ್ ಪೋಸ್ಟ್ ಸುಳ್ಳಿನಿಂದ ಕೂಡಿದೆ.
ಇದನ್ನೂ ಓದಿ : Fact Check | ವಂದೇ ಭಾರತ್ ರೈಲಿನ ಗಾಜು ಒಡೆದವರು ಮುಸ್ಲಿಂ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.