“ಈ ಫೋಟೋ ನೋಡಿ ಇದು ಭಾರತದಲ್ಲಿ ನಡೆದ ಮುಸ್ಲಿಂ ವೈದ್ಯರ ಕಾರ್ಯಕ್ರಮ ಇದಕ್ಕೆ ‘ಮುಸ್ಲಿಂ ಡಾಕ್ಟರ್ಸ್ ಅಸೋಸಿಯೇಷನ್’ ಎಂಬ ಹೆಸರಿದೆ. ಒಂದು ವೇಳೆ ಇದೇ ರೀತಿ ಹಿಂದೂ ವೈದ್ಯರ ಸಂಘಟನೆ ಏನಾದರು ಭಾರತದಲ್ಲಿ ಇದ್ದಿದ್ದರೆ ಇನ್ನು ಈ ಜಾತ್ಯಾತೀತರು ಒಪ್ಪುತ್ತಿದ್ದರೆ.” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಈ ಪೋಸ್ಟ್ ನೋಡಿದ ಹಲವು ಮಂದಿ ಮುಸ್ಲಿಂ ಸಮುದಾಯದ ವೈದ್ಯರ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದು, ಈ ಪೋಸ್ಟ್ ಅನ್ನು ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಮುಸ್ಲಿಂ ಸಮುದಾಯದ ವೈದ್ಯರ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುತ್ತಿದೆ. ಹೀಗೆ ವಿವಿಧ ರೀತಿಯ ಟಿಪ್ಪಣಿಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಫೋಟೊ ಹಾಗೂ ಪೋಸ್ಟ್ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀನೆ ನಡೆಸೋಣ
दुनिया के कई देशों में मुस्लिम डॉक्टर एसोसिएशन बन गया है
यहां भारत के कई शहरों में मुस्लिम डॉक्टर ने अपना संगठन बना लिया है जिसमें गुजरात के बड़ौदा में बड़ौदा मुस्लिम डॉक्टर एशोसिएशन प्रमुख है इनका अपना लोगो है जिसमें मस्जिद की मीनार है
जो जो मुस्लिम डॉक्टर इस एसोसिएशन से… pic.twitter.com/CWEhgtpOCM
— 🇮🇳Jitendra pratap singh🇮🇳 (@jpsin1) June 22, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆಯನ್ನು ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು ಈ ವೇಳೆ ನಮಗೆ ಮುಸ್ಲಿಂ ಡಾಕ್ಟರ್ಸ್ ಅಸೋಸಿಯೇಷನ್ ಎಂಬ ಫೇಸ್‌ಬುಕ್ ಖಾತೆಯಿಂದ 29 ಸೆಪ್ಟೆಂಬರ್ 2019 ರಂದು ಹಂಚಿಕೊಳ್ಳಲಾದ ಪೋಸ್ಟ್‌ವೊಂದು ಕಂಡು ಬಂದಿದೆ.
ಈ ಪೋಸ್ಟ್‌ನಲ್ಲಿ ಹಂಚಿಕೊಂಡ ಟಿಪ್ಪಣಿಯಲ್ಲಿ “ಬರ್ಮಿಂಗ್‌ಹ್ಯಾಮ್‌ನಲ್ಲಿನ ನಮ್ಮ ಮೊದಲ ಮಿಡ್‌ಲ್ಯಾಂಡ್ಸ್ ಈವೆಂಟ್‌ನಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ಇದು ನೆಟ್‌ವರ್ಕ್ ಮಾಡಲು ಉತ್ತಮ ಸಾಮಾಜಿಕ ಅವಕಾಶವಾಗಿತ್ತು. ನಮ್ಮ ಮುಂದಿನ ಕೂಟದಲ್ಲಿ – ವಾರ್ಷಿಕ ಭೋಜನದಲ್ಲಿ ನಿಮ್ಮನ್ನು ನೋಡಲು ನಾವು ಎದುರು ನೋಡುತ್ತಿದ್ದೇವೆ. ಹೆಚ್ಚಿನ ವಿವರಗಳನ್ನು ಅನುಸರಿಸಲಾಗುವುದು. ” ಇದರಿಂದ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಭಾರತದಲ್ಲಿ ಅಲ್ಲ ಎಂಬುದು ಸ್ಪಷ್ಟವಾಗಿದೆ
ಇನ್ನು ಇದೇ ರೀತಿಯಾಗಿ ಬೇರೆ ಯಾವುದಾದರು ಧರ್ಮಕ್ಕೆ ಸೇರಿದ ವೈದ್ಯರು ಇಂಗ್ಲೆಂಡ್‌ನಲ್ಲಿ ಸಂಘಟನೆ ಮಾಡಿದ್ದಾರೆಯೇ ಎಂದು ಹುಡುಕಾಟವನ್ನು ನಡೆಸಿದಾಗ ಇಂಗ್ಲೆಂಡ್‌ನಲ್ಲಿ ಹಿಂದೂ ವೈದ್ಯಕೀಯ ಸಂಘವಿದೆ ಎಂದು ನಾವು ಕಂಡುಕೊಂಡಿದ್ದೇವೆ , ಅದು ಹಿಂದೂ ವೈದ್ಯರು, ನರ್ಸ್, ದಾದಿಯರ ಸದಸ್ಯತ್ವವನ್ನು ಹೊಂದಿದ್ದು, ಈ ಗುಂಪು ಹಿಂದೂ ಧರ್ಮದ ತತ್ವಗಳ ಅಡಿಯಲ್ಲಿ ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರನ್ನು ಒಂದುಗೂಡಿಸುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬರ್ಮಿಂಗ್‌ಹ್ಯಾಮ್‌ನಲ್ಲಿ ಮುಸ್ಲಿಂ ವೈದ್ಯರ ಸಂಘದ ಕಾರ್ಯಕ್ರಮದ ಹಳೆಯ ಚಿತ್ರವನ್ನು ಭಾರತದ್ದು ಎಂಬಂತೆ ತಪ್ಪುದಾರಿಗೆಳೆಯುವ ರೀತಿಯಲ್ಲಿ ಹಂಚಿಕೊಳ್ಳಲಾಗಿದೆ. ಯುಕೆಯಲ್ಲಿ ಹಿಂದೂ ವೈದ್ಯಕೀಯ ಸಂಘವೂ ಇದೆ ಎಂಬುದು ತಿಳಿದು ಬಂದಿದೆ ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮುನ್ನ ಒಮ್ಮೆ ಪರಿಶೀಲಿಸುವುದು ಉತ್ತಮ.
ಇದನ್ನೂ ಓದಿ : Fact Check | ಇಂದಿರಾ ಗಾಂಧಿ JNU ನುಗ್ಗಿ ಸೀತಾರಾಮ್ ಯೆಚೂರಿ ಅವರನ್ನು ಕ್ಷಮೆ ಕೇಳಲು ಒತ್ತಾಯಿಸಿದ್ದರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.