Fact Check : ಬೆಂಗಳೂರು-ಮೈಸೂರು ಹೈವೇಯಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ವೀಡಿಯೊ ಗದಗಿನದ್ದು

ಬೆಂಗಳೂರು-ಮೈಸೂರು

ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯ ನಿಡ್ಲಘಟ್ಟ ಸರ್ವೀಸ್‌ ರಸ್ತೆಯಲ್ಲಿ ರಾತ್ರಿ ಹೊತ್ತಲ್ಲಿ  ಚಿರತೆಯೊಂದು ಕಾಣಿಸಿಕೊಂಡಿದೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

Fact Check: ಬೆಂಗಳೂರು-ಮೈಸೂರು ಹೈವೇಯಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದ ವೀಡಿಯೋ ಗದಗದ್ದು!

ಫ್ಯಾಕ್ಟ್‌ ಚೆಕ್‌ :

ಈ ವೈರಲ್ ವೀಡಿಯೊ ಕುರಿತು ಸತ್ಯಾಂಶಗಳನ್ನು ತಿಳಿದುಕೊಳ್ಳಲು ಕೀಫ್ರೇಂಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ ಈ ಘಟನೆಯನ್ನು 2023ರ ಎಪ್ರಿಲ್ 17ರಂದು  Marvelous belgaum  ಫೇಸ್‌ಬುಕ್‌ ಖಾತೆಯ ಪೋಸ್ಟ್‌ರ್‌ ಲಭಿಸಿದೆ. ಈ ಪೋಸ್ಟ್‌ರ್‌ನಲ್ಲಿ ವೈರಲ್‌ ಆದ ವೀಡಿಯೊ ಬೆಳಗಾವಿಯದ್ದಲ್ಲ, ಗದಗಿನದ್ದು ಎಂದು ತಿಳಿದುಬಂದಿತು. ಇದನ್ನು ಸಾಕ್ಷ್ಯವಾಗಿರಿಸಿಕೊಂಡು ಮತ್ತಷ್ಟು ಶೋಧನೆ ನಡೆಸಿದಾಗ ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ವರದಿಗಳು ದಾಖಲಾಗಿವೆ.

2023ರ ಎಪ್ರಿಲ್‌ 17ರಂದು ಇಟಿವಿ ಭಾರತ್  ವರದಿಯನ್ನು ತಯಾರಿಸಿದೆ. ಅದರಲ್ಲಿ “ಗದಗ : ಬಿಂಕದಕಟ್ಟಿ ಬಳಿಯ ಬೈಪಾಸ್ ಸರ್ವೀಸ್ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ” ಎಂದು ಉಲ್ಲೇಖಿಸಲಾಗಿದೆ.  ಬಿಂಕದಕಟ್ಟಿ ಬಳಿಯ ಬೈಪಾಸ್ ಸರ್ವೀಸ್ ರಸ್ತೆಯಲ್ಲಿ ಭಾನುವಾರ ರಾತ್ರಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಚಿರತೆ ಪತ್ತೆಯಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಆರಾಮದಾಯಕವಾಗಿ ವಿಶ್ರಾಂತಿ ರೀತಿಯಲ್ಲಿ ಚಿರತೆ ಕಂಡು ಬಂದಿದ್ದು, ಪ್ರಯಾಣಿಕರು ಚಿರತೆಯ ವೀಡಿಯೊವನ್ನು ಸೆರೆ ಹಿಡಿದಿರುವ ದೃಶ್ಯಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Fact Check: ಬೆಂಗಳೂರು-ಮೈಸೂರು ಹೈವೇಯಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದ ವೀಡಿಯೋ ಗದಗದ್ದು!

ಎಪ್ರಿಲ್‌ 17, 2023ರ ಟೈಮ್ಸ್ ನೌ ಸುದ್ದಿವಾಹಿನಿ ವರದಿಯನ್ನು ತಯಾರಿಸಿದೆ. ಈ ವರದಿಯಲ್ಲಿ ಗದಗಿನ ಬಿಂಕದಟ್ಟಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಭಾನುವಾರ ಚಿರತೆ ಕಾಣಿಸಿಕೊಂಡಿದೆ. ಇದರಿಂದ ದ್ವಿಚಕ್ರವಾಹನದ ಕೆಲವು ಸವಾರರು ಆತಂಕಗೊಂಡಿದ್ದಾರೆ. ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ. ಅರಣ್ಯಇಲಾಖೆಯವರು, ಹತ್ತಿರದ ಅಸುಂಡಿ, ಬಿಂಕದಕಟ್ಟಿ, ಟೀಚರ್ಸ್ ಕಾಲನಿಯ ನಿವಾಸಿಗಳಿಗೆ ಸೂರ್ಯಾಸ್ತದ ಬಳಿಕ ಸಂಚರಿಸುವಾಗ ಬಹಳಷ್ಟು ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.

2023ರ ಎಪ್ರಿಲ್‌ 17ರಂದು ವಿಸ್ತಾರ ನ್ಯೂಸ್‌  YouTube ಚಾನಲ್‌ನಲ್ಲಿ “ಗದಗದ ಬಿಂಕದಕಟ್ಟಿಯಲ್ಲಿ ತಡರಾತ್ರಿ ಚಿರತೆ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ.” ಎಂಬ ವೀಡಿಯೊ ವೈರಲ್‌ ಆಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಗದಗ ಬಳಿಯ ಬಿಂಕದಕಟ್ಟಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಕಂಡುಬಂದಿರುವುದನ್ನು, ಬೆಂಗಳೂರಿನ ಜನರಿಗೆ ಆತಂಕ ಹುಟ್ಟಿಸುವ ಸಲುವಾಗಿ ಬೆಂಗಳೂರು-ಮೈಸೂರು ಹೈವೇಯಲ್ಲಿ ಚಿರತೆ ಕಂಡುಬಂದಿದೆ ಎಂಬ ಸುಳ್ಳು ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.


ಇದನ್ನು ಓದಿ:


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *