ದಿವಂಗತ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಅವರ ಶವವನ್ನು ಅಂತ್ಯಸಂಸ್ಕಾರ ಮಾಡುವ ಬದಲು ಮರದ ಪೆಟ್ಟಿಗೆಯಲ್ಲಿ ಸಂಸ್ಕರಿಸಿ ಇಡಲಾಗಿದೆ. ಅವರು ಕ್ರೈಸ್ತ ಧರ್ಮದವರು ಎಂಬ ಪೋಸ್ಟ್‌ರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಮಾರ್ಕ್ಸ್‌ವಾದಿ ನಾಯಕ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿಯಾಗಿದ್ದ ಸೀತಾರಾಂ ಯೆಚೂರಿ ಅವರ ಮರಣದ ನಂತರ, ಅವರು ಕ್ರೈಸ್ತ ಧರ್ಮದಲ್ಲಿನ ನಂಬಿಕೆಯಿಂದ ಹೇಳಿರುವ ವದಂತಿಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಅವರ ಅಂತ್ಯಕ್ರಿಯೆಯ ವೇಳೆ ಅವರ ದೇಹವನ್ನು ಮರದ ಪೆಟ್ಟಿಗೆಯಲ್ಲಿ ಸಂಸ್ಕರಣೆ ಮಾಡಲಾಗಿದೆ.
ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಯೆಚೂರಿಯವರು ತಮ್ಮ 72 ನೇ ವಯಸ್ಸಿನಲ್ಲಿ, 2024ರ ಸೆಪ್ಟೆಂಬರ್ 12ರಂದು ದೆಹಲಿಯ AIIMS ನಲ್ಲಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಯ ಚಿತ್ರಗಳು ಮತ್ತು ವೀಡಿಯೊಗಳು ವೈರಲ್ ಆಗುತ್ತಿದ್ದಂತೆ, ಹಲವಾರು ಬಲಪಂಥೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ಯೆಚೂರಿಯನ್ನು ಹಿಂದೂ ಸಂಪ್ರದಾಯಗಳ ಪ್ರಕಾರ ಅಂತ್ಯಸಂಸ್ಕಾರ ಮಾಡಲಾಗಿಲ್ಲ ಮತ್ತು ಅವರ ದೇಹವನ್ನು ಶವಪೆಟ್ಟಿಗೆಯಲ್ಲಿ ಇರಿಸಲಾಗಿದೆ ಎಂದು ಹೈಲೆಟ್ ಮಾಡಿ ಬಳಕೆದಾರರು ಯೆಚೂರಿ ಕ್ರೈಸ್ತ ಧರ್ಮದವರು ಎಂದು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ಆದ ಚಿತ್ರಗಳನ್ನು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ದಿವಂಗತ ಯೆಚೂರಿಯವರ ಪಾರ್ಥಿವ ಶರೀರವನ್ನು ವೀಕ್ಷಣೆಗೆ ಇರಿಸಿದ್ದಾಗ ತೆಗೆಯಲಾಗಿದೆ. ಯೆಚೂರಿಯವರು ತಮ್ಮ ರಾಜಕೀಯ ಜೀವನವನ್ನು ಈ ವಿಶ್ವವಿದ್ಯಾನಿಲಯದಲ್ಲಿ ಆರಂಭಿಸಿದ್ದರು. ಈ ವೇಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
JNU pays homage to beloved Comrade Sitaram Yechury.
JNU Will continue his legacy of struggle for secular democratic and just society ✊🏾Lal Selam Comrade!!
Long Live #SitaramYechury !! pic.twitter.com/pG9viMnx3z— JNUSU Official (@jnusu_official) September 13, 2024
ಈ ವೈರಲ್ ದೃಶ್ಯವು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಯೆಚೂರಿ ಅವರ ಪಾರ್ಥಿವ ಶರೀರವನ್ನು ಹೊತ್ತುಕೊಂಡು ಶವಪೆಟ್ಟಿಗೆಯ ಸುತ್ತಲೂ ನಿಂತು ಶ್ರದ್ಧಾಂಜಲಿಯನ್ನು ಸಲ್ಲಿಸುವ ದೃಶ್ಯವನ್ನು ತೋರಿಸುತ್ತದೆ. ಹಾಗಾಗಿ ಬಳಕೆದಾರರು ಪೋಸ್ಟ್ ಮಾಡಿದ ಚಿತ್ರಗಳು ಸುಳ್ಳಿನಿಂದ ಕೂಡಿವೆ ಎಂಬುದು ನಿಖರವಾಗಿ ತಿಳಿದುಬಂದಿದೆ.
ಯೆಚೂರಿಯವರು ಚೆನ್ನೈನಲ್ಲಿ ತೆಲುಗು ಮಾತನಾಡುವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು. ಅವರು ನಾಸ್ತಿಕರಾಗಿದ್ದರು ಮತ್ತು ಯಾವುದೇ ಧಾರ್ಮಿಕ ನಂಬಿಕೆಗಳನ್ನು ಹೊಂದಿಲ್ಲ ಎಂದು ಹಲವಾರು ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದಾರೆ. 2017 ರ ಏಪ್ರಿಲ್ 22ರಂದು ಎಕ್ಸ್ ಪೋಸ್ಟ್ (ಹಿಂದೆ ಟ್ವೀಟ್) ನಲ್ಲಿ, ಯೆಚೂರಿ ಅವರು ನಾಸ್ತಿಕ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಯಚೂರಿಯವರು ಹಿಂದೂಸ್ತಾನ್ ಟೈಮ್ಸ್‌ನ ಸಂದರ್ಶನದಲ್ಲಿ ತಮ್ಮ ಇಪ್ಪತ್ತನೇ ವಯಸ್ಸಿನಿಂದಲೂ ನಾಸ್ತಿಕನಾಗಿದ್ದೇನೆ ಎಂದು ತಿಳಿಸಿದ್ದಾರೆ.
What do you mean by ‘sanctity’? Is the Law minister doing charity by giving ‘sanctity’? Sanctity is provided by the Indian Constitution. pic.twitter.com/1alLcIjtRA
— Sitaram Yechury (@SitaramYechury) April 22, 2017
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸದಸ್ಯರಾದ ಸುಜನ್ ಚಕ್ರವರ್ತಿಯವರನ್ನು ಭೇಟಿಯಾಗಿ ಯೆಚೂರಿಯವರ ಕುರಿತು ಚರ್ಚೆ ನಡೆಸಿದಾಗ, “ಅವರು ಹಿಂದೂ ಕುಟುಂಬದಲ್ಲಿ ಜನಿಸಿದ್ದರು ಆದರೆ ಅವರು ನಾಸ್ತಿಕರಾಗಿದ್ದರು” ಎಂದು ಚಕ್ರವರ್ತಿಯವರು ಕನ್ನಡ ಫ್ಯಾಕ್ಟ್ ಚೆಕ್ ತಂಡಕ್ಕೆ ತಿಳಿಸಿದ್ದಾರೆ.
ಯೆಚೂರಿ ಕ್ರೈಸ್ತ ಧರ್ಮದವರು ಎಂದು ಹೇಳಲು ಏಕೈಕ ಆಧಾರವೆಂದರೆ ಅವರನ್ನು ಹಿಂದೂಗಳ ಅಂತಿಮ ವಿಧಿ ವಿಧಾನಗಳನ್ನು ಅನುಸರಿಸಿ ಅಂತ್ಯಸಂಸ್ಕಾರ ಮಾಡುವ ಬದಲು ಶವಪೆಟ್ಟಿಗೆಯಲ್ಲಿ ಅವರ ಶವವನ್ನು ಇರಿಸಿದ್ದರಿಂದಾಗಿ ಬಳಕೆದಾರರು ಎಕ್ಸ್ ಪೋಸ್ಟ್‌ಗಳ ಮೂಲಕ ಯೆಚೂರಿ ಕ್ರೈಸ್ತ ಧರ್ಮದವರು ಎಂದು ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಯೆಚೂರಿ ಅವರ ಸ್ನೇಹಿತರು, ಕುಟುಂಬಸ್ಥರು ಮತ್ತು ಅಭಿಮಾನಿಗಳು ಅವರನ್ನು ಬೀಳ್ಕೊಟ್ಟ ನಂತರ ಅವರ ದೇಹವನ್ನು ವೈದ್ಯಕೀಯ ಅಧ್ಯಯನಕ್ಕಾಗಿ ದೆಹಲಿಯ ಏಮ್ಸ್‌ಗೆ ಕಳಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
Comrade Sitaram Yechury’s body was handed over to AIIMS Delhi for medical study after a solemn procession by those who gathered to bid farewell. His indelible memories will inspire and fuel our continued struggles for a more just and equitable society.
Lal salaam Comrade… pic.twitter.com/h1DtzgFITK
— Pinarayi Vijayan (@pinarayivijayan) September 14, 2024
ಯೆಚೂರಿಯವರ ಮರಣದ ನಂತರ ಅವರ ದೇಹವನ್ನು ಶವಪೆಟ್ಟಿಗೆಯಲ್ಲಿ ಇರಿಸಲಾಗಿದೆ. ನಂತರ ಸಂಶೋಧನೆಗಾಗಿ ದೆಹಲಿಯ ಏಮ್ಸ್‌ಗೆ ಕಳುಹಿಸಲಾಗುವುದು. ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಯಾವುದೇ ಅಂತಿಮ ವಿಧಿವಿಧಾನಗಳನ್ನು ಅಥವಾ ಯಾವುದೇ ರೀತಿಯ ಧಾರ್ಮಿಕ ಪದ್ಧತಿಗಳನ್ನು ನಡೆಸಿಲ್ಲ ಎಂದು ದಿ ಹಿಂದೂ ಪತ್ರಿಕೆಯ ಲೇಖನದಲ್ಲಿ ವರದಿಯಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಯೆಚೂರಿಯವರ ಶವವನ್ನು ಮರದ ಪೆಟ್ಟಿಗೆಯಲ್ಲಿ ಸಂಸ್ಕರಿಸಿಟ್ಟು ಸಂಶೋಧನೆಗಾಗಿ ದೆಹಲಿಯ ಏಮ್ಸ್‌ಗೆ ಕಳುಹಿಸಲಾಗುವುದು ಎಂಬ ಸುದ್ದಿಯನ್ನು, ಬಳಕೆದಾರರು ಯೆಚೂರಿಯವರು ಕ್ರೈಸ್ತ ಧರ್ಮದವರು ಎಂಬ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಇಂತಹ ಸುದ್ದಿಗಳನ್ನು ಹಂಚಿಕೊಳ್ಳುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿದ್ದೀರಾ?
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.