Fact Check | ಲಡಾಖ್‌ನಲ್ಲಿ ‘3 ಈಡಿಯಟ್ಸ್’ ಚಿತ್ರೀಕರಿಸಲಾದ ಸ್ಥಳವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂಬುದು ಸುಳ್ಳು

ಪಂಗಾಂಗ್ ಸರೋವರದ ಭಾರತದ ಭಾಗವನ್ನು ಚೀನಾ ವಶಪಡಿಸಿಕೊಂಡಿದೆ. ಅದರಲ್ಲೂ ಭಾರತೀಯರಿಗೆ ಪರಿಚಿತವಾದ ಮತ್ತು ಅಮೀರ್ ಖಾನ್ ಅಭಿನಯದ ತ್ರಿ ಈಡಿಯಟ್ಸ್‌ನ ಸೀಕ್ವೆನ್ಸ್ ಅನ್ನು ಚಿತ್ರೀಕರಿಸಿದ ಸ್ಥಳವನ್ನು ಇತ್ತೀಚೆಗೆ ಚೀನಾ ವಶಪಡಿಸಿಕೊಂಡಿದೆ. ಆದರೆ ಈ ಬಗ್ಗೆ ಭಾರತಕ್ಕೆ ಯಾವುದೇ ಮಾಹಿತಿ ಇಲ್ಲ. ಈಗ ಚೀನಾ ಇಲ್ಲಿ ಪ್ರವಾಸಕ್ಕೆ ಮುಕ್ತ ಅವಕಾಶವನ್ನು ಕೂಡ ಕಲ್ಪಿಸಿದೆ.” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. 

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಫೋಟೋದಲ್ಲಿ ಚೀನಿ ವ್ಯಕ್ತಿಯೊಬ್ಬ ಕಂಡು ಬಂದಿದ್ದು, ಇದರಲ್ಲಿ  ಪಂಗಾಂಗ್‌ ಸರೋವರವಿರುವುದು ದೃಢ ಪಟ್ಟಿದೆ. ಹಾಗಾಗಿ ವೈರಲ್‌ ಫೋಟೋವನ್ನು ಬಳಸಿಕೊಂಡು ಹಲವರು ವಿವಿಧ ರೀತಿಯಾದ ಟಿಪ್ಪಣಿಗಳನ್ನು ಬರೆದು ವೈರಲ್‌ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಫೋಟೋದ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಚಿತ್ರಕ್ಕೆ ಸಂಬಂಧಿಸಿದ ಕೀವರ್ಡ್‌ಗಳನ್ನು ಗೂಗಲ್‌ನಲ್ಲಿ ಹುಡುಕಿದಾಗ, ನಮಗೆ  11 ಡಿಸೆಂಬರ್‌ 2014 ರಂದು ಎಕನಾಮಿಕ್ ಟೈಮ್ಸ್‌ನಲ್ಲಿ ಪ್ರಕಟವಾದ ಲೇಖನವೊಂದು ಕಂಡುಬಂದಿದೆ , ಆ ಲೇಖನದಲ್ಲಿ ವೈರಲ್‌ ಫೋಟೋದಲ್ಲಿನ ಸ್ಥಳವನ್ನು ‘ಪಾಂಗಾಂಗ್ ಲೇಕ್’ ಎಂದು ಗುರುತಿಸಿದೆ. ಇದರ ಜೊತೆಗೆ ಭಾರತ ಮತ್ತು ಚೀನಾದ ಮಧ್ಯೆ ಪಂಗಾಂಗ್‌ ಸರೋವರದ ಹಂಚಿಕೆ ಇರುವ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕುರಿತು ಹುಡುಕಾಟವನ್ನು ನಡೆಸಿದಾಗ ಪಾಂಗಾಂಗ್‌ ಸರೋವರ ಭಾರತ ಹಾಗೂ ಚೀನಾದ ನಡುವೆ ಹಂಚಿಕೆಯಾಗಿರುವುದು ತಿಳಿದುಬಂದಿದ್ದು, ಈ ಹಿಂದೆ ತ್ರಿ ಈಡಿಯಟ್‌ ಸಿನಿಮಾವನ್ನು ಭಾರತದ ಭೂಪ್ರದೇಶದಲ್ಲಿರುವ ಪಾಂಗಾಂಗ್‌ ಸರೋವರದಲ್ಲಿ ಚಿತ್ರೀಕರಿಸಿರುವುದು ಕೂಡ ಕಂಡು ಬಂದಿದೆ. ಈ ಬಗೆಗಿನ ಅಧಿಕೃತ ಮಾಹಿತಿಗಾಗಿ ವೈರಲ್‌ ಇಮೇಜ್‌ನಲ್ಲಿ ಚಿತ್ರದ ಕುರಿತು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದಾಗ ವೈರಲ್‌ ವಿಡಿಯೋದಲ್ಲಿನ ಗುಡ್ಡ ಮತ್ತು ಭಾರತದ ಸುಪರ್ದಿಯಲ್ಲಿರುವ ಗುಡ್ಡದ ನಡುವೆ ಸಾಕಷ್ಟು ಹೋಲಿಕೆಯಿದ್ದು, ಇದು ಪಾಂಗಾಂಗ್‌ ಸರೋವರ ಎಂಬುವುದು ದೃಢಪಟ್ಟಿದೆ. ಇನ್ನು ಇದಕ್ಕೆ ಪೂರಕ ಎಂಬಂತೆ ಕೆಲವೊಂದು ಯುಟ್ಯೂಬ್‌ ವಿಡಿಯೋಗಳನ್ನು ಪರಿಶೀಲನೆ ನಡೆಸಿದಾಗ, ಅದರಲ್ಲೂ ಕೂಡ ಭಾರತಕ್ಕೆ ಸೇರಿದ ಪಾಂಗಾಂಗ್‌ ಸರೋವರದ ವಿಡಿಯೋ ಹಾಗೂ ವೈರಲ್‌ ವಿಡಿಯೋದ ನಡುವೆ ಇನ್ನಷ್ಟು ಹೋಲಿಕೆ ಇರುವುದು ಕಂಡು ಬಂದಿರುವುದು ಸ್ಪಷ್ಟವಾಗಿದೆ.

 

 

ಒಟ್ಟಾರೆಯಾಗಿ ಹೇಳುವುದಾದರೆ ಇತ್ತೀಚೆಗೆ ತ್ರಿ ಈಡಿಯಟ್‌ ಚಿತ್ರೀಕರಣವಾದ ಪಾಂಗಾಂಗ್‌ ಸರೋವರದ ಪ್ರದೇಶವನ್ನು ಚೀನಾ ವಶ ಪಡಿಸಿಕೊಂಡಿದೆ ಎಂಬುದು ಸುಳ್ಳು. ವೈರಲ್‌ ವಿಡಿಯೋ ಭಾರತದ್ದೇ ಆಗಿದ್ದು, ಭಾರತದ ಪಾಂಗಾಂಗ್‌ ಸರೋವರದ ಗುಡ್ಡಗಳು ಮತ್ತು ವೈರಲ್‌ ಫೋಟೋದಲ್ಲಿನ ಗುಡ್ಡದ ಪ್ರದೇಶಕ್ಕೂ ಹೋಲಿಕೆಯಾಗಿರುವುದರಿಂದ ವೈರಲ್‌ ಪೋಸ್ಟ್‌ ಸುಳ್ಳು ಎಂಬುದು ಸಾಬೀತಾಗಿದೆ.


ಇದನ್ನೂ ಓದಿ : Fact Check: ದಿವಂಗತ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಕ್ರೈಸ್ತ ಧರ್ಮದವರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *