ಬಾಲಿವುಡ್‌ನ ಸೆಲೆಬ್ರಿಟಿಗಳಾದ ಜಾವೇದ್ ಅಖ್ತರ್, ಶಬಾನಾ ಅಜ್ಮಿ, ಊರ್ಮಿಳಾ ಮಾತೊಂಡ್ಕರ್, ಜಾವೇದ್ ಜಾಫ್ರಿ ಮತ್ತು ಇತರರು ಅನಂತ್ ಅಂಬಾನಿಯವರ ಮದುವೆಯ ಸಮಾರಂಭದಲ್ಲಿ ನೃತ್ಯ ಮಾಡಿದ್ದಾರೆ ಎಂಬ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
“ಇದು ಮುಕೇಶ್ ಅಂಬಾನಿ ಅವರ ಮಗನ ಮದುವೆಯ ವಿಡಿಯೋ. ಇಸ್ಲಾಂನಲ್ಲಿ ಹಾಡುವುದು ಕುಣಿಯುವುದು ನಿಷಿದ್ಧವಾಗಿದ್ದರು ಈ ಸೆಲೆಬ್ರಿಟಿಗಳು ಮುಕೇಶ್ ಅಂಬಾನಿಯಿಂದ ಉಡುಗೊರೆ ಸಿಗಬಹುದು ಎಂಬ ಆಸೆಯಿಂದ ಅಂಟಿಲಿಯ ಮುಂದೆ ಹೇಗೆ ಕುಣಿಯುತ್ತಿದ್ದಾರೆ ನೋಡಿ. ಇದರಲ್ಲಿ ಶಿವಸೇನೆಯ ವಿಧಾನ ಪರಿಷತ್ ಸದಸ್ಯೆ ಊರ್ಮಿಳ ಮಾತೊಂಡ್ಕರ್ ಕೂಡ ಸೇರಿಕೊಂಡಿದ್ದಾರೆ. ಅವರೆಲ್ಲರೂ ಭಾರತದಲ್ಲಿ ವಾಸಿಸಲು ನಿರಾಕರಿಸುತ್ತಾರೆ. ಆದರೆ ಅಂಟಿಲಿಯ ಮುಂದೆ ನೃತ್ಯ ಮಾಡಲು ಹೆದರುವುದಿಲ್ಲ ಎಂದು ಹೇಳಿದ್ದಾರೆ. ಅವರನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಿದಾಗ ಮಾತ್ರ ಆರ್‌ಎಸ್‌ಎಸ್ ಮತ್ತು ತಾಲಿಬಾನ್ ನಡುವಿನ ವ್ಯತ್ಯಾಸ ತಿಳಿಯುತ್ತದೆ ಎಂದು ಸೆಲೆಬ್ರಿಟಿಗಳ ಧಾರ್ಮಿಕತೆಯನ್ನು ಗೇಲಿ ಮಾಡುತ್ತಾ Xನ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್ ಚೆಕ್
ಈ ವೈರಲ್ ವೀಡಿಯೊದಲ್ಲಿ ಬಳಸಲಾದ ಕೀವರ್ಡ್‌ಗಳನ್ನು ಬಳಸಿ ಹುಡುಕಿದಾಗ, ಕಲಾವಿದೆ ಮತ್ತು ರೇಡಿಯೊ ನಿರೂಪಕಿಯಾದ ಸಯೆಮಾರವರು 2018ರ ಡಿಸೆಂಬರ್ 8ರಂದು ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನ ಶೀರ್ಷಿಕೆಯಲ್ಲಿ ಅವರು ಸಮಾರಂಭಕ್ಕೆ ಹಾಜರಾಗಿರುವುದನ್ನು ಉಲ್ಲೇಖಿಸಿದ್ದಾರೆ ಆದರೆ ಅದರ ಬಗ್ಗೆ ನಿರ್ದಿಷ್ಟವಾಗಿರುವ ವಿವರಗಳನ್ನು ನೀಡಿಲ್ಲ. ಜಾವೇದ್ ಅಖ್ತರ್, ಜಾವೇದ್ ಜಾಫರಿ ಊರ್ಮಿಳಾ ಮಾತೊಂಡ್ಕರ್, ಶಬಾನ ಅಜ್ಮಿಯವರ ನೃತ್ಯವೂ ಬಿಂದಾಸ್ ಆಗಿದೆ. ಇಂದು ನಾನು ನೋಡಿದ ಅತ್ಯದ್ಭುತ ನೃತ್ಯ ಎಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸೆಲೆಬ್ರಿಟಿಗಳು ಅಂಬಾನಿಯವರಿಗೆ ಸಂಬಂಧವಿಲ್ಲದ ಮದುವೆಯ ಸಮಾರಂಭದಲ್ಲಿ ನೃತ್ಯವನ್ನು ಮಾಡಿದ್ದಾರೆ ಎಂಬುದು ತಿಳಿದುಬಂದಿತು.
View this post on Instagram
ಈ ವೈರಲ್ ವೀಡಿಯೊ ಕುರಿತು ಮತ್ತಷ್ಟು ಹುಡುಕಿದಾಗ, ಇದನ್ನು 2018ರಲ್ಲಿ ಹಲವಾರು ಮಾಧ್ಯಮಗಳು ಅಂಬಾನಿ ಕುಟುಂಬದ ಮಗಳು ಈಶ ಅಂಬಾನಿ ಮದುವೆಯ ಪೂರ್ವ ಸಮಾರಂಭದಲ್ಲಿ ಸೆಲೆಬ್ರಿಟಿಗಳು ನೃತ್ಯ ಮಾಡಿದ್ದಾರೆ ಎಂದು ಪ್ರಕಟಿಸಿವೆ. 2018ರ ಡಿಸೆಂಬರ್ 11ರಂದು ಜಾವೇದ್ ಅಖ್ತರ್ ಮತ್ತು ಶಬಾನ ಅಜ್ಮಿ ಅವರು ತಮ್ಮ X ಖಾತೆಯ ಪೋಸ್ಟ್ ನಲ್ಲಿ ಈ ನೃತ್ಯವನ್ನು ಮಾಡುತ್ತಿರುವುದು ಅಂಬಾನಿಯವರ ಮದುವೆ ಸಮಾರಂಭಕ್ಕಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬದಲಿಗೆ ಶಹನ ದಾಸ್ ಗುಪ್ತ ಮತ್ತು ಚಿನ್ಮಯ ಜೈಲ್ವಾಲ್ ಅವರ ವಿವಾಹದ ಸಂಭ್ರಮಾಚರಣೆಯಲ್ಲಿ ಊರ್ಮಿಳಾ ಮಾತೊಂಡ್ಕರ್ ಅವರ ಜೊತೆಯಲ್ಲಿ ಅವರ ನಿವಾಸವಾದ ಸುಕುನ್‌ನಲ್ಲಿ ನೃತ್ಯವನ್ನು ಮಾಡಿದ್ದೇವೆ ಎಂದು ಹಂಚಿಕೊಂಡಿದ್ದಾರೆ.
There is a video clip doing the circles claiming that @Javedakhtarjadu dancing with @UrmilaMatondkar and me is from Ambani celebrations in Udaipur Fact is it is at our house Sukoon in Khandala at Shahana Chinmayas wedding
— Azmi Shabana (@AzmiShabana) December 10, 2018
ಒಟ್ಟಾರೆಯಾಗಿ ಹೇಳುವುದಾದರೆ, ಶಹನ ದಾಸ್ ಗುಪ್ತ ಮತ್ತು ಚಿನ್ಮಯ ಜೈಲ್ವಾಲ್ ಅವರ ವಿವಾಹದ ಸಂಭ್ರಮಾಚರಣೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ನೃತ್ಯ ಮಾಡಿರುವುದನ್ನು, ಅನಂತ್ ಅಂಬಾನಿಯವರ ಮದುವೆಯಲ್ಲಿ ಸೆಲೆಬ್ರಿಟಿಗಳು ನೃತ್ಯವನ್ನು ಮಾಡಿದ್ದಾರೆ ಎಂದು ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿದ್ದೀರಾ?
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.