Fact Check: ಆರೋಗ್ಯ ವಿಮಾ ಪ್ರೀಮಿಯಂ ಮೇಲಿನ GST ದರವನ್ನು 18% ರಿಂದ 5% ಗೆ ಕಡಿಮೆಗೊಳಿಸಿದ್ದಾರೆ ಎಂಬುದು ಸುಳ್ಳು

ಆರೋಗ್ಯ ವಿಮೆ

ಆರೋಗ್ಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್‌ಟಿ ದರವನ್ನು 18% ರಿಂದ 5% ಗೆ ಕಡಿಮೆಗೊಳಿಸಲಾಗಿದೆ ಎಂಬ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್ ಚೆಕ್ :

ಈ ವೈರಲ್ ಪೋಸ್ಟರ್‌ನಲ್ಲಿನ “ಆರೋಗ್ಯ ವಿಮೆ” ಮತ್ತು “ಜಿಎಸ್‌ಟಿ ಕಡಿತ” ಎಂಬ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡಿಕಿದಾಗ GST ಕೌನ್ಸಿಲ್‌, ಜಿಎಸ್‌ಟಿ ದರವನ್ನು 18% ರಿಂದ 5% ಗೆ ಕಡಿಮೆಗೊಳಿಸಿದೆ ಎಂದು ಆದೇಶಗಳನ್ನು ಹೊರಡಿಸಿದೆ ಎಂಬ ಯಾವುದೇ ವಿಶ್ವಾಸಾರ್ಹ ವರದಿಗಳು ಲಭಿಸಿಲ್ಲ.  ಆರೋಗ್ಯ ಜೀವ ವಿಮಾ ಕಂತುಗಳ ಮೇಲಿನ 18% ಜಿಎಸ್‌ಟಿ ಕುರಿತು ಪರಿಶೀಲನೆ ನಡೆಸಲು  GOM (ಮಂತ್ರಿಗಳ ಗುಂಪು)  ಜಾರಿಗೆ ತಂದಿದೆ ಎಂದು ಜಿಎಸ್‌ಟಿ ಕೌನ್ಸಿಲ್ ದಿ ಹಿಂದೂ ಪತ್ರಿಕೆಯ ವರದಿಯಲ್ಲಿ ಉಲ್ಲೇಖವಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯ ಸಚಿವರೊಂದಿಗೆ ಈ ವಿಷಯದ ಕುರಿತು ವ್ಯಾಪಕವಾಗಿ ಚರ್ಚಿಸುವಾಗ ತೆರಿಗೆ ದರವನ್ನು ಕಡಿಮೆ ಮಾಡಬೇಕೆ? ಅಥವಾ ಜಿಎಸ್‌ಟಿ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆ? ಯಾರಿಗೆ ವಿನಾಯಿತಿಯನ್ನು ನೀಡಬೇಕು? ಮತ್ತು ಗುಂಪು ವಿಮಾ ಪಾಲಿಸಿಗಳು ಹೇಗೆ ಕೆಲಸವನ್ನು ನಿರ್ವಹಿಸುತ್ತವೆ? ಎಂಬ ಹಲವು ಪ್ರಶ್ನೆಗಳು ಉದ್ಭವಿಸಿದವು ಎಂದು ವರದಿಗಳನ್ನು ತಯಾರಿಸಲಾಗಿದೆ.

GST On Health Insurance Premium

ವರದಿಗಳಲ್ಲಿ ಪ್ರಕಟವಾಗಿರುವ ಎಲ್ಲಾ ಸಮಸ್ಯೆಗಳನ್ನು ತ್ವರಿತವಾಗಿ ಪರಿಶೀಲಿಸಲು GOM ಗೆ ಭೇಟಿ ನೀಡಬೇಕು ಮತ್ತು ನವೆಂಬರ್‌ನಲ್ಲಿ ಮತ್ತೊಮ್ಮೆ ಜಿಎಸ್‌ಟಿ ಕೌನ್ಸಿಲ್‌ ಸಭೆಯನ್ನು ಕರೆದು ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸೀತಾರಾಮನ್ ಹೇಳಿದ್ದಾರೆ ಎಂದು ವರದಿಗಳಲ್ಲಿ ದಾಖಲಾಗಿದೆ.

ಮತ್ತಷ್ಟು ಹುಡುಕಾಟ ನಡೆಸಿದಾಗ 54 ನೇ GST ಕೌನ್ಸಿಲ್ ಸಭೆಯಲ್ಲಿ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ಗಳನ್ನು (CBIC)  ಪತ್ರಿಕಾ ಪ್ರಕಟಣೆಯ ಮೂಲಕ ಸ್ಕ್ಯಾನ್ ಮಾಡಿದಾಗ ಅದರಲ್ಲಿ “ಜಿಎಸ್‌ಟಿ ಕೌನ್ಸಿಲ್ ಜೀವ ವಿಮೆ ಮತ್ತು ಆರೋಗ್ಯ ವಿಮೆಯ ಮೇಲಿನ ಜಿಎಸ್‌ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಮಗ್ರವಾಗಿ ಪರಿಶೀಲಿಸಲು GOM (ಮಂತ್ರಿಗಳ ಗುಂಪನ್ನು)  ರಚಿಸುವಂತೆ ಶಿಫಾರಸ್ಸು ಮಾಡಿದೆ” ಎಂದು ತಿಳಿದುಬಂದಿದೆ. ಬಿಹಾರ, ಉತ್ತರ ಪ್ರದೇಶ , ಪಶ್ಚಿಮ ಬಂಗಾಳ, ಕರ್ನಾಟಕ, ಕೇರಳ, ರಾಜಸ್ಥಾನ, ಆಂಧ್ರ ಪ್ರದೇಶ, ಮೇಘಾಲಯ, ಗೋವಾ, ತೆಲಂಗಾಣ, ತಮಿಳುನಾಡು, ಪಂಜಾಬ್ ಮತ್ತು ಗುಜರಾತ್ ಈ ಎಲ್ಲಾ ರಾಜ್ಯಗಳು GOMನ ಸದಸ್ಯ ರಾಜ್ಯಗಳಾಗಿವೆ. ಮತ್ತು ಅಕ್ಟೋಬರ್ 2024 ರ ಅಂತ್ಯದೊಳಗೆ ವರದಿಯನ್ನು ಸಲ್ಲಿಸಲಾಗುವುದು ಎಂದು ವರದಿಯಲ್ಲಿ ದಾಖಲಾಗಿದೆ.

ಗಮನಾರ್ಹ ವಿಷಯವೆಂದರೆ, ಇತ್ತೀಚಿನ ಸಭೆಯಲ್ಲಿ ಕ್ಯಾನ್ಸರ್ ಔಷಧಿಗಳಾದ Trastuzumab Deruxtecan, Osimertinib ಮತ್ತು Durvalumab ಮೇಲಿನ ಜಿಎಸ್‌ಟಿ ದರವನ್ನು 12% ರಿಂದ 5% ಕ್ಕೆ ಇಳಿಸಲು ಕೌನ್ಸಿಲ್ ನಿರ್ಧರಿಸಿದೆ ಎಂಬ ಮಾಹಿತಿ ವರದಿಯಲ್ಲಿ ಪ್ರಕಟವಾಗಿದೆ.

ನಿತಿನ್ ಗಡ್ಕರಿ

ಆರೋಗ್ಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್‌ಟಿ ದರಗಳನ್ನು ಕಡಿತಗೊಳಿಸಿದ್ದಕ್ಕಾಗಿ ಕೆಲವು ಬಳಕೆದಾರರು ಕೇಂದ್ರದ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರಿಗೆ “ಧನ್ಯವಾದ” ತಿಳಿಸಿದ್ದಾರೆ. ಜೀವ ಮತ್ತು ವೈದ್ಯಕೀಯ ವಿಮಾ ಪ್ರೀಮಿಯಂ ಮೇಲಿನ 18% ಜಿಎಸ್‌ಟಿಯನ್ನು ಹಿಂತೆಗೆದುಕೊಳ್ಳುವಂತೆ ಗಡ್ಕರಿ ಅವರು ಸೀತಾರಾಮನ್ ಅವರಿಗೆ ಪತ್ರವನ್ನು ಬರೆದಿದ್ದಾರೆ ಎಂದು ಹಿಂದೂಸ್ಥಾನ್‌ ಟೈಮ್ಸ್‌ ವರದಿಯನ್ನು ತಯಾರಿಸಿದೆ.

“ಜೀವ ವಿಮಾ ಪ್ರೀಮಿಯಂ ಮೇಲೆ GST ವಿಧಿಸುವುದು, ಜೀವನದ ಅನಿಶ್ಚಿತತೆಗಳ ಮೇಲೆ ತೆರಿಗೆಯನ್ನು ವಿಧಿಸಿದಂತೆ. ಜೀವನದಲ್ಲಿ ಅನಿಶ್ಚಿತತೆಯ ಅಪಾಯ ವ್ಯಕ್ತಿಗೆ ಬಂದೊದಗಿದಾಗ ಆ ವ್ಯಕ್ತಿಯು ಅಪಾಯದ ವಿರುದ್ಧ ರಕ್ಷಣೆಯನ್ನು ಪಡೆಯಬೇಕಾಗುತ್ತದೆ. ಹಾಗಾಗಿ  ಆರೋಗ್ಯ ವಿಮಾ ಪ್ರೀಮಿಯಂಗೆ ತೆರಿಗೆಯನ್ನು ವಿಧಿಸಬಾರದು.” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಇಲ್ಲಿಯವರೆಗೂ ಕೂಡ GST ಕೌನ್ಸಿಲ್‌ ಆರೋಗ್ಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್‌ಟಿಯನ್ನು ಕಡಿತಗೊಳಿಸಿಲ್ಲ ಎಂದು ನಿಖರವಾಗಿ ತಿಳಿದುಬಂದಿದೆ. ಆರೋಗ್ಯ/ಜೀವ ವಿಮಾ ಕಂತುಗಳ ದರವನ್ನು ಪರಿಶೀಲಿಸಿಕೊಳ್ಳಲು GOMನ್ನು ಸ್ಥಾಪಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಇತ್ತೀಚಿನ ಸಭೆಯಲ್ಲಿ ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್‌ಟಿ ದರವನ್ನು 12% ರಿಂದ 5% ಕ್ಕೆ ಕಡಿಮೆಗೊಳಿಸಲು ಕೌನ್ಸಿಲ್ ನಿರ್ಧರಿಸಿದೆ ಎಂಬ ಮಾಹಿತಿಯನ್ನು, ಆರೋಗ್ಯ ವಿಮಾ ಪ್ರೀಮಿಯಂ ಮೇಲಿನ ಜಿಎಸ್‌ಟಿ ದರವನ್ನು 18% ರಿಂದ 5% ಗೆ ಕಡಿಮೆಗೊಳಿಸಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಇಂಥಹ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.


ಇದನ್ನು ಓದಿದ್ದೀರಾ?


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *