ಮುಂಬೈನ ಲಾಲ್ ಬಾಗ್ ಗಣೇಶ ಮಂಟಪದ ಮುಂದೆ ಹಿಂದೂಗಳು ಸಂಭ್ರಮದಿಂದ ಲಯಬದ್ಧವಾಗಿ ಸಂಗೀತವನ್ನು ಹಾಡುವ ಮತ್ತು ನೃತ್ಯಗಳನ್ನು ಮಾಡುತ್ತಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
“ಮುಂಬೈನ ತಾಯಿ ಮುಂಬಾ ದೇವಿ ನಗರದ ಲಾಲ್ ಬಗೀಚಾ ಗಣೇಶ ಮಂಟಪದ ಮುಂಭಾಗದಲ್ಲಿ ನಮ್ಮ ಹಿಂದೂ ಆಬಾಸ್‌ನ ಗೋಪಾಲಂ ಗಾಯನ ಸಂಗೀತ ಮತ್ತು ಲಯಬದ್ಧ ನೃತ್ಯದೊಂದಿಗೆ ಭಕ್ತಿ ಭಾವ ಪರವಶತೆಯಿಂದ ನೃತ್ಯ ಮಾಡುತ್ತಾನೆ. ಇಲ್ಲಿ ಜಾತಿ, ಭಾಷೆ, ಪ್ರದೇಶ ಎಂಬ ಭೇದ ಭಾವ ಇಲ್ಲ… ಎಲ್ಲರೂ ಒಂದೇ… ಹಿಂದೂ-ಸಿಖ್‌ರ ಮಕ್ಕಳು. ಜೈಹೋ ಹಿಂದೂ ಭಾರತ ಜೈ ಗಣೇಶ ನಮಃಶಿವಾಯ ಜೈ ಶ್ರೀರಾಮ್” ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ಬಳಸಿಕೊಂಡು Google ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ, ಟ್ರಿಪ್‌ಸ್ಕೌಟ್ ಎಂಬ ಸಾರಿಗೆ ಕಂಪನಿಯು 2024 ರ ಫೆಬ್ರವರಿ 17ರಂದು Instagram ಖಾತೆಯಲ್ಲಿ ಪೋಸ್ಟ್ ಮಾಡಿರುವ ವೀಡಿಯೋ ಒಂದು ಲಭಿಸಿದೆ. ಈ ವೀಡಿಯೊ ಸ್ಯಾನ್ ಫೆರ್ಮಿನ್ ವಾರ್ಷಿಕೋತ್ಸವದ ಆಚರಣೆಯ ದೃಶ್ಯಗಳನ್ನು ತೋರಿಸುತ್ತದೆ. ಇದು ಸ್ಪೇನ್‌ನ ನವಾರ್ರೆ ಎಂಬ ಸ್ವಾಯತ್ತ ಪ್ರದೇಶದಲ್ಲಿ ನಡೆದ ಘಟನೆಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ತುಣುಕುಗಳ ಸ್ಥಳವು, ಟ್ರಿಪ್‌ಸ್ಕೌಟ್ ಕಂಪನಿ ಪೋಸ್ಟ್ ಮಾಡಿದ ವೀಡಿಯೊ ಎರಡೂ ಒಂದನ್ನೊಂದು ಹೋಲುತ್ತವೆ.
View this post on Instagram
ಈ ವೈರಲ್ ವೀಡಿಯೊ ಕುರಿತು ಮತ್ತಷ್ಟು ಹುಡುಕಿದಾಗ ಪ್ಯಾಂಪ್ಲೋನಾ ಫಿಯೆಸ್ಟಾ ಎಂಬ ಯೂಟ್ಯೂಬ್ ಚಾನೆಲ್, ಶೀರ್ಷಿಕೆಯಲ್ಲಿ “ಸ್ಯಾನ್ ಫರ್ಮಿನ್ ಉತ್ಸವದ ಉದ್ಘಾಟನಾ ಸಮಾರಂಭವು ಚುಪಿನಾಜೋದಲ್ಲಿ ನಡೆದಿದೆ” ಎಂದು 2024ರ ಜನವರಿ 2 ರಂದು ಅದೇ ವೀಡಿಯೊವನ್ನು ಹಂಚಿಕೊಂಡಿದೆ.
ಜುಲೈ 6 ರಿಂದ ಜುಲೈ 14 ರವರೆಗೆ ನಡೆದಿರುವ ಈ ಉತ್ಸವವು “ರನ್ನಿಂಗ್ ಆಫ್ ದಿ ಬುಲ್ಸ್” ನಂತಹ ಘಟನೆಗಳಿಗೆ ಪ್ರಸಿದ್ಧವಾಗಿದೆ. ಹಲವಾರು ಸುದ್ದಿ ಲೇಖನಗಳು ಈ ವೀಡಿಯೊ ಕುರಿತು ವರದಿಗಳನ್ನು ಮಾಡಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ಸ್ಪೇನ್‌ನಲ್ಲಿ ನಡೆದ ಸ್ಯಾನ್ ಫರ್ಮಿನ್ ಉತ್ಸವದ ಸಂಭ್ರಮಾಚರಣೆಯನ್ನು, ಮುಂಬೈನಲ್ಲಿ ನಡೆದ ಗಣೇಶ ಹಬ್ಬದ ಸಂಭ್ರಮ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂಥಹ ವೀಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿದ್ದೀರಾ?
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.