Fact Check | AIIMS ವೈದ್ಯರು ಸೀತಾರಾಮ್ ಯೆಚೂರಿ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ ಎಂದು ಹಳೆಯ ಫೋಟೋ ಹಂಚಿಕೆ

ಹಿರಿಯ ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಸೆಪ್ಟೆಂಬರ್ 12, 2014 ರಂದು ನವದೆಹಲಿಯ ಏಮ್ಸ್‌ನಲ್ಲಿ ನಿಧನರಾದರು. ನಂತರ ಅವರ ಇಚ್ಛೆಯಂತೆ ಯೆಚೂರಿ ಅವರ ದೇಹವನ್ನು ಸಂಶೋಧನೆಗಾಗಿ ನವದೆಹಲಿಯ AIIMS ಗೆ ದಾನ ಮಾಡಲಾಯಿತು. ಇದೀಗ ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಕೆಲವೊಂದು ಫೋಟೋಗಳೊಂದಿಗೆ ಈ ವಿಷಯವನ್ನು ವೈರಲ್‌ ಮಾಡಲಾಗುತ್ತಿದೆ. ಹಲವರು ಏಮ್ಸ್‌ ವೈದ್ಯರು, ಸೀತಾರಾಮ್‌ ಯೆಚೂರಿ ಅವರಿಗೆ ಶೀರಭಾಗಿ ವಂದಿಸಿದ್ದಾರೆ ಎಂದು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

ವೈರಲ್‌ ಫೋಟೋದಲ್ಲಿ ನೋಡಿದ ಹಲವರು “ಆರೋಗ್ಯ ಅಧಿಕಾರಿಗಳು ಸೇರಿದಂತೆ ವೈದ್ಯರು ಹಾಗೂ ಇತರೆ ಸಿಬ್ಬಂಧಿಗಳು ಸೀತಾರಾಮ್‌ ಯೆಚೂರಿ ಅವರ ಪಾರ್ಥೀವ ಶರೀರದ ಮುಂದೆ ತಲೆಭಾಗಿ ಗೌರವಿಸಿ, ತಮ್ಮ ಅಂತಿಮ ನಮನಗಳನ್ನು ಸಲ್ಲಿಸುತ್ತಿದ್ದಾರೆ” ಎಂದು  ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಜನ ಸಾಮಾನ್ಯರು ಮಿಶ್ರ ಪ್ರತಿಕ್ರಿಯೆ ನೀಡಿದ್ದು ಹಲವರು ಇದು ಸುಳ್ಳು, ಇದು ಎಡಿಟೆಡ್‌ ಫೋಟೋ ಎಂದೆಲ್ಲ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌  ಫೋಟೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಫೋಟೋಗೆ ಸಂಬಂಧಿಸಿದಂತೆ ಕೀವರ್ಡ್‌ಗಳು ಹಾಗೂ ಕೀ ಫ್ರೇಮ್‌ಗಳ ಮೂಲಕ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಅಕ್ಟೋಬರ್ 2016 ರಲ್ಲಿ ಥೈಲ್ಯಾಂಡ್ ಮೂಲದ ಔಟ್ಲೆಟ್ ಖಾಸೋಡ್‌ನಲ್ಲಿ ಪ್ರಕಟಿಸಿದ ಲೇಖನದಲ್ಲಿ ಫೋಟೋಗೆ ಸಂಬಂಧಿಸಿದ ಪೂರ್ಣ ಮಾಹಿತಿ ಲಭ್ಯವಾಗಿದೆ.

ಟಿಬೆಟ್‌ನಲ್ಲಿ ಸ್ವಯಂಸೇವಕರಾಗಿದ್ದ ವೈದ್ಯ ಝಾವೊ ಜು ಅವರಿಗೆ ಕೊನೆಯ ಕ್ಷಣದಲ್ಲಿ ಚಿಕಿತ್ಸೆ ನೀಡಲು ಪ್ರಯತ್ನಿಸುತ್ತಿರುವ ಫೋಟೋ..
ಮೃತ ಪಟ್ಟ ವೈದ್ಯರಿಗೆ ಅವರ ಸಹೋದ್ಯಗಳು ಗೌರವ ವಂದನೆ ಸಲ್ಲಿಸುತ್ತಿರುವುದು..

ಅದರಲ್ಲಿನ ಮಾಹಿತಿಯ ಪ್ರಕಾರ ಫೋಟೋವು ಟಿಬೆಟ್‌ನಲ್ಲಿ ಸ್ವಯಂಸೇವಕರಾಗಿದ್ದಾಗ ನಿಧನರಾದ ಚೀನಾದ ವೈದ್ಯರನ್ನು ತೋರಿಸುತ್ತದೆ ಎಂದು ಉಲ್ಲೇಖಿಸಲಾಗಿದೆ. ಇದರ ಆಧಾರದ ಮೇಲೆ ನಾವು ಹುಡುಕಾಟವನ್ನು ನಡೆಸಿದಾಗ ಚೀನಾದ ಬೀಜಿಂಗ್‌ನಲ್ಲಿರುವ ರಾಜ್ಯ-ನಿಯಂತ್ರಿತ ಮಾಧ್ಯಮ ಔಟ್‌ಲೆಟ್ ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ (CGTN) ವರದಿ ಕಂಡು ಬಂದಿದೆ. ಈ ವರದಿಯ ಪ್ರಕಾರ 30 ಸೆಪ್ಟೆಂಬರ್‌ 2016ರಂದು ಚೀನಾದ ಅನ್ಹುಯಿ ಪ್ರಾಂತ್ಯದ 41 ವರ್ಷದ ವೈದ್ಯ ಝಾವೊ ಜು ಎಂದು ತಿಳಿದು ಬಂದಿದೆ. ಇವರು ಸಾಯುವ ಮೊದಲು ವೈದ್ಯರ ತಂಡದೊಂದಿಗೆ ಟಿಬೆಟ್ ಸ್ವಾಯತ್ತ ಪ್ರದೇಶದ ಶಾನನ್‌ನಲ್ಲಿ ಸ್ವಯಂಸೇವಕರಾಗಿ  ಸೇವೆ ಸಲ್ಲಿಸಿದ್ದಾರೆ. ಇವರು ಮೃತ ಪಟ್ಟ ನಂತರ ವೈದ್ಯರು ಹಾಗೂ ಅಲ್ಲಿ ಸೇವೆ ಸಲ್ಲಿಸಿದ ಇತರೆ ಸಿಬ್ಬಂದಿಗಳು ಅವರಿಗೆ ಗೌರವ ಸಲ್ಲಿಸಿದರು ಎಂದು ಉಲ್ಲೇಖಿಸಲಾಗಿದೆ.

ಚೀನಾದ ವೈದ್ಯರು ಟಿಬೆಟ್‌ನಲ್ಲಿ ಸ್ವಯಂಸೇವಕರಾಗಿ ಸಾವನ್ನಪ್ಪಿದರು ಎಂದು ಚೀನಾದ “ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್” ನಲ್ಲಿ ಕಂಡು ಬಂದ ವರದಿ

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ಸೀತಾರಾಮ್ ಯೆಚೂರಿ ಅವರ ದೇಹವನ್ನು ಸಂಶೋಧನೆಗಾಗಿ ನವದೆಹಲಿಯ AIIMS ಗೆ ದಾನ ಮಾಡಿದ ಕಾರಣ ಯೆಚೂರಿ ಅವರಿಗೆ ಏಮ್ಸ್‌ ವೈದ್ಯರು ಶೀರಭಾಗಿ ವಂದಿಸಿದ್ದಾರೆ ಎಂಬುದು ಸುಳ್ಳಾಗಿದೆ.  ಹಾಗೂ ವೈರಲ್‌ ಆಗಿರುವ ಫೋಟೋ 30 ಸೆಪ್ಟೆಂಬರ್‌ 2016ರಂದು ಚೀನಾದ ಅನ್ಹುಯಿ ಪ್ರಾಂತ್ಯದ 41 ವರ್ಷದ ವೈದ್ಯ ಝಾವೊ ಜು ಅವರಿಗೆ ಗೌರವ ಸಮರ್ಣಗೆ ಸಂಬಂಧಿಸಿದಾಗಿದೆ. ಹಾಗಾಗಿ ಇಂತಹ ಫೋಟೋಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : Fact Check | ಜಾರ್ಜ್ ಸೊರೇಸ್ ನಿಂದ ಧನಸಹಾಯ ಪಡೆದುದ್ದನ್ನು ಒಬಾಮ ಒಪ್ಪಿಕೊಂಡಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *