ಗಣೇಶನ ವಿಗ್ರಹವನ್ನು ವಿಸರ್ಜನೆ ಮಾಡುವಾಗ, ಕರ್ನಾಟಕ ಪೋಲೀಸರು ವಿಗ್ರಹವನ್ನು ಬಂಧಿಸಿದ್ದಾರೆ ಎಂಬ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
2024ರ ಸಪ್ಟೆಂಬರ್‌ನಲ್ಲಿ, “ಕರ್ನಾಟಕ ಪೋಲೀಸ್ ಸಿಬ್ಬಂದಿ ಗಣೇಶ ವಿಗ್ರಹವನ್ನು ಬಂಧಿಸಿದ್ದಾರೆ” ಎಂಬ ಪೋಸ್ಟ್‌ರ್ ಸಾಕಷ್ಟು ರೀತಿಯ ವಿವಾದಗಳನ್ನು ಹುಟ್ಟುಹಾಕಿದೆ. ಬಳಕೆದಾರರು ಬಲವಾದ ಪ್ರತಿಕ್ರಿಯೆಗಳ ಮೂಲಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕರ್ನಾಟಕದ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ “ಗಣೇಶ ವಿಸರ್ಜನೆ’ ಉತ್ಸವದ ಕೋಮು ಹಿಂಸಾಚಾರ ನಡೆದ ಹಿನ್ನೆಯಲ್ಲಿ ಈ ಘಟನೆ ನಡೆದಿದೆ. ಕರ್ನಾಟಕ ಪೊಲೀಸರು ಗಣಪತಿ ವಿಗ್ರಹವನ್ನು ಬಂಧಿಸಿದ್ದಕ್ಕೆ ಪ್ರಮುಖ ರಾಜಕಾರಣಿಗಳು ಸೇರಿದಂತೆ ಹಲವು ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ವಿಘ್ನ ನಿವಾರಕ ಗಣೇಶನ ಬಂಧನ! ಇದು ಅಫ್ಘಾನಿಸ್ತಾನ, ಪಾಕಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿ ನಡೆದ ಘಟನೆಯಲ್ಲ, ಆದರೆ ಇದು ಜಾತ್ಯತೀತ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿರುವ ಹಿಂದೂಸ್ತಾನದ ಕರ್ನಾಟಕದಲ್ಲಿ ಸಂಭವಿಸಿದೆ! ಕೋಟಿಗಟ್ಟಲೆ ಹಿಂದೂಗಳು ಪೂಜಿಸುವ ವಿಘ್ನ ವಿನಾಶಕನಾದ ಗಣೇಶನಿಗೆ ಹೀಗೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದೂಗಳ ಸ್ಥಿತಿ ಹೇಗಿರುತ್ತದೆ ಎಂದು ಊಹಿಸಿಕೊಳ್ಳಿ! ಎಂದು ಬಳಕೆದಾರರು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಗಣಪತಿ ವಿಗ್ರಹವನ್ನು ವಿಸರ್ಜನೆ ಮಾಡಲು ಹೋಗುತ್ತಿದ್ದ ಗುಂಪನ್ನು ಕರ್ನಾಟಕ ಪೊಲೀಸರು ತಡೆದು, ವಿಗ್ರಹವನ್ನು ಕಸಿದುಕೊಂಡು ವಿಗ್ರಹವನ್ನು “ಅರೆಸ್ಟ್” ಮಾಡಿದ್ದಾರೆ ಎಂದು ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
ಅದೇ ಚಿತ್ರಗಳನ್ನು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ.
ಸೆಪ್ಟೆಂಬರ್ 17 ರಂದು, ಪ್ರಧಾನಿ ನರೇಂದ್ರ ಮೋದಿಯವರು ಕುರುಕ್ಷೇತ್ರದಲ್ಲಿ ನಡೆದ ರ್‍ಯಾಲಿಯಲ್ಲಿ “ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ “ಗಣೇಶನನ್ನು ಸಹ ಪೊಲೀಸ್ ಕಂಬಿಯೊಳಗೆ ಲಾಕ್ ಮಾಡಲಾಗಿದೆ. ಇಂದು ಇಡೀ ದೇಶವು ಗಣೇಶ ಉತ್ಸವವನ್ನು ಆಚರಿಸುತ್ತಿದೆ, ಆದರೆ ಕಾಂಗ್ರೆಸ್ ಗಣಪತಿ ಪೂಜೆಯಲ್ಲಿ ಅಡೆತಡೆಗಳನ್ನು ಸೃಷ್ಟಿಸಿದೆ ಎಂದು ಕಾಂಗ್ರೇಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದ ಘಟನೆಯ ಬಗ್ಗೆ ಪ್ರಧಾನಿ ಮೋದಿಯವರ ಮಾತುಗಳನ್ನು, ಬಿಜೆಪಿಯ ಹರಿಯಾಣ ಖಾತೆಯು ಹಂಚಿಕೊಂಡಿದೆ.
ಹಿಂದೂಸ್ತಾನ್ ಟೈಮ್ಸ್ ಮತ್ತು ಮಾತೃಭೂಮಿಯಂತಹ ಸುದ್ದಿವಾಹಿನಿಗಳು ಕೂಡ ಪ್ರಧಾನಿಯವರ ಹೇಳಿಕೆಗಳನ್ನು ವರದಿಯನ್ನು ಪ್ರಕಟಿಸಿವೆ. ಕರ್ನಾಟಕದಲ್ಲಿ “ಗಣೇಶನ ವಿಗ್ರಹವನ್ನು ಬಂಧಿಸಲಾಗಿದೆ” ಎಂದು ಆರೋಪಿಸಿ ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿಯನ್ನು ನಡೆಸಿದರು.
ಫ್ಯಾಕ್ಟ್ ಚೆಕ್ :
ಈ ವೈರಲ್ ಪೋಸ್ಟ್‌ರ್‌ಗೆ ಸಂಬಂಧಿಸಿದ ಹೆಸರುಗಳನ್ನು Google ಕೀವರ್ಡ್‌ನ್ನು ಬಳಸಿಕೊಂಡು ಹುಡುಕಿದಾಗ ಈ ಘಟನೆಯನ್ನು ಕುರಿತು ಬಹಳಷ್ಟು ವರದಿಗಳು ಲಭಿಸಿವೆ. ಸೆಪ್ಟೆಂಬರ್ 11 ರಂದು ಮಂಡ್ಯ ಜಿಲ್ಲೆಯಲ್ಲಿ ನಡೆದ ‘ ಗಣೇಶ ವಿಸರ್ಜನೆ’ ಉತ್ಸವದ ಕೋಮು ಹಿಂಸಾಚಾರವನ್ನು ವಿರೋಧಿಸಿ ಸೆಪ್ಟೆಂಬರ್ 13 ರಂದು ಜನರ ಗುಂಪೊಂದು 1 ಅಡಿ ಎತ್ತರದ ಗಣೇಶನ ವಿಗ್ರವನ್ನು ತೆಗೆದುಕೊಂಡು ಬೆಂಗಳೂರಿನ ಟೌನ್ ಹಾಲ್‌ಗೆ ನುಗ್ಗಿ ಪ್ರತಿಭಟನೆಯನ್ನು ನಡೆಸಲು ಯತ್ನಿಸಿತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯನ್ನು ತಯಾರಿಸಿದೆ.
40 ಜನರು ಪ್ರತಿಭಟನೆಯನ್ನು ನಡೆಸಲು ಅನುಮತಿಯನ್ನು ಪಡೆಯದೇ ಬೆಂಗಳೂರಿನ ಟೌನ್ ಹಾಲ್‌ಗೆ ನುಗ್ಗಿದ್ದರು. ಅವರನ್ನು ತಡೆಗಟ್ಟಲು ಪೋಲಿಸರು ಬಂಧಿಸಿದ್ದಾರೆ ಎಂದು ದಿ ಪ್ರಿಂಟ್‌ನ ಹಿಂದಿ ಲೇಖನವು ವರದಿಯನ್ನು ತಯಾರಿಸಿದೆ. ಈ ಪ್ರತಿಭಟನೆಯು ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಹೈಲೆಟ್ ಮಾಡುವ ಮೂಲಕ “ಒಂದು ಗುಂಪು ಟೌನ್ ಹಾಲ್‌ನ ಅನುಮತಿಯನ್ನು ಪಡೆಯದೇ ಪ್ರತಿಭಟನೆ ನಡೆಸಲು ಮುಂದಾಯಿತು. ಹಾಗಾಗಿ ಆ ಗುಂಪು ಸ್ಥಳಕ್ಕೆ ತಲುಪುವ ಮುನ್ನವೆ ಪೋಲಿಸರು ಅವರನ್ನು ತಡೆಹಿಡಿದರು.. ಅಷ್ಟಾದರೂ ಗುಂಪಿನ ಜನರು ಟೌನ್ ಹಾಲ್‌ಗೆ ಹೋಗಲು ಮುನ್ನುಗ್ಗಿದ್ದಾಗ ಪೋಲಿಸರು ಅವರನ್ನು ಬಂಧಿಸಿದ್ದಾರೆ.
ಮಂಡ್ಯದ ನಾಗಮಂಗಲದಲ್ಲಿ ‘ಗಣೇಶ ವಿಸರ್ಜನಾ’ ಮೆರವಣಿಗೆಯ ಮೇಲಿನ ದಾಳಿಯನ್ನು ವಿರೋಧಿಸಿ ಟೌನ್ ಹಾಲ್ ಬಳಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ನಡೆಸಲು ಯೋಜನೆಯನ್ನು ಹಾಕಿಕೊಂಡಿದ್ದರು ಎಂದು 2024ರ ಸೆಪ್ಟೆಂಬರ್ 15ರಂದು ನ್ಯೂಸ್ 18 ತಯಾರಿಸಿದ ವರದಿಯಲ್ಲಿ ಉಲ್ಲೇಖವಾಗಿದೆ. ಬೆಂಗಳೂರಿನಲ್ಲಿ ಪ್ರತಿಭಟನೆಯನ್ನು ನಡೆಸಲು ನಿಯಮಾನುಸಾರವಾಗಿ ಫ್ರೀಡಂ ಪಾರ್ಕ್‌ಗೆ ಅನುಮತಿಯನ್ನು ನೀಡಲಾಗಿದೆ. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಗೊಂದಲಕ್ಕೆ ಕಾರಣವಾಯಿತು ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ಘೋಷಣೆಗಳನ್ನು ಕೂಗಿದರು ಮತ್ತು ತಲೆಯ ಮೇಲೆ ಗಣೇಶ ಮೂರ್ತಿಯನ್ನು ಹೊತ್ತೊಯ್ಯಲು ಮುಂದಾದರು.
ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದರು ಗಣೇಶ ಮೂರ್ತಿ ನೆಲದ ಮೇಲೆ ಬಿದ್ದಿರುವುದನ್ನು ಕಂಡು ತಕ್ಷಣ ನಮ್ಮ ಸಿಬ್ಬಂದಿವರ್ಗದವರು ಸುರಕ್ಷಿತ ಸ್ಥಳದಲ್ಲಿ ಇರಿಸಿ, ಗಣೇಶನ ಫೋಟೋ, ವಿಗ್ರಹವನ್ನು ಭಕ್ತಿಯಿಂದ, ಗೌರವಪೂರ್ವಕವಾಗಿ ವ್ಯಾನ್‌ನೊಳಗೆ ಇಟ್ಟುಕೊಂಡು ವಿಸರ್ಜನೆಗೆ ತೆಗೆದುಕೊಂಡು ಹೋಗಿದ್ದಾರೆ
ಡಿಸಿಪಿ,ಸೆಂಟ್ರಲ್ ಡಿವಿಜನ್, ಉಪ ಪೋಲಿಸ್ ಆಯುಕ್ತ ಕೇಂದ್ರ ವಿಭಾಗಎಂಬ ಅಧಿಕೃತ ಎಕ್ಸ್ ಖಾತೆಯಲ್ಲಿ “ 2024ರ ಸೆಪ್ಟೆಂಬರ್ 13ರಂದು, ನಾಗಮಂಗಲದ ಗಣೇಶ ಹಬ್ಬದಲ್ಲಾದ ಹಿಂಸಾಚಾರವನ್ನು ವಿರೋಧಿಸಿ, ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಹಿಂದೂ ಗುಂಪುಗಳು ಎಚ್‌ಸಿ ಆದೇಶವನ್ನು ಧಿಕ್ಕರಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಹಾಗಾಗಿ ಪ್ರತಿಭಟನಾಕಾರರನ್ನು ಬಂಧಿಸಲಾಯಿತು. ನಂತರ ಅಧಿಕಾರಿಗಳು ಗಣಪತಿ ವಿಗ್ರಹವನ್ನು ಧಾರ್ಮಿಕ ಆಚರಣೆಯೊಂದಿಗೆ ವಿಸರ್ಜಿಸಿದ್ದಾರೆ. ವಿಗ್ರಹವನ್ನು ನೀರಿನಲ್ಲಿ ಮುಳುಗಿಸಿರುವ ಛಾಯಾಚಿತ್ರಗಳನ್ನು ಡಿಸಿಪಿಯವರು ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಪ್ರತಿಭಟನಾಕಾರರು ಅನುಮತಿಯನ್ನು ಪಡೆಯದೇ 1 ಅಡಿ ಗಣೇಶ ವಿಗ್ರವನ್ನು ಹಿಡಿದುಕೊಂಡು, ಪ್ರತಿಭಟನೆಯನ್ನು ನಡೆಸಲು ಮುಂದಾದಾಗ ಪೋಲಿಸರು ಅವರನ್ನು ಬಂಧಿಸಿದ್ದಾರೆ. ವಿಗ್ರಹ ನೆಲದ ಮೇಲೆ ಬಿದ್ದಿದ್ದನ್ನು ಕಂಡು, ವಿಗ್ರಹಕ್ಕೆ ಭಕ್ತಿಪೂರ್ವಕ ನಮನ ಸಲ್ಲಿಸಿ ವಾಹನದಲ್ಲಿ ಇರಿಸಿಕೊಂಡಿದ್ದರು. ಆ ವೇಳೆ ತೆಗೆಯಲಾದ ಚಿತ್ರಗಳನ್ನು”ಕರ್ನಾಟಕದ ಪೋಲಿಸರು ಗಣೇಶ ವಿಗ್ರಹವನ್ನು ಬಂಧಿಸಿದ್ದಾರೆ” ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ:
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.