Fact Check | ಜಾರ್ಜ್ ಸೊರೇಸ್ ನಿಂದ ಧನಸಹಾಯ ಪಡೆದುದ್ದನ್ನು ಒಬಾಮ ಒಪ್ಪಿಕೊಂಡಿದ್ದಾರೆ ಎಂಬುದು ಸುಳ್ಳು

“ಬರಾಕ್‌ ಒಬಾಮ ಅವರು ತಮ್ಮ  ಫೌಡೇಂಶನ್‌ ಮತ್ತು ಸೊರೊಸ್ ಫೌಂಡೇಶನ್‌ಗಳಿಂದ NGO ವೊಂದಕ್ಕೆ ಧನ ಸಹಾಯವನ್ನು ಮಾಡುತ್ತಿದ್ದಾರೆ ಎಂಬುದನ್ನು ಇತ್ತೀಚೆಗೆ ಅವರೇ ಹೇಳಿಕೊಳ್ಳುವ ಮೂಲಕ ಸತ್ಯವೊಂದನ್ನು ಹೊರ ಹಾಕಿದ್ದಾರೆ. ಅವರು ಈ ವಿಡಿಯೋಗಳಲ್ಲಿ ಕೆಲವೊಂದು ದೇಶಗಳನ್ನು ಅಸ್ತಿರಗೊಳಿಸಲು NGO ಗಳನ್ನು ಟೂಲ್‌ಕಿಟ್‌ನಂತೆ ಬಳಸಿಕೊಳ್ಳುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಇದು ಪಾಶ್ಚಿಮಾತ್ಯ ದೇಶಗಳು ಹೇಗೆ ಬೇರೆ ಬೇರೆ ದೇಶಗಳ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿದೆ ಎಂಬುದನ್ನು ಸ್ಪಷ್ಟ ಪಡಿಸುತ್ತಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇತ್ತೀಚೆಗೆ ವೈರಲ್‌ ಆಗಿರುವ ಈ  ವಿಡಿಯೋಗಳು ರಹಸ್ಯ ದಾಖಲೆಗಳಿಂದ ಸೋರಿಕೆಯಾಗಿದೆ ಎಂಬ ಅಂಶವನ್ನು ಕೂಡ ಸಾಕಷ್ಟು ಮಂದಿ ಹಂಚಿಕೊಂಡಿರುವುದರಿಂದ, ಹಲವು ಮಂದಿ ಈ ವಿಡಿಯೋದಲ್ಲಿ ಏನೋ ಪ್ರಮುಖ ಅಂಶ ಅಡಗಿದೆ ಎಂದು ವೀಕ್ಷಿಸುತ್ತಿದ್ದರೆ, ಇನ್ನೂ ಕೆಲವರು ಈ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು ವಿವಿಧ ರೀತಿಯಾದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಕ್ಲಿಪ್‌-1 

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳಾಗಿ ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ FSIStanford ಎಂಬ ಯೂಟ್ಯುಬ್‌ ಚಾನಲ್‌ನಲ್ಲಿ 22 ಏಪ್ರಿಲ್‌ 2022 ರಂದು ಹಂಚಿಕೊಳ್ಳಲಾದ ವಿಡಿಯೋವೊಂದು ಕಂಡು ಬಂದಿದೆ. ಈ 31:10 ಟೈಮ್‌ಸ್ಟ್ಯಾಂಪ್‌ನಲ್ಲಿ ಸಾರ್ವಜನಿಕವಾಗಿ ಪಟ್ಟಭದ್ರ ಹಿತಾಸಕ್ತಿಗಳು ಹೇಗೆ ಪಿತೂರಿಯನ್ನು ನಡೆಸುತ್ತವೆ ಮತ್ತು ಅವುಗಳಿಂದ ಜನ ಸಾಮಾನ್ಯರು ಎದುರಿಸುತ್ತಿರುವ ಸಾವಾಲುಗಳು ಏನು? ಎಂಬುದನ್ನು ಮಾತನಾಡಿರುವುದು ಕಂಡು ಬಂದಿದೆ.

ಹೀಗಾಗಿ ಈ ವಿಡಿಯೋ ಬೇರೆಯದ್ದೇ ವಿಚಾರಗಳನ್ನು ಹೊಂದಿರುವುದು ಸ್ಪಷ್ಟವಾಗಿದ್ದು, ಇದರಲ್ಲಿನ ಕೆಲವೊಂದು ಆಯ್ದ ಭಾಗಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹರಡಿರುವುದು ಈಗ ಸಾಭೀತಾಗಿದೆ. ಆದರೆ ಮತ್ತೊಂದು ವಿಡಿಯೋ ಇದರಲ್ಲಿ ಕಂಡು ಬಾರದ ಕಾರಣ ನಾವು ಈ ಕುರಿತು ಇನ್ನಷ್ಟು ಹುಡುಕಲು ಪ್ರಾರಂಭಿಸಿದೆವು.

ಕ್ಲಿಪ್‌-2

ಇನ್ನು ಬೇರೆ ಹೇಳಿಕೆಯ ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದಾಗ 2014 ರಲ್ಲಿ ಬೆಲ್ಜಿಯಂನಲ್ಲಿರುವ ಬ್ರಸೆಲ್ಸ್‌ನ ಪಲೈಸ್ ಡೆಸ್ ಬ್ಯೂಕ್ಸ್ ಆರ್ಟ್ಸ್‌ನಲ್ಲಿ ಅಂದು ತಮ್ಮ ಅಧ್ಯಕ್ಷ ಗಾದಿಯ ಅವಧಿಯಲ್ಲಿ ಒಬಾಮಾ ಮಾಡಿದ ಭಾಷಣದಿಂದ ವೈರಲ್‌ ವಿಡಿಯೋವನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ ಅವರು 1:25 ಮತ್ತು 3:17 ಟೈಮ್‌ಸ್ಟ್ಯಾಂಪ್‌ನಲ್ಲಿ ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ ಸಂಬಂಧ ಹಾಗೂ ರಾಷ್ಟ್ರೀಯ ಶ್ರೇಷ್ಠತೆ ಮತ್ತು ಸಾರ್ವಜನಿಕ ವಲಯದಲ್ಲಿ ಸಾರ್ವಭೌಮತ್ವದ ಅಭಿಪ್ರಾಯಗಳ ಕುರಿತು ವಿವರಿಸುವುದನ್ನು ಕಾಣಬಹುದುದಾಗಿ. ಹೀಗಾಗಿ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಿದ ನಂತರ ಬೇರೆ ಬೇರೆ ವಿಡಿಯೋದ ಸಣ್ಣ ಕ್ಲಿಪ್‌ಗಳನ್ನು ತೆಗೆದುಕೊಂಡು ಸುಳ್ಳು ಸುದ್ದಿಯನ್ನು ಹರಡಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ವೈರಲ್‌ ವಿಡಿಯೋದಲ್ಲಿನ ಪ್ರತಿಪಾದನೆ ಸಂಪೂರ್ಣವಾಗಿ ಸುಳ್ಳಾಗಿದೆ. ವೈರಲ್‌ ಆಗಿರುವ ವಿಡಿಯೋ ಎರಡೂ ಪ್ರತ್ಯೇಕವಾದ ವಿಡಿಯೋವಾಗಿದ್ದು ಅವುಗಳ ಕ್ಲಿಪ್‌ಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹರಡಲಾಗಿದೆ. ಇನ್ನು ವೈರಲ್‌ ವಿಡಿಯೋ ರಹಸ್ಯ ದಾಖಲೆಗಳಿಂದ ಬಿಡುಗಡೆಯಾಗಿದೆ ಎಂಬುದು ಕೂಡ ಸುಳ್ಳಾಗಿದ್ದು, ಈ ವಿಡಿಯೋ ಯೂಟ್ಯುಬ್‌ನಲ್ಲಿ ಕೂಡ ಲಭ್ಯವಿದೆ.


ಇದನ್ನೂ ಓದಿ : Fact Check: ಗ್ವಾಟೆಮಾಲಾದಲ್ಲಿ ರಸ್ತೆಯಿಂದ ನೀರು ಹೊರಬರುವ ವೀಡಿಯೋವನ್ನು ಭಾರತದ್ದು ಎಂದು ವೈರಲ್ ಆಗಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *