“ಲೆಬನಾನ್‌ನಲ್ಲಿ ಹಿಜ್ಬುಲ್ಲಗಳು ಹಾಗೂ ಸಾರ್ವಜನಿಕರು ಬಳಸುತ್ತಿದ್ದಂತಹ ಪೇಜರ್‌ಗಳು ಮತ್ತು ವಾಕಿಟಾಕಿ ಇದ್ದಕ್ಕಿದ್ದ ಹಾಗೆ ಸ್ಪೋಟಗೊಂಡು ಹಲವರು ಸಾವನ್ನುಪ್ಪಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಇಂತಹದ್ದೇ ರೀತಿಯ ಸ್ಪೋಟಗಳು ಬೇರೆ ಬೇರೆ ವಿದ್ಯುತ್ ಉಪಕರಣಗಳಲ್ಲಿ ಸಂಭವಿಸುತ್ತಿದೆ. ಹಲವು ಕಡೆ ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು ಕೂಡ ಸ್ಪೋಟಗೊಳ್ಳುತ್ತಿವೆ.” ಎಂದು ಸುದ್ದಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹರಿ ಬಿಡಲಾಗಿದೆ.
17-09-2024 – Explosion in Pagers
18-09-2024- Explosion in Walkie-Talkies
19-09-2024 – Explosion in Laptops
Mossad is unstoppable. Lebanon/Beirut/Hezbollah on knees pic.twitter.com/sY4ciFyCwG
— Baba Banaras™ (@RealBababanaras) September 19, 2024
ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋವನ್ನು ಗಮನಿಸಿದ ಹಲವರು ನಿಜಕ್ಕೂ ಲೇಬನಾನ್‌ನಲ್ಲಿ ಇಂತಹ ಘಟನೆ ನಡೆದಿದೆ ಎಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಭಿನ್ನ-ವಿಭಿನ್ನ ಅಭಿಪ್ರಾಯಗಳನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಇದು ಹಲವು ರೀತಿಯ ಗೊಂದಲಗಳನ್ನು ಸಾರ್ವಜನಿಕ ವಲಯದಲ್ಲಿ ಉಂಟುಮಾಡಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಕುರಿತು ಈ ಫ್ಯಾಕ್ಟ್ ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಅಗುತ್ತಿರುವ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಯಾವುದಾದರೂ ವರದಿಗಳು ಇವೆಯೇ ಎಂದು ಪರಿಶೀಲನೆ ನಡೆಸಲು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ನಮಗೆ ಯಾವುದೇ ಅಧಿಕೃತ ವರದಿಗಳು ಕಂಡು ಬಂದಿಲ್ಲ.
ಹೀಗಾಗಿ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ, ಲೆಬನಾನ್‌ನಲ್ಲಿ ಪೇಜರ್ ಹಾಗೂ ವಾಕಿಟಾಕಿ ಹೊರತುಪಡಿಸಿ ಮತ್ತಿನ್ಯಾವುದೇ ವಿದ್ಯುತ್ ಉಪಕರಣಗಳು ಸ್ಪೋಟಗೊಂಡ ಬಗ್ಗೆ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಇದಕ್ಕೆ ಸಂಬಂಧಪಟ್ಟಂತೆ ಹಲವು ರೀತಿಯ ಕಪೋಕಲ್ಪಿತ ಸುದ್ದಿಗಳು ಕಂಡುಬಂದಿದ್ದು, ಅವುಗಳು ಯಾವುದೇ ರೀತಿಯ ಪುರಾವೆಗಳನ್ನು ಒದಗಿಸದ ಕಾರಣ, ಅವು ಸುಳ್ಳು ಸುದ್ದಿಗಳಾಗಿವೆ ಎಂಬುದು ಸ್ಪಷ್ಟವಾಗಿದೆ. ಇನ್ನು ವೈರಲ್ ಪೋಸ್ಟ್ ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಲ್ಯಾಪ್‌ಟಾಪ್ ಫೋಟೋಗಳನ್ನು ಗಮನಿಸಿದಾಗ ಇವು ಬ್ಯಾಟರಿ ಹಾಗೂ ಚಾರ್ಚಿಂಗ್ ಸಮಸ್ಯೆಯಿಂದ ಸ್ಪೋಟಗೊಂಡ ಚಿತ್ರವಾಗಿದೆ ಮತ್ತು ಹಳೆಯ ಫೋಟೋವಾಗಿದೆ ಎಂದು ಹಲವು ವಿಡಿಯೋಗಳು, ಮತ್ತು ವಿವಿಧ ಬರಹಗಳಿಂದ ಕಂಡು ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ಲೆಬನಾನ್‌ನಲ್ಲಿ ಪೇಜರ್ ಹಾಗೂ ವಾಕಿಟಾಕಿಯಂತೆ ಲ್ಯಾಪ್‌ಟಾಪ್‌ಗಳು ಕೂಡ ಸ್ಪೋಟಗೊಳ್ಳುತ್ತಿದೆ. ಇದರ ಜೊತೆಗೆ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳು ಕೂಡ ಸ್ಫೋಟಗೊಳ್ಳುತ್ತಿವೆ ಎಂಬುದಕ್ಕೆ ಯಾವುದೇ ರೀತಿಯ ಆಧಾರ ಇಲ್ಲ. ಹಾಗಾಗಿ ವೈರಲ್ ಪೋಸ್ಟ್ ಸುಳ್ಳು ನಿರೂಪಣೆಯಿಂದ ಕೂಡಿದೆ. ಇಂತಹ ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ
ಇದನ್ನೂ ಓದಿ : Fact Check : ಕರ್ನಾಟಕದ ಪೋಲಿಸರು ಗಣೇಶ ವಿಗ್ರಹವನ್ನು ಬಂಧಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.