ಅಫ್ಘಾನಿಸ್ತಾನದ ಮಾರುಕಟ್ಟೆಯಲ್ಲಿ ಮಹಿಳೆಯರನ್ನು ಮಾರಾಟ ಮಾಡುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
“ಫೆಲಸ್ತೀನನ ಬಗ್ಗೆ ದಿನವಿಡೀ ಅಳುತ್ತಾರೆ. ಆದರೆ, ಅಫ್ಘಾನಿಸ್ತಾನದಲ್ಲಿ ತಮ್ಮ ಸಹೋದರಿಯರು ಹಾಗೂ ಮಕ್ಕಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದರ ಬಗ್ಗೆ ಇವರು ಯಾಕೆ ಮಾತಾಡುವುದಿಲ್ಲ ಎಂದು ವಿಡಿಯೋ ಹಂಚಿಕೊಳ್ಳಲಾಗಿದೆ.”
फिलिस्तीन बहुत दूर है फिर भी @realwajidkhan @WasimAkramTyagi रात दिन कुत्तों की तरह उसके लिए रोते रहते हैं।
जबकि अफगानिस्तान में इनकी बहन बेटियों को ₹डी की तरह बेचने के लिए मंडियां सजाई जाती हैं उसपर जुबान नहीं खुलती? pic.twitter.com/Wt6QbUOf3A
— सत्य सनातन भारत (Modi ka parivar)🚩🙏🕉️🙏🕉 (@sha33274) August 5, 2024
ಫ್ಯಾಕ್ಟ್ ಚೆಕ್:
ಈ ಸುದ್ದಿ ಅಕ್ಷರಶಃ ಸುಳ್ಳು.
“ಈ ವೀಡಿಯೊವನ್ನು ಅಫ್ಘಾನಿಸ್ತಾನದ ಫರಿಯಾಬ್ ಪ್ರಾಂತ್ಯದ ಬಳಿ ಇರುವ ಸಾಮಾನ್ಯ ಮಾರುಕಟ್ಟೆಯಲ್ಲಿ 2023ರಲ್ಲಿ ತೆಗೆಯಲಾಗಿದ್ದು, ದೈನಂದಿನ ವಸ್ತುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವುದಕ್ಕಾಗಿ ಮಹಿಳೆಯರು ನೆರೆದಿರುವ ಸಾಮಾನ್ಯ ಮಾರುಕಟ್ಟೆ ಚಿತ್ರ” ಎಂದು ಯುದ್ಧ ಮತ್ತು ಸಂಘರ್ಷ ಪತ್ರಕರ್ತ ಅಫ್ಶಿನ್ ಇಸ್ಮಾಯಿಲಿ ದೃಢೀಕರಿಸಿದ್ದಾರೆ.
ಅಫ್ಶಿನ್ ಇಸ್ಮಾಯಿಲಿ ಎಂಬ ಪತ್ರಕರ್ತ ಜುಲೈ 21 ರಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, “ಆಫ್ಘಾನಿಸ್ತಾನದಲ್ಲಿ ಒಂದು ಮಾರುಕಟ್ಟೆ. ಬಡತನ” ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಿದ್ದಾರೆ.
View this post on Instagram
ಮಾರುಕಟ್ಟೆಯಲ್ಲಿ ಮಹಿಳೆಯರನ್ನು ಮಾರಾಟ ಮಾಡಲಾಗುತ್ತಿದ್ದಾರೆ ಎಂಬುದು ಸಂಪೂರ್ಣ ಸುಳ್ಳು. ಅಫ್ಘಾನಿಸ್ತಾನದಲ್ಲಿರುವ ಬಡತನವನ್ನು ಚಿತ್ರಿಕರಿಸಲು 2023ರ ಅಕ್ಟೋಬರ್ 13ರಂದು ಈ ವಿಡಿಯೋ ಚಿತ್ರಿಸಿದ್ದಾಗಿ ಪತ್ರಕರ್ತ ಅಫ್ಶಿನ್ ಇಸ್ಮಾಯಿಲಿ ಸ್ಪಷ್ಟ ಪಡಿಸಿದ್ದಾರೆ. ಹಾಗಾಗಿ, ಇದು ಮಹಿಳೆಯರನ್ನು ಮಾರಾಟ ಮಾಡುವ ಮಾರುಕಟ್ಟೆಯಲ್ಲ ಬದಲಾಗಿ ಸಾಮಾನ್ಯ ಮಾರುಕಟ್ಟೆಯ ದೃಶ್ಯ ಎಂಬುದು ಇದರಿಂದ ಸಾಬೀತಾಗಿದೆ.
ಇದನ್ನು ಓದಿದ್ದೀರಾ? Fact Check | ಲಡಾಖ್‌ನಲ್ಲಿ ‘3 ಈಡಿಯಟ್ಸ್’ ಚಿತ್ರೀಕರಿಸಲಾದ ಸ್ಥಳವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.