Fact Check | ಮಹಾರಾಷ್ಟ್ರದಲ್ಲಿ ಡಿಜೆ ಸೌಂಡ್‌ಗಳ ಕಂಪನದಿಂದಾಗಿ ಗೋಡೆ ಕುಸಿದಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ” ಮಹಾರಾಷ್ಟ್ರದ ನಾಗ್ಪುರದಲ್ಲಿ ಡಿಜೆ ಸೌಂಡ್‌ಗಳ ಕಂಪನದಿಂದಾಗಿ ಗೋಡೆ ಕುಸಿದಿದೆ ಮತ್ತು ಸಮಾರಂಭದ ವೇಳೆ ಅನೇಕ ಜನರು ಗಾಯಗೊಂಡಿದ್ದಾರೆ. ಈಗಲಾದರೂ ಅರ್ಥ ಮಾಡಿಕೊಳ್ಳಿ ಡಿಜೆ ಹಬ್ಬ ಅಥವಾ ಇನ್ನೀತರೆ ಸಂಭ್ರಮದ ಸಮಯದಲ್ಲಿ ಡಿಜೆ ಎಷ್ಟೊಂದು ಅಪಾಯಕಾರಿ ಎಂದು. ಈ ಘಟನೆಯ ನಂತರವಾದರೂ ಡಿಜೆಯನ್ನು ಬ್ಯಾನ್ ಮಾಡಲಾಗುತ್ತದೆಯೇ ಎಂದು ಕಾದು ನೋಡಬೇಕಿದೆ” ಎಂದು ವಿಡಿಯೊವೊಂದನ್ನು ಹಲವು ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಗಮನಿಸಿದ ಜನ ಸಾಮಾನ್ಯರು ಇದು ನಿಜವಾದ ಘಟನೆ ಎಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಲವರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿಜೆ ಬಳಕೆಯನ್ನು ನಿಷೇಧಿಸಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕುತ್ತಿದೆ. ಹೀಗೆ ವಿವಿಧ ಅಭಿಪ್ರಾಯಗಳಿಂದ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್‌ ‌ನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋ ಮಹಾರಾಷ್ಟ್ರದ ನಾಗ್ಪುರದಲ್ಲ ಬದಲಿಗೆ ಅದು ಉತ್ತರ ಪ್ರದೇಶಕ್ಕೆ ಸೇರಿದ್ದಾಗಿದೆ ಎಂಬ ಮಾಹಿತಿಯನ್ನು ಎಕ್ಸ್ ಬಳಕೆದಾರರು ತಮ್ಮ. ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡ ವಿಡಿಯೋದಿಂದಾಗಿ ಮಾಹಿತಿ ಲಭ್ಯವಾಗಿದೆ‌.

ಇದರ ಅಧಾರದ ಮೇಲೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ 8 ಡಿಸೆಂಬರ್ 2023 ರಂದು NDTV ಟಿವಿಯ youtube ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾದ ಸುದ್ದಿ ವಿಡಿಯೋ ಒಂದು ಕಂಡುಬಂದಿದ್ದು ಆ ವರದಿಯಲ್ಲಿ ವೈರಲ್ ವಿಡಿಯೋದ ಘಟನೆ ಉತ್ತರ ಪ್ರದೇಶದ ಮೌ ಜಿಲ್ಲೆಯ ಘೋಜಿ಼ ಪ್ರದೇಶದಲ್ಲಿ ನಡೆದಿದೆ ಎಂಬುದು ತಿಳಿದು ಬಂದಿದೆ. ಈ ವರದಿಯ ಪ್ರಕಾರ ಮಸಬ್ಬೂರು ಹಸನ್ ಒಡೆತನದ ಖಾಲಿ ನಿವೇಶನದಲ್ಲಿದ್ದ 10 ಅಡಿ ಎತ್ತರ, 15 ಅಡಿ ಉದ್ದದ ಗೋಡೆಯು ಘೋಸಿಯ ಗಯಾಸುದ್ದೀನ್ ಎಂಬುವರು ಹಾಕಿದ್ದ ಮರಳಿನ ಅಸ್ಥಿರತೆಯಿಂದ ಕುಸಿದು ಬಿದ್ದಿದೆ.

ಇನ್ನು ಈ ಘಟನೆ ಮದುವೆಯೊಂದರ ಮೆರವಣಿಗೆಯ ವೇಳೆಯಲ್ಲಿ ನಡೆದಿದೆ ಎಂಬುದು ತಿಳಿದು ಬಂದಿದ್ದು‌, ಈ ವೇಳೆ ಯಾವುದಾದರೂ ಸದ್ದಿಗೆ ಗೋಡೆ ಕುಸಿದಿದೆ ಎಂದು ಪರಿಶೀಲನೆಯನ್ನು ನಡೆಸಿದಾಗ, ಮೌ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ದಾಖಲೆಗಳು ಮತ್ತು ಪೊಲೀಸರ ಅಧಿಕೃತ ಹೇಳಿಕೆಗಳು ಗೋಡೆ ಕುಸಿತಕ್ಕೆ ಶಬ್ದಗಳೇ ಕಾರಣ ಎಂಬ ಯಾವುದೇ ಉಲ್ಲೇಖವು ಕಂಡುಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಡಿಜೆ ಸದ್ದಿಗೆ ಗೋಡೆ ಕುಸಿದು ಬಿದ್ದು ಆರು ಮಂದಿ ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋ ಉತ್ತರಪ್ರದೇಶದ ಮೌ ಜಿಲ್ಲೆಗೆ ಸಂಬಂಧಿಸಿದಾಗಿದೆ. ಗೋಡೆ ಶಿಥಿಲಗೊಂಡ ಕಾರಣದಿಂದಾಗಿ ಕುಸಿದು ಬಿದ್ದಿದೆ ಎಂಬುದು ಹಲವು ವರದಿಗಳಿಂದ ಸಾಬೀತಾಗಿದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಸುಳ್ಳಿನಿಂದ ಕೂಡಿದ


ಇದನ್ನೂ ಓದಿ :Fact Check: 100 ರೂಪಾಯಿಯ ಹೊಸ ನೋಟುಗಳನ್ನು ಆರ್‌ಬಿಐ ನಿಷೇಧಿಸಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವ

Leave a Reply

Your email address will not be published. Required fields are marked *