ಇತ್ತೀಚೆಗೆ ದೇಶದಲ್ಲಿ ಯಾವ ಕೃತ್ಯಗಳೇ ನಡೆದರೂ ಸಹ ಅದನ್ನು ಮುಸ್ಲಿಂ ಸಮುದಾಯದವರು ಮಾಡಿದ್ದಾರೆ ಎಂದು ಆರೋಪಿಸಿ ವ್ಯವಸ್ಥಿತವಾಗಿ ಜನರನ್ನು ನಂಬಿಸಲಾಗುತ್ತಿದೆ. ಇದೇ ರೀತಿ ಈಗ ವಾಟರ್ ಫ್ಯೂರಿಫೈರ್ ಮಾರಾಟಗಾರನ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, “ಹಿಂದುಗಳನ್ನು ಎಲ್ಲಾ ರಂಗದಲ್ಲೂ ಕೊಲ್ಲಲು ಜಿಹಾದಿಗಳು ಯೋಜನೆ ರೂಪಿಸಿಕೊಂಡಿದ್ದಾರೆ. ಎಲ್ಲಾ ಹಿಂದು ಬಾಂಧವರಲ್ಲಿ ನನ್ನ ವಿನಂತಿ ಮುಸ್ಲಿಮರ ಅಂಗಡಿಗಳಲ್ಲಿ ದಯವಿಟ್ಟು ಯಾವುದೇ ಕಾರಣಕ್ಕೂ ತರಕಾರಿ ಹಣ್ಣುಗಳು ಹಾಲು ಮತ್ತು ಹೋಟೆಲ್ ಗಳಲ್ಲಿ ಜ್ಯೂಸ್ ಮತ್ತು ಇತರೆ ಆಹಾರ ಯಾವುದೇ ಕಾರಣಕ್ಕೂ ಸೇವಿಸಬೇಡಿ. ಮತ್ತು ಯಾವುದೇ ಕೆಲಸಕ್ಕೂ ಈ ಜಿಹಾದ್ರಿಯ ಮುಸ್ಲಿಮರನ್ನು ಕರೆಸಿ ಮಾಡಿಸಬೇಡಿ. ಹಿಂದುಗಳ ಜನಸಂಖ್ಯೆ ಕಡಿಮೆಯಾಗಲೆಂದು ಇವರ ದೊಡ್ಡ ಜಾಲವೇ ಇದೆ ಹಿಂದುಗಳೇ ಬದುಕಲು ಕಲಿಯಿರಿ.” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
कहीं यह भी तो विधर्मियों का कोई षड़यंत्र नहीं ?
इस मशीन का पानी पी कर बांझपन गर्भपात तो नहीं बड़ जाएगा? ताकि हमारी आबादी कम हो जाए और विधर्मियों की ज्यादा हो जाए… सभी हिंदू भाईयो को
बीनती हैं की इन मुल्लो से कुछ भी ना खरिदो ना ही इनसे कुछ रिपेअर करवाओ 😡😡 pic.twitter.com/MeqiPfc2iP— Dilip Kumar Singh (@DilipKu24388061) September 18, 2024
ಫ್ಯಾಕ್ಟ್ ಚೆಕ್:
ಈ ವೀಡಿಯೋ ಆರು ವರ್ಷಗಳ ಹಳೆಯ ವೀಡಿಯೋವಾಗಿದ್ದು, ಆರೋಪಿ ಮುಸ್ಲಿಂ ಧರ್ಮದವನೆಂದು ಹೇಳಲು ಯಾವುದೇ ಆಧಾರಗಳಿಲ್ಲ.
ನಾವು ವೈರಲ್ ವೀಡಿಯೋದ ಕೆಲವು ಕೀಫ್ರೆಮ್‌ಗಳನ್ನು ಬಳಸಿ ರಿವರ್ಸ್ ಇಮೇಜ್ ಸರ್ಚ್ ನಲ್ಲಿ ಹುಡುಕಿದಾಗ ಈ ವೀಡಿಯೋವನ್ನು ಯೂಟೂಬ್ ಮತ್ತು ಎಕ್ಸ್‌ನಲ್ಲಿ ಅನೇಕರು ಹಂಚಿಕೊಂಡಿರುವುದು ಕಂಡು ಬಂದಿದೆ.
@A.Kushwah ಆಲ್ ಇನ್ಫೋ ಯೂಟೂಬ್ ಚಾನೆಲ್ ಐದು ವರ್ಷಗಳ ಹಿಂದೆಯೇ ಈ ವೀಡಿಯೋವನ್ನು ಹಂಚಿಕೊಂಡಿದೆ. ಇದು ಅಕ್ವಾ ಗಾರ್ಡ್ ನಲ್ಲಿ ಬಳಸುವ ರಿವರ್ಸ್ ಆಸ್ಮೋಸಿಸ್ (RO) ನೀರಿನ ಶೋಧನೆ ವ್ಯವಸ್ಥೆಯು ನೀರಿನಿಂದ ಮಾಲಿನ್ಯವನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿವೆ, ಆದರೆ ಕಡಿಮೆ ಬೆಲೆಯ ROಗಳಿಂದ ಕೆಲವು ಆರೋಗ್ಯ ಸಮಸ್ಯೆಗಳು ಸಹ ಎದುರಾಗುತ್ತವೆ. ಈ ವೀಡಿಯೋವನ್ನು ಜಾಗೃತಿಗಾಗಿ ರೂಪಸಿಲಾಗಿದೆ. ಮತ್ತು ವೀಡಿಯೋ ಸ್ಟ್ರೀಪ್ಟೆಡ್ ಆಗಿದೆ.
RO ವ್ಯವಸ್ಥೆಯಿಂದ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಮ್‌ನಂತಹ ಪ್ರಯೋಜನಕಾರಿ ಖನಿಜಗಳನ್ನು ನೀರಿನಿಂದ ತೆಗೆದುಹಾಕುತ್ತವೆ. ಈ ಖನಿಜಗಳ ಕೊರತೆಯಿರುವ ನೀರಿನ ಸೇವನೆಯು ಕೊರತೆಗಳಿಗೆ ಕಾರಣವಾಗಬಹುದು, ಇದು ಹೃದಯರಕ್ತನಾಳದ ಅಸ್ವಸ್ಥತೆಗಳು, ದಣಿವು, ದೌರ್ಬಲ್ಯ ಮತ್ತು ಸ್ನಾಯು ಸೆಳೆತಗಳಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಈ ಪ್ರಕ್ರಿಯೆಯು ನೀರನ್ನು ಸ್ವಲ್ಪ ಆಮ್ಲೀಯಗೊಳಿಸಬಹುದು, ಇದು ದೀರ್ಘಾವಧಿಯ ಬಳಕೆಗೆ ಸೂಕ್ತವಲ್ಲ. RO ನೀರು ನಿಮ್ಮ ದೇಹದಿಂದ ಖನಿಜಗಳನ್ನು ಹೊರಹಾಕಬಹುದು, ಏಕೆಂದರೆ ಇದು ಸಾಮಾನ್ಯವಾಗಿ ಕುಡಿಯುವ ನೀರಿನಲ್ಲಿ ಇರುವ ಖನಿಜಗಳನ್ನು ಹೊಂದಿರುವುದಿಲ್ಲ. ಇದು ದೇಹದಿಂದ ಖನಿಜಗಳ ಹೆಚ್ಚಿನ ನಿರ್ಮೂಲನೆಗೆ ಕಾರಣವಾಗಬಹುದು. ಕೆಲವು RO ನೀರು ಚಪ್ಪಟೆ ಅಥವಾ ಸಪ್ಪೆ ರುಚಿಯನ್ನು ಹೊಂದಿರುತ್ತಾರೆ ಏಕೆಂದರೆ ಅದು ನೀರಿಗೆ ಅದರ ನೈಸರ್ಗಿಕ ರುಚಿಯನ್ನು ನೀಡುವ ಖನಿಜಗಳನ್ನು ಹೊಂದಿರುವುದಿಲ್ಲ.
RO ವ್ಯವಸ್ಥೆಗಳು ನೀರನ್ನು ಶುದ್ಧೀಕರಿಸುವಲ್ಲಿ ಅತ್ಯುತ್ತಮವಾಗಿದ್ದರೂ, ಈ ಸಂಭಾವ್ಯ ದುಷ್ಪರಿಣಾಮಗಳನ್ನು ಪರಿಗಣಿಸುವುದು ಮುಖ್ಯವಾಗಿದೆ. ಈ ಸಮಸ್ಯೆಗಳನ್ನು ತಗ್ಗಿಸಲು ಪ್ರಯೋಜನಕಾರಿ ಖನಿಜಗಳನ್ನು ಮರಳಿ ನೀರಿಗೆ ಸೇರಿಸಲು ಕೆಲವು ವ್ಯವಸ್ಥೆಗಳು ಈಗ ರಿಮಿನರಲೈಸೇಶನ್ ಹಂತಗಳನ್ನು ಒಳಗೊಂಡಿವೆ.
ಆದ್ದರಿಂದ ವಾಟರ್ ಫ್ಯೂರಿಫೈರ್‌ಗಳಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವಂತಹ ಖನಿಜಗಳನ್ನು ಒದಗಿಸುವಂತಹ ವಾಟರ್ ಫ್ಯೂರಿಫೈರ್ ಕೊಳ್ಳಿ ಕಡಿಮೆ ಬೆಲೆಯದು ಎಂದು ಕೊಂಡುಕೊಂಡರೆ ಧೀರ್ಘಾವಧಿಯಲ್ಲಿ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗಬಹುದು.
ಆದ್ದರಿಂದ ಸಧ್ಯ ವೈರಲ್ ಆಗುತ್ತಿರುವ ವೀಡಿಯೋ ಹಳೆಯದಾಗಿದ್ದು ಇತ್ತೀಚಿನದ್ದಲ್ಲ ಮತ್ತು ಈ ವೀಡಿಯೋ ಜಾಗೃತಿಗಾಗಿ ಮಾಡಲಾಗಿದ್ದು ಆರೋಪಿ ಯಾವ ಧರ್ಮದವರೆಂದು ತಿಳಿದು ಬಂದಿಲ್ಲ.
ಇದನ್ನು ಓದಿ: 100 ರೂಪಾಯಿಯ ಹೊಸ ನೋಟುಗಳನ್ನು ಆರ್‌ಬಿಐ ನಿಷೇಧಿಸಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.