Fact Check : ಭಾರತೀಯ ಸೇನೆ ಅರುಣಾಚಲ ಪೊಲೀಸರಿಗೆ ಎಚ್ಚರಿಕೆ ನೀಡಿರುವ ಘಟನೆ ಇತ್ತೀಚಿನದ್ದು ಎಂದು ಹಂಚಿಕೆ

ಮಣಿಪುರದ ಹಿಂಸಾಚಾರ, ಬಾಂಗ್ಲಾದೇಶದ ಅಶಾಂತಿ, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಗಡಿ ವಿವಾದದ ನಡುವೆ ಭಾರತೀಯ ಸೇನಾ ಸಿಬ್ಬಂದಿಯು, ಅರುಣಾಚಲ ಪ್ರದೇಶದ ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ ಎಂಬ ವೀಡಿಯೊವನ್ನುಇತ್ತೀಚಿಗೆ ನಡೆದ ಘಟನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಅರುಣಾಚಲ ಸ್ಕೌಟ್ಸ್‌ನ ಕರ್ನಲ್ ಫಿರ್ದೋಶ್ ಪಿ. ದುಬಾಶ್‌ರು ಈ ಹಿಂದೆ ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ದುಬಾಶ್‌ರು ತಮ್ಮ ಸೈನಿಕರು ದೌರ್ಜನ್ಯಗಳಿಂದ ಕೋಪಗೊಂಡಿದ್ದಾರೆ, ಕಿರುಕುಳವನ್ನು ಅವರು ಸಹಿಸುವುದಿಲ್ಲ ಎಂದು ಅರುಣಾಚಲ ಎಸ್‌ಪಿಗೆ ಎಚ್ಚರಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್‌ :

ವೈರಲ್‌ ವೀಡಿಯೊದ ಕೆಲವು ಪ್ರಮುಖ ಫ್ರೇಮ್‌ಗಳ ರಿವರ್ಸ್ ಇಮೇಜ್ ಬಳಸಿಕೊಂಡು Google ಲೆನ್ಸ್‌ನಲ್ಲಿ ಹುಡುಕಿದಾಗ, 2018ರ ನವೆಂಬರ್‌ ತಿಂಗಳಿನಲ್ಲಿ ಪ್ರಕಟವಾದ ವರದಿಗಳಲ್ಲಿ ವೈರಲ್‌ ವೀಡಿಯೋದ ದೃಶ್ಯಗಳು ಕಂಡುಬಂದಿವೆ. ಈ ಮಾಧ್ಯಮ ವರದಿಗಳ ಪ್ರಕಾರ, 2018ರ ನವೆಂಬರ್ 2ರಂದು ಬೋಮ್ಡಿಲಾದಲ್ಲಿ ನಡೆದ ಬುದ್ಧ ಉತ್ಸವದಲ್ಲಿ ಸೈನಿಕರ ಗುಂಪೊಂದು ನಾಗರಿಕರು ಮತ್ತು ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದೆ. ಈ ಸೈನಿಕರ ಅಸಭ್ಯ ವರ್ತನೆಯಿಂದ ಯೋಧರನ್ನು ಪಶ್ಚಿಮ ಕಮೆಂಗ್ ಜಿಲ್ಲೆಯ ಸ್ಥಳೀಯ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಇದರಿಂದಾಗಿ ಕೆಲವು ಸೈನಿಕರು ಕೋಪಗೊಂಡು ಬೊಮ್ಡಿಲಾ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿ, ಪೊಲೀಸರು ಮತ್ತು ನಾಗರಿಕರಿಗೆ ಎಚ್ಚರಿಕೆಯನ್ನು ನೀಡಿದ್ದರು. ಇದಾದ ನಂತರ ಸೇನಾ ಕರ್ನಲ್ ಫಿರ್ದೌಸ್ ಅವರ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು.

ಆದ್ದರಿಂದ, ಕರ್ನಲ್‌ನ ಸೈನಿಕರ ಗುಂಪು ಅರುಣಾಚಲ ಪ್ರದೇಶದ ಪೊಲೀಸ್ ಆಡಳಿತವನ್ನು ಎಚ್ಚರಿಸಿರುವ ವೈರಲ್ ವೀಡಿಯೊ 2018 ರ ಹಳೆಯ ಘಟನೆ.  ಹಾಗಾಗಿ ಇದು ಇತ್ತೀಚಿನದಲ್ಲ ಎಂದು ನಿಖರವಾಗಿ ತಿಳಿದುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2018ರಲ್ಲಿ ಭಾರತದ ಕೆಲವು ಸೈನಿಕರು ಬೋಮ್ಡಿಲಾದ ಬುದ್ಧ ಉತ್ಸವದಲ್ಲಿ ಅಸಭ್ಯವಾಗಿ ವರ್ತಿಸಿ ಪೋಲಿಸ್‌ ಠಾಣೆಯನ್ನು ದ್ವಂಸಗೊಳಿಸಿ, ಪೊಲೀಸರು ಮತ್ತು ನಾಗರಿಕರಿಗೆ ಎಚ್ಚರಿಕೆಯನ್ನು ನೀಡಿರುವ ಹಳೆಯ ಘಟನೆಯನ್ನು, ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಗಮನವನ್ನು ಸೆಳೆಯಲು ಇತ್ತೀಚಿನ ಘಟನೆ ಎಂದು ಹಂಚಿಕೊಳ್ಳುತ್ತಿದ್ದಾರೆ.


ಇದನ್ನು ಓದಿ :


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವ

Leave a Reply

Your email address will not be published. Required fields are marked *