Fact Check : ನೃತ್ಯ ಪ್ರದರ್ಶನದಲ್ಲಿ ಪಕ್ಷಿಗಳು ಮನುಷ್ಯರಾಗಿ ರೂಪಾಂತರಗೊಂಡಿವೆ ಎಂಬ ಮಾಹಿತಿ ಸುಳ್ಳು

ನೃತ್ಯ ಪ್ರದರ್ಶನದಲ್ಲಿ ಪಕ್ಷಿಯು ಹುಡುಗಿಯಾಗಿ, ನಂತರ ಹೂವಾಗಿ ರೂಪಾಂತರಗೊಳ್ಳುತ್ತದೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ ಚೆಕ್:‌

ವೈರಲ್ ವೀಡಿಯೊದ ಕೀಫ್ರೇಮ್‌ಗಳ ಮೂಲಕ ಹಿಮ್ಮುಖ ಚಿತ್ರವನ್ನು ಹುಡುಕಿದಾಗ,  2022ರ ಜೂನ್ 19ರಂದು “ಬ್ರಿಟನ್ಸ್ ಗಾಟ್ ಟ್ಯಾಲೆಂಟ್”  ಹಂಚಿಕೊಂಡ ಮೂಲ YouTube ವೀಡಿಯೊ ಲಭಿಸಿದೆ. “ಅತ್ಯಂತ ಅಪಾಯಕಾರಿ ಆಡಿಷನ್‌ಗಳು 2022 | BGT 2022.” ವೀಡಿಯೊವನ್ನು ಸೂಕ್ಷ್ಮವಾಗಿ ವೀಕ್ಷಿಸಿದಾಗ ಮತ್ತು ಫ್ರೇಮ್‌ನಿಂದ ಫ್ರೇಮ್‌ನ್ನು ಗಮನಿಸಿದಾಗ, ಸ್ಪರ್ಧಿಗಳು ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಿದಾಗ ತೀರ್ಪುಗಾರರ ಪ್ರತಿಕ್ರಿಯೆಗಳು ಹೊಂದಾಣಿಕೆಯಾಗದಿರುವುದನ್ನು ಗಮನಿಸಿದ್ದೇವೆ. ಈ ಸಂಚಿಕೆಗಳಲ್ಲಿ ಯಾವುದೇ ಪಕ್ಷಿಗಳ ಅಥವಾ ಪ್ರಾಣಿಗಳ ನೃತ್ಯ ಪ್ರದರ್ಶನಗಳು ಇರಲಿಲ್ಲ.  ಹಾಗಾಗಿ ಎರಡು ವಿಭಿನ್ನ ವೀಡಿಯೊಗಳನ್ನು ಕೂಡಿಸಿ ಈ ವೈರಲ್‌ ವೀಡಿಯೊವನ್ನು ಮಾಡಿದ್ದಾರೆ.

 

ಪಕ್ಷಿ ನೃತ್ಯದ ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ,” ಇಂಟರೆಸ್ಟಿಂಗ್ ಮತ್ತು ನ್ಯಾಚುರಲ್ ” ಎಂಬ YouTube ಚಾನಲ್‌ ಪಕ್ಷಿಗಳು ನೃತ್ಯ ಮಾಡುವ ವೀಡಿಯೊವನ್ನು ಹಂಚಿಕೊಂಡಿದೆ. ಆದರೆ ಅನಿಮೇಷನ್, ಎಡಿಟಿಂಗ್ ಅಥವಾ AI(Artificial intelligence)  ರಚಿತವಾದ ವಿಷಯಕ್ಕೆ ಕುರಿತ ಯಾವುದೇ ಮಾಹಿತಿಯು ಉಲ್ಲೇಖವಾಗಿಲ್ಲ.

ಅನಿಮೇಷನ್, ಎಡಿಟಿಂಗ್ ಅಥವಾ AI-ರಚಿಸಿದ ವಿಷಯದ ಕುರಿತು ನಮಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗದೆ ಇರುವುದರಿಂದ, ಈ ವೀಡಿಯೊ ಕ್ಲಿಪ್‌ಗಳನ್ನು ಹೈವ್ AI ಡಿಟೆಕ್ಟರ್ ಮೂಲಕ ರನ್ ಮಾಡಿದಾಗ, ಈ ವೀಡಿಯೊ 99.4% AI- ರಚಿತವಾಗಿದೆ ಎಂದು ನಿಖರವಾಗಿ ತಿಳಿದುಬಂದಿದೆ.

 

ಈ ವೈರಲ್‌ ವೀಡಿಯೊ ಕುರಿತು ಮತ್ತಷ್ಟು ತಿಳಿದುಕೊಳ್ಳಲು, ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್‌ ಚಿತ್ರಗಳನ್ನು ಹಗ್ಗಿಂಗ್ ಫೇಸ್ ಪರಿಕರವನ್ನು ಬಳಸಿ ಹುಡುಕಿದಾಗ, ಈ ಸಾಧನವು ಕೂಡ 88%  AI ಬಳಸಿ ಈ ವೀಡಿಯೊವನ್ನು ರಚಿಸಲಾಗಿದೆ ಎಂದು ಸೂಚಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕೃತಕ ಬುದ್ಧಿಮತ್ತೆಯಿಂದ ಕೂಡಿದ ವೀಡಿಯೊವನ್ನು, ಹಕ್ಕಿಗಳು ಮನುಷ್ಯರಾಗಿ ರೂಪಾಂತರಗೊಳ್ಳುವ ಅದ್ಭುತ ನೃತ್ಯ ಪ್ರದರ್ಶನ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ ಇಂತಹ ವೀಡಿಯೊಗಳನ್ನು ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.


ಇದನ್ನು ಓದಿ:


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *