“ಚಂಡೀಘಡ ಟೋಲ್ ಪ್ಲಾಜಾದಲ್ಲಿ ಮುಸಲ್ಮಾನರು ಗಲಾಟೆ ಮಾಡಿ, ಟೋಲ್ ಸಿಬ್ಬಂಧಿಯ ಮೇಲೆ ಹಲ್ಲೆ ನಡೆಸಿದ್ದಾರೆ, ಅದರಲ್ಲೂ ಹಿಂದೂ ಸಿಬ್ಬಂಧಿಗಳ ಮೇಲೆಯೇ ದೌರ್ಜನ್ಯ ನಡೆಸಲಾಗಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ವಿವಿಧ ಬರಹಗಳೊಂದಿಗೆ ಸಾರ್ವಜನಿಕರಲ್ಲಿ ಹಲವು ರೀತಿಯಾದ ಅಭಿಪ್ರಾಯಗಳನ್ನು ಮೂಡಿಸುತ್ತಿರುವುದರ ಜೊತೆಗೆ, ಮುಸಲ್ಮಾನ ಸಮುದಾಯದ ವಿರುದ್ಧ ದ್ವೇಷ ಭಾವನೆ ಮೂಡುವಂತೆ ಬರಹಗಳನ್ನು ಕೂಡ ಹಂಚಿಕೊಳ್ಳಲಾಗುತ್ತಿದೆ.
@nitin_gadkari
Is toll tax only for hindus??At Kurali toll plaza at Chandighar😡Going for Friday prayers to pray for world peace pic.twitter.com/mJNMchI020— Sunil Menon (@sunnyboy1966) September 21, 2024
ಈ ರೀತಿಯಾದ ಬರಹಗಳನ್ನು ಈ ವಿಡಿಯೋ ಆಧಾರದ ಮೇಲೆ ಬರುತ್ತಿರುವುದರಿಂದ ಸಾಕಷ್ಟು ಗೊಂದಲಗಳನ್ನು ಮೂಡಿಸುತ್ತಿದೆ. ಇನ್ನು ವಿಡಿಯೋದಲ್ಲಿ ಕೂಡ ವ್ಯಕ್ತಿಯೊಬ್ಬ ಮುಸಲ್ಮಾನರ ಟೋಪಿ ಧರಿಸಿರುವುದು ಕಂಡು ಬಂದಿದೆ. ಹೀಗಾಗಿ ವೈರಲ್ ವಿಡಿಯೋ ಕೋಮು ದ್ವೇಷಕ್ಕೆ ಸಂಬಂಧಿಸಿದಂತೆ ಹಂಚಿಕೊಳ್ಳಲಾಗುತ್ತಿದ್ದು, ಸಮಾಜದ ಸ್ವಾಸ್ಥ್ಯ ಕದಡುವುದಕ್ಕೆ ಕಿಡಿಗೇಡಿಗಳು ಮುಂದಾಗಿದ್ದಾರೆ. ಹೀಗೆ ವಿವಿಧ ರೀತಿಯ ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋದ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
Look how Mullas are breaking toll barrier and fighting with Toll employees. pic.twitter.com/ZgUY1zC3ZN
— Jai Hinduasthan Hindu (@JaiBhar14746394) September 21, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವನ್ನು ಬಳಸಿಕೊಂಡು ಕೆಲವೊಂದು ಕೀ ಫ್ರೇಮ್ಗಳನ್ನು ನಾವು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ 18 ಸೆಪ್ಟೆಂಬರ್ 2023ರಲ್ಲಿ ಬಾಂಗ್ಲಾದೇಶದ ದ ಡೈಲಿ ಗೋನಾಕನಾಥೋ ಎಂಬ ಪತ್ರಿಕೆಯಲ್ಲಿ ಕುರಿಲ್ ಟೋಲ್ ಪ್ಲಾಜಾದಲ್ಲಿ ನಡೆದದ್ದು ಏನು? ಎಂಬ ಶೀರ್ಷಿಕೆಯೊಂದಿಗೆ ಘಟನೆಯ ವಿವಿರವನ್ನು ನೀಡಲಾಗಿದೆ.
ಈ ವರದಿಯ ಪ್ರಕಾರ ಸರಕು ಸಾಗಾಟ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಲಾಗಿತ್ತು. ಆದರೆ ಬಾಂಗ್ಲದೇಶದ ಹಲವೆಡೆ ಸರಕು ವಾಹನದಲ್ಲಿ ಪ್ರಯಾಣಿಕರ ಸಾಗಾಟವನ್ನು ನಿಷೇಧಿಸಲಾಗಿದೆ. ಹೀಗಿದ್ದರೂ ಟೋಲ್ ಬಳಿ ಬಂದ ಈ ವಾಹನವನ್ನು ಅಲ್ಲಿನ ಸಿಬ್ಬಂಧಿಗಳು ತಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಟೋಲ್ ಹಣವನ್ನು ಕೂಡ ಕಟ್ಟುವುದಿಲ್ಲ ಎಂದು ವಾಗ್ವಾದವನ್ನು ನಡೆಸಿದ್ದಾರೆ. ಇದರಿಂದ ಗಲಾಟೆ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ರೀತಿಯ ಅಂಶಗಳು ಹಲವು ವರದಿಗಳಲ್ಲಿ ಕೂಡ ಕಂಡು ಬಂದಿದೆ. ಈ ಎಲ್ಲಾ ಅಂಶಗಳಿಂದ ಈ ವಿಡಿಯೋ ಭಾರತದಲ್ಲ ಮತ್ತು ಭಾರತದ ಮುಸಲ್ಮಾನರಿಗೂ ಈ ವಿಡಿಯೋಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋಗೂ ಭಾರತಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ. ವೈರಲ್ ವಿಡಿಯೋದಲ್ಲಿನ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದ್ದು, ಈ ವಿಡಿಯೋವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ವಿಡಿಯೋಗಳು ನಿಮಗೆ ಕಂಡು ಬಂದರೆ ಅವುಗಳನ್ನು ಪರಿಶೀಲನೆ ನಡೆಸದೆ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.