ಇತ್ತೀಚೆಗೆ ಡ್ರೋನ್ ದಾಳಿಯಾಗುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳಲ್ಲಿ ಇಸ್ರೇಲಿ ತೈಲ ಸಂಸ್ಕರಣಾಗಾರದ ಮೇಲೆ ಹಿಜ್ಬುಲ್ಲಾ ದಾಳಿ ನಡೆಸಿದೆ ಎಂದು ಡ್ರೋನ್ ದಾಳಿಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
https://twitter.com/Rizwanmalik49/status/1838177525500895678
ಅನೇಕರು ಈ ವಿಡಿಯೋವನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಫ್ಯಾಕ್ಟ್ ಚೆಕ್:
ನಾವು ವೈರಲ್ ವೀಡಿಯೋವನ್ನು ಕೀಫ್ರೆಮ್‌ಗಳಾಗಿ ವಿಂಗಡಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಹುಡುಕಿದಾಗ ವೈರಲ್ ವಿಡಿಯೋವನ್ನು ಹೋಲುವ ವೀಡಿಯೋಗಳು ಮತ್ತು ವರದಿಗಳು ಲಭ್ಯವಾಗಿದ್ದು, ವರದಿಗಳ ಪ್ರಕಾರ, ವೀಡಿಯೊ ಜುಲೈ 2024 ರಲ್ಲಿ ಟುವಾಪ್ಸೆ ತೈಲ ಸಂಸ್ಕರಣಾಗಾರದ ಮೇಲೆ ಉಕ್ರೇನಿಯನ್ ಡ್ರೋನ್ ದಾಳಿಗೆ ಸಂಬಂಧಿಸಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಇದರಿಂದ ತಿಳಿದು ಬಂದಿದೆ.
ನಮಗೆ ಇದೇ ವೈರಲ್ ವೀಡಿಯೋದ ಮೂಲ ವೀಡಿಯೋ ಯೂಟೂಬ್ ನಲ್ಲಿ ಲಭ್ಯವಾಗಿದ್ದು, “ಉಕ್ರೇನಿಯನ್ ಡ್ರೋನ್ ದಾಳಿಯು ತೈಲ ಸಂಸ್ಕರಣಾಗಾರಕ್ಕೆ ಹಾನಿಯಾಗಿದೆ ಎಂದು ರಷ್ಯಾದ ಅಧಿಕಾರಿಗಳು ಹೇಳುತ್ತಾರೆ | VOA ಸುದ್ದಿ” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.
ಆದ್ದರಿಂದ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ತಮ್ಮ ನಿರೂಪಣೆಯನ್ನು ಸಾಬೀತುಪಡಿಸಲು ತಪ್ಪುದಾರಿಗೆಳೆಯುವ ಪ್ರತಿಪಾದನೆಗಳೊಂದಿಗೆ ಪ್ರಭಾವಿಗಳು ಹಳೆಯ ವೀಡಿಯೊಗಳನ್ನು ಬೇರೆ ಬೇರೆ ಸ್ಥಳಗಳಿಂದ ಪ್ರಸಾರ ಮಾಡುತ್ತಿದ್ದಾರೆ.
ಇದನ್ನು ಓದಿ: ಗಾಂಧೀಜಿಯವರ ಮೊಮ್ಮಗರಾದ ಶ್ರೀಕೃಷ್ಣ ಕುಲಕರ್ಣಿಯವರು ರಾಹುಲ್ ಗಾಂಧಿಗೆ ಬರೆದ ಹಳೆಯ ಪತ್ರವನ್ನು ತಿರುಚಿ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.