ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಗೋಮಾಂಸ, ಮೀನಿನ ಎಣ್ಣೆ ಮತ್ತು ಹಂದಿ ಕೊಬ್ಬನ್ನು ಹಾಕಿದ್ದಾರೆ ಎಂದು ಆರೋಪಿಸಲಾದ ವಿವಾದದದ ಕುರಿತು, ಸೆಪ್ಟೆಂಬರ್ 20 ರಂದು ಸುಪ್ರೀಂ ಕೋರ್ಟ್‌ನ ವಕೀಲರು ಈ ಕಾಯ್ದೆಯು ಮೂಲಭೂತವಾಗಿ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಿರುಪತಿಯ ಸಾಲಿನಲ್ಲಿ ಹಿಂದೂಗಳಿಗೆ ಅಪಹಾಸ್ಯ ಮಾಡಿ, ಜನರು ವ್ಯಕ್ತಿಯೊಬ್ಬನನ್ನು ಥಳಿಸಿದ್ದಾರೆಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಈ ವೀಡಿಯೊದಲ್ಲಿ ಪಿಯೂಷ್ ಮಾನುಷ್ ಎಂಬುವವರನ್ನು ಥಳಿಸಲಾಗಿದೆ ಎಂದು ಗುರುತಿಸಿ ಬಳಕೆದಾರರು ತಮ್ಮ ಖಾತೆಯ ಶೀರ್ಷಿಕೆಯಲ್ಲಿ “ಬೀಫ್ ಲಡ್ಡುಗಳನ್ನು ಎಲ್ಲಾ ಹಿಂದೂಗಳಿಗೆ ಪೆರುಮಾಳ್‌ರವರೇ ಹಂಚಿದ್ದಾರೆ” ಮತ್ತು ತಮಿಳುನಾಡಿನ ಸೇಲಂನ ಜನರು ಅವರನ್ನು ಥಳಿಸಿದ್ದಾರೆ ಎಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ.
Piyush Manush, the guy who mocked HINDUS with a video titled “Beef Laddoo for all HINDUS delivered by Perumal himself” has got a better TREATMENT at Salem, TAMIL NADU.
Good RESISTANCE 💪🔥 pic.twitter.com/R23PiYrO4W
— kanishka Dadhich 🇮🇳 (@KanishkaDadhich) September 20, 2024
ಫ್ಯಾಕ್ಟ್ ಚೆಕ್:
ಈ ವೈರಲ್ ವೀಡಿಯೋದ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ, ಇದನ್ನು “News Glitz Tamil” ಎಂಬ YouTube ಚಾನಲ್ 2019ರ ಆಗಸ್ಟ್ 28ರಂದು ಹಂಚಿಕೊಂಡಿದೆ. ಈ ವೈರಲ್ ಕ್ಲಿಪ್ ಚಾನಲ್‌ನ ಲೋಗೋದ ಮೇಲೆ ವಾಟರ್‌ಮಾರ್ಕ್ ಇದೆ. ಸೇಲಂ ಬಿಜೆಪಿ ಕಛೇರಿಗೆ ಅನುಮತಿಯನ್ನು ಪಡೆಯದೇ ತಮಿಳುನಾಡಿನ ಕಾಂಗ್ರೆಸ್ ಕಾರ್ಯಕರ್ತನಾದ ಪಿಯೂಷ್ ಮಾನುಷ್ ಪ್ರವೇಶಿಸಿ, ಬಿಜೆಪಿಯವರ ವಿರುದ್ಧ ಮಾತಿಗಿಳಿದಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮಾನುಷ್‌ರವರನ್ನು ಥಳಿಸಿದ್ದಾರೆ ಎಂದು ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
ಈ ಘಟನೆಯ ಕುರಿತು ಹಲವಾರು ಮಾಧ್ಯಮ ವರದಿಗಳು ಲಭಿಸಿವೆ. 2019ರ ಆಗಸ್ಟ್ 28ರಂದು ಸೇಲಂನ ಬಿಜೆಪಿ ಕಛೇರಿಯಲ್ಲಿ ತಮಿಳುನಾಡಿನ ಕಾರ್ಯಕರ್ತರಾದ ಪಿಯೂಷ್ ಮಾನುಷ್‌ರ ಮೇಲೆ ಹಲ್ಲೆ ನಡೆದಿದೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸೇಲಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರು ಪರಿಸರ ಕಾರ್ಯಕರ್ತರು, ತಮಿಳುನಾಡಿನಾದ್ಯಂತ ಅನೇಕ ಸರ್ಕಾರಿ ಯೋಜನೆಗಳು ಮತ್ತು ಕಾರ್ಪೊರೇಟ್ ಉಪಕ್ರಮಗಳ ವಿರುದ್ಧ ಧ್ವನಿಯೆತ್ತಿದ್ದರು ಎಂದು ವರದಿಗಳಲ್ಲಿ ಉಲ್ಲೇಖವಾಗಿದೆ. ಈ ವರದಿಗಳ ಪ್ರಕಾರ, ಮಾನುಷ್‌ರವರು ಆರ್ಥಿಕತೆ, ಕಾಶ್ಮೀರ ಬಿಕ್ಕಟ್ಟಿನ ಕುರಿತು ನಾಯಕರ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಸೇಲಂನ ಬಿಜೆಪಿ ಕಚೇರಿಗೆ ಹೋಗಿದ್ದರು. ಬಿಜೆಪಿಯವರ ಬೆದರಿಕೆಗಳ ವಿರುದ್ಧ ಅವರ ಮೇಲೆ ಹರಿಹಾಯ್ದರು. ಅದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಮಾನುಷ್ ತೆರಿಗೆಯನ್ನು ಕಟ್ಟದೇ ಹಿಂದೂಗಳ ವಿರುದ್ಧ ದ್ವೇಷವನ್ನು ಬಿತ್ತುತ್ತಿದ್ದಾರೆ ಎಂದು ಆರೋಪಿಸಿ, ಬಿಜೆಪಿ ಕಾರ್ಯಕರ್ತರು ಮಾನುಷ್‌ಗೆ ಚಪ್ಪಲಿಯ ಹಾರ ಹಾಕಿ ಥಳಿಸಿದ್ದಾರೆ. ಹಾಗಾಗಿ ಇದು ತೀವ್ರ ವಿವಾದಕ್ಕೆ ದಾರಿ ಮಾಡಿ ಕೊಟ್ಟಿದೆ.
ಈ ಘಟನೆಯ ಕುರಿತು ಪೊಲೀಸರು ಎರಡೂ ಪಕ್ಷದವರ ಕಡೆಯಿಂದ ದೂರನ್ನು ದಾಖಲಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವಿಷಯವು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶವನ್ನು ಉಂಟುಮಾಡಿದೆ. ದ್ರಾವಿಡ ಮುನ್ನೇತ್ರ ಕಳಗಂ ಅಧ್ಯಕ್ಷ ಮತ್ತು ತಮಿಳುನಾಡಿನ ಮುಖ್ಯಮಂತ್ರಿಯಾದ ಎಂ ಕೆ ಸ್ಟಾಲಿನ್‌ರು ಮಾನುಷ್ ಮೇಲಿನ ದಾಳಿಯನ್ನು ಖಂಡಿಸಿ, ಬಿಜೆಪಿಯ ಅನುಮತಿಯಿಲ್ಲದೆ ಪಕ್ಷದ ಕಛೇರಿಗೆ ಪ್ರವೇಶಿಸಿದ್ದಕ್ಕಾಗಿ ಮಾನುಷ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
பாஜக அரசின் அவலங்களை ஆதாரத்துடன் முன்வைத்து விவாதித்த சமூக செயற்பாட்டாளர் @piyushmanush அவர்கள், சேலம் பாஜக அலுவலகத்தில் 50க்கும் மேற்பட்டவர்களால் கொடூரமாக தாக்கப்பட்டிருப்பது வன்மையாக கண்டிக்கத்தக்கது.
— M.K.Stalin (@mkstalin) August 28, 2019
பாஜக அரசின் அவலங்களை ஆதாரத்துடன் முன்வைத்து விவாதித்த சமூக செயற்பாட்டாளர் @piyushmanush அவர்கள், சேலம் பாஜக அலுவலகத்தில் 50க்கும் மேற்பட்டவர்களால் கொடூரமாக தாக்கப்பட்டிருப்பது வன்மையாக கண்டிக்கத்தக்கது.
— M.K.Stalin (@mkstalin) August 28, 2019
2019 ರ ಆಗಸ್ಟ್ 28ರಂದು, ಮಾನುಷ್‌ರು ಬಿಜೆಪಿ ಕಛೇರಿಗೆ ಸಂಜೆ ಭೇಟಿ ನೀಡುವುದಾಗಿ ಹೇಳಿದ್ದರು. ನಂತರ, ಅವರು ತಮ್ಮ ಭೇಟಿಯನ್ನು ಲೈವ್-ಸ್ಟ್ರೀಮ್ ಮಾಡಿಕೊಂಡಿದ್ದರು. ಬಿಜೆಪಿ ಕಾರ್ಯಕರ್ತರೊಂದಿಗೆ ತೀವ್ರ ವಾಗ್ವಾದವನ್ನು ನಡೆಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಪಿಯೂಷ್ ಮಾನುಷ್ ಅವರು 2024ರ ಸೆಪ್ಟೆಂಬರ್ 19ರಂದು ತಿರುಪತಿಯಲ್ಲಿ “ಬೀಫ್ ಲಡ್ಡೂ” ಕುರಿತು ಮಾತನಾಡಿದ್ದಾರೆ. ಆದರೆ, ಈ ವೀಡಿಯೊವನ್ನು ತಿರುಚಿ, ಮಾನುಷ್‌ರವರನ್ನು ತಿರುಪತಿಯ ಸಾಲಿನಲ್ಲಿ ಥಳಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ:
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.