2024 ರ ಸೆಪ್ಟೆಂಬರ್ 15 ರಂದು ಹೊಸದಿಲ್ಲಿಯಲ್ಲಿ ರೈಲು ಅಪಘಾತ ಸಂಭವಿಸಿದೆ ಎಂಬ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಪೋಸ್ಟರ್‌ನಲ್ಲಿ ಹಿಂದಿ ಭಾಷೆಯಲ್ಲಿ ಹೀಗೆ ಬರೆಯಲಾಗಿದೆ “नई दिल्ली: दो ट्रेनों के बीच भीषण टक्कर, 3 की मौत, 49 गंभीर घायल, चारों तरफ मची चीख-पुकार,” ಇದನ್ನು ಕನ್ನಡಕ್ಕೆ ಅನುವಾದಿಸಿದಾಗ “ನವದೆಹಲಿಯಲ್ಲಿ ಎರಡು ರೈಲುಗಳು ಭೀಕರವಾಗಿ ಡಿಕ್ಕಿ ಹೊಡೆದಿವೆ. ಅಪಘಾತದಲ್ಲಿ ಮೂರು ಜನರು ಸತ್ತಿದ್ದಾರೆ, 49 ಜನರಿಗೆ ತೀವ್ರವಾಗಿ ಗಾಯಗಳಾಗಿ ಆಘಾತದಿಂದ ಕಿರುಚಾಡುತ್ತಿದ್ದಾರೆ ಎಂದು ಹಂಚಿಕೊಳ್ಳಾಗಿದೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ಚಿತ್ರದ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ, ಈ ಘಟನೆ ಕುರಿತು 2024 ಸೆಪ್ಟೆಂಬರ್ 14ರ CNN , ಫ್ರೀ ಪೋಸ್ಟ್ ಜರ್ನಲ್ ಮತ್ತು ದಿ ಗಾರ್ಡಿಯನ್ ಮಾಧ್ಯಮ ವರದಿಗಳು ಲಭಿಸಿವೆ. ರೈಲಿನ ಅಪಘಾತವು ಈಜಿಪ್ಟ್‌ನಲ್ಲಿ ನಡೆದಿದೆಯೇ ಹೊರತು ನವದೆಹಲಿಯಲ್ಲಿ ರೈಲು ಅಪಘಾತ ಸಂಭವಿಸಿಲ್ಲ ಎಂದು ವರದಿಗಳಲ್ಲಿ ಉಲ್ಲೇಖವಾಗಿದೆ. CNN ಪ್ರಕಾರ, ಈಜಿಪ್ಟ್‌ನಲ್ಲಿ ರೈಲು ಡಿಕ್ಕಿಯಲ್ಲಿ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ ಮತ್ತು 49 ಜನರು ಗಾಯಗೊಂಡಿದ್ದಾರೆ ಎಂದು ಈಜಿಪ್ಟಿನ ಆರೋಗ್ಯ ಸಚಿವಾಲಯ ವರದಿಯನ್ನು ತಯಾರಿಸಿದೆ.
ಅಲ್ ಶರ್ಕಿಯಾ ಗವರ್ನರೇಟ್‌ನ ರಾಜಧಾನಿ ಝಗಾಜಿಗ್ ನಗರದಲ್ಲಿ ರೈಲುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಮೂವತ್ತು ಆಂಬ್ಯುಲೆನ್ಸ್‌ಗಳು, ಬಹಳಷ್ಟು ವೈದ್ಯಕೀಯ ತಂಡಗಳನ್ನು ಅಪಘಾತ ಉಂಟಾದ ಸ್ಥಳಕ್ಕೆ ಕಳುಹಿಸಲಾಗಿದೆ. ಗಾಯಗೊಂಡ ವ್ಯಕ್ತಿಗಳನ್ನು ಅಲ್-ಅಹ್ರಾರ್ ಮತ್ತು ಝಗಾಜಿಗ್ ವಿಶ್ವವಿದ್ಯಾಲಯದ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಆ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದವು.
ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದರಿಂದ ಘಟನೆ ನಡೆದ ಸ್ಥಳದ ಸುತ್ತಲೂ ದೊಡ್ಡ ಜನಸಮೂಹದ ಚಿತ್ರಗಳನ್ನು ಈಜಿಪ್ಟ್‌ನ ಹಳೆಯದಾದ ರೈಲ್ವೆ ವ್ಯವಸ್ಥೆಯು ಕಳೆದ ಎರಡು ದಶಕಗಳಿಂದ ಪ್ರತಿ ವರ್ಷವೂ ಮಾರಣಾಂತಿಕ ಅಪಘಾತಕ್ಕೀಡಾಗುತ್ತಿದೆ. 2018 ರಿಂದ ಈಜಿಪ್ಟ್ 2024ರವರೆಗೂ ಸಂಭವಿಸಿದ ರೈಲು ಅಪಘಾತಗಳ ಕುರಿತು ಮಾಹಿತಿಯನ್ನು ದಾಖಲಿಸಲಾಗಿದೆ. ಮತ್ತು ಏಜೆನ್ಸಿಯ ಮಾಹಿತಿಯ ಪ್ರಕಾರ ಹಿಂದಿನ ವರ್ಷ 1,793, ಸಾರ್ವಜನಿಕ ಅಪಘಾತಗಳು ಉಂಟಾಗಿವೆ ಎಂದು ಕೇಂದ್ರದ ಅಂಕಿ – ಅಂಶಗಳ ಮೂಲಕ ನಿಖರವಾಗಿ ತಿಳಿದುಬಂದಿದೆ.
ಈ ವಿಷಯದ ಕುರಿತು ಮತ್ತಷ್ಟು ತಿಳಿದುಕೊಳ್ಳಲು, 2024ರ ಸೆಪ್ಟೆಂಬರ್ 14ರಂದು ಈಜಿಪ್ಟ್‌ನ ನೈಲ್ ಡೆಲ್ಟಾದಲ್ಲಿ ರೈಲು ಅಪಘಾತ ನಡೆದ ಸ್ಥಳದ ಕುರಿತು ಅಸೋಸಿಯೇಟೆಡ್ ಪ್ರೆಸ್ ಮತ್ತು ಯುರೋ ನ್ಯೂಸ್‌ನ YouTube ಚಾನಲ್‌ಗಳಲ್ಲಿ ಅದೇ ದೃಶ್ಯಗಳನ್ನು ಹಂಚಿಕೊಂಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈಜಿಪ್ಟ್‌ನಲ್ಲಿ ಸಂಭವಿಸಿದ ರೈಲು ಅಪಘಾತವನ್ನು, ಭಾರತದ ನವದೆಹಲಿಯಲ್ಲಿ ಸಂಭವಿಸಿದೆ ಎಂದು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ. ಇಂತಹ ಪೋಸ್ಟರ್‌ಗಳನ್ನು ಹಂಚಿಕೊಳ್ಳುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
- Fact Check | A.R.ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ನ ಎಲ್ಲಾ ನೌಕರರು ಮುಸಲ್ಮಾನರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.