Fact Check | ತಿರುಪತಿ ಲಾಡು ತಿಂದವರಿಗೆ ಮನೆ ಕೊಡುವುದಿಲ್ಲ ಎಂಬುದು ಎಡಿಟೆಡ್‌ ಫೋಟೋ

ಸಾಮಾಜಿಕ ಜಾಲತಾಣದಲ್ಲಿ ” ಸಸ್ಯಹಾರಿಗಳಿಗೆ ಮಾತ್ರ ಮನೆ ನೀಡುಲಾಗುತ್ತದೆ. ತಿರುಪತಿ ಲಾಡು ಸೇವಿಸಿದವರಿಗೆ ಮನೆ ನೀಡಲಾಗುವುದಿಲ್ಲ” ಎಂಬ ಅರ್ಥದಲ್ಲಿ ಮನೆಯ ಮುಂದಿನ ಗೇಟ್‌ನಲ್ಲಿ ಪೋಸ್ಟರ್‌ವೊಂದನ್ನು ಹಾಕಿರುವ ಫೋಟೋವೊಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋವನ್ನು ನೋಡಿದ ಹಲವು ಮಂದಿ ಫೇಸ್‌ಬುಕ್‌ ಸೇರಿದಂತೆ ಹಲವು ಕಡೆಗಳಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಮಂದಿ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಈಗಾಗಲೇ ತಿರುಪತಿ ಲಾಡು ವಿಚಾರ ದೇಶಾದ್ಯಂತ ಬಹುದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ಬಹುಸಂಖ್ಯಾತರಾದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಬಂದಿದೆ. ಇದರ ನಡುವೆ ಇದೀಗ ಈ ರೀತಿಯ ಪೋಸ್ಟರ್‌ ಸಾಕಷ್ಟು ಮಂದಿಯನ್ನು ಅಚ್ಚರಿಗೆ ದೂಡುವುದರಲ್ಲಿ ಅನುಮಾನವಿಲ್ಲ. ಆದರೆ ಈ ರೀತಿಯ ಪೋಸ್ಟರ್‌ಗಳನ್ನು ನಿಜವಾಗಿಯೂ ಹಾಕಲಾಗಿದೆಯೇ ಎಂಬ ಪ್ರಶ್ನೆ ಕೂಡ ಎಲ್ಲರಲ್ಲಿ ಕಾಡಲು ಆರಂಭಿಸಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗಿರುವ ವಿಡಿಯೋ ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಆಗುತ್ತಿರುವ ಪೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟ ನಡೆಸಿದೆವು. ಈ ವೇಳೆ ನಮಗೆ ಈ ಫೋಟೋ 2 ವರ್ಷಗಳಷ್ಟು ಹಳೆಯದು ಎಂಬದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವಿವಿಧ ಕಾರಣಗಳಿಗಾಗಿ ಎಡಿಟ್‌ ಮಾಡಿ ಹಂಚಿಕೊಳ್ಳಲಾಗುತ್ತಿದೆ . ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನ ಮನೆ ಮಾಲೀಕರ ನಿಯಮಗಳನ್ನು ಟ್ರೋಲ್‌ ಮಾಡಲು ಈ ಫೋಟೋವನ್ನು ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ.

ಇನ್ನು ವೈರಲ್‌ ಫೋಟೋವಿನ ಮೂಲವನ್ನು ಹುಡುಕಲು, ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 18 ಫೆಬ್ರವರಿ 2017 ರಲ್ಲಿ ಬೆಂಗಳೂರು ಮಿರರ್‌  “ಭೂ ಮಾಲೀಕರಿಗೆ ಪಿಐಎಲ್‌ ಕಹಿ, ಬಡ ಬಾಡಿಗೆದಾರರಿಗೆ ವರದಾನ” ಎಂಬ ಶೀರ್ಷಿಕೆಯ ಅಡಿಯಲ್ಲಿ ಇದೇ ವೈರಲ್‌ ಪೋಟೋದೊಂದಿಗೆ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಈ ವೈರಲ್‌ ಫೋಟೋದಲ್ಲಿನ ಪೋಸ್ಟರ್‌ನಲ್ಲಿ 3 BHK ಮನೆ ಖಾಲಿ ಇದೆ ಎಂದು ಉಲ್ಲೇಖೀಸಿ ಮೊಬೈಲ್‌ ಸಂಖ್ಯೆಯನ್ನು ನೀಡಲಾಗಿದೆ. ಆದರೆ  ಇದನ್ನೇ ದುರ್ಬಳಕೆ ಮಾಡಿಕೊಂಡಿರುವ ಹಲವರು ಎಡಿಟ್‌ ಮಾಡಿ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ.

                                ಬೆಂಗಳೂರು ಮಿರರ್‌ನಲ್ಲಿ ವೈರಲ್‌ ಫೋಟೋದೊಂದಿಗೆ ಪ್ರಕಟಗೊಂಡ ವರದಿ

 

                                                 ಬೆಂಗಳೂರು ಮಿರರ್‌ನಲ್ಲಿ ಕಂಡು ಬಂದ ಮೂಲ ಫೋಟೋ

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ಹಾಗೆ ತಿರುಪತಿ ಲಾಡು ತಿಂದವರಿಗೆ ಮನೆ ನೀಡಲಾಗುವುದಿಲ್ಲ ಎಂಬ ಪೋಸ್ಟರ್‌ ಹೊಂದಿರುವ ಫೋಟೋ ಎಡಿಟೆಡ್‌ ಆಗಿದೆ. ಇದರ ಮೂಲ ಫೋಟೋದಲ್ಲಿ 3 ಬೆಡ್‌ರೂಮ್‌ಗಳ ಮನೆ ಖಾಲಿ ಇದೆ ಎಂದು ಮೊಬೈಲ್‌ ಸಂಖ್ಯೆಯನ್ನು ನೀಡಲಾಗಿದೆ. ಹಾಗೂ ಈ ಫೋಟೋ 7 ವರ್ಷಗಳಷ್ಟು ಹಳೆಯದಾಗಿದೆ. ಹಾಗಾಗಿ ವೈರಲ್‌ ಫೋಟೋ ಎಡಿಟೆಡ್‌ ಎಂಬುದು ಸಾಬೀತಾಗಿದೆ.


ಇದನ್ನೂ ಓದಿ : Fact Check: ಗಾಂಧೀಜಿಯವರ ಮೊಮ್ಮಗರಾದ ಶ್ರೀಕೃಷ್ಣ ಕುಲಕರ್ಣಿಯವರು ರಾಹುಲ್ ಗಾಂಧಿಗೆ ಬರೆದ ಹಳೆಯ ಪತ್ರವನ್ನು ತಿರುಚಿ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *