Fact Check | ಲೆಬನಾನ್‌ನಲ್ಲಿನ ಅಗ್ನಿ ದುರಂತದ ವಿಡಿಯೋವನ್ನು ಇಸ್ರೇಲ್‌ ದಾಳಿಯ ವಿಡಿಯೋ ಎಂದು ಹಂಚಿಕೆ

ಈ ವಿಡಿಯೋ ನೋಡಿ “ಇಸ್ರೇಲಿ ವಾಯುಪಡೆಯು ನೂರು ಲಾಂಚರ್‌ಗಳನ್ನು ಹೊಡೆದು ಲೆಬನಾನ್‌ನಲ್ಲಿ ಸುಮಾರು 1,00,000 ಶೆಲ್‌ಗಳನ್ನು ನಾಶಪಡಿಸಿದೆ. ಇಸ್ರೇಲ್‌ನ ಮೆಟುಲಾ ನಗರದ ಮೇಲೆ ದಾಳಿ ಮಾಡಲು ಹಿಜ್ಬುಲ್ಲಾ ಸಿದ್ಧವಾಗುತ್ತಿರುವಾಗ ಇಸ್ರೇಲ್‌ ದಾಳಿ ನಡೆಸಿ ಹಿಜ್ಬುಲ್ಲಾಗಳ ಯೋಜನೆಯನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದೆ. ಇಸ್ರೇಲ್‌ನ ಈ ದಾಳಿಯಿಂದಾಗಿ, ಕನಿಷ್ಟ ಸಾವಿರಕ್ಕೂ ಅಧಿಕ ಹಿಜ್ಬುಲ್ಲಾಗಳು ಸಾವನ್ನಪ್ಪಿರುವ ಸಾದ್ಯತೆ ಇದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕಾವಗಿ ಹಂಚಿಕೊಳ್ಳಲಾಗುತ್ತಿದೆ. 

ಸಾಕಷ್ಟು ಮಂದಿ ಈ ವಿಡಿಯೋ ನೋಡಿ, ಇದು ನಿಜವಾಗಿಯೂ ಇಸ್ರೇಲ್‌ ನಡೆಸಿದ ದಾಳಿ ಎಂದು ಭಾವಿಸಿದ್ದಾರೆ. ಹೀಗಾಗಿ ಸಾಕಷ್ಟು ಮಂದಿ ಈ ವೈರಲ್‌ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಹಲವರು ಲೆಬನಾನ್‌ ದಾಳಿ ನಡೆಸುವ ಯೋಜನೆ ಅರಿವಿಗೆ ಬರುತ್ತಿದ್ದಂತೆ ಇಸ್ರೇಲ್‌ನ ಈ ಕ್ರಮ ಪ್ರಶಂಸೆಗೆ ಅರ್ಹವಾಗಿದೆ ಎಂದೆಲ್ಲ ಬರೆದುಕೊಂಡು ವೈರಲ್‌ ವಿಡಿಯೋವನ್ನು ಶೇರ್‌ ಮಾಡುತ್ತಿದ್ದಾರೆ. ಹೀಗೆ ವಿವಿಧ ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋವಿನ ಕುರಿತು ಪರಿಶೀಲನೆ ನಡೆಸಲು ನಮ್ಮ ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಿದೆವು. ಅರೆಬಿಕ್‌ ಭಾಷೆಯ ಎಲಿಸಿಯಾ ಎಂಬ ಅನ್‌ಲೈನ್‌ ಸುದ್ದಿ ತಾಣದ ವರದಿಯೊಂದು ಕಂಡು ಬಂದಿದೆ. ಇದರಲ್ಲಿ ನ್ಯೂ ಮುನ್ಸಿಪಾಲಿಟಿಯ ವ್ಯಾಪ್ತಿಯಲ್ಲಿರುವ ಬೌರ್ಜ್ ಹಮ್ಮೌದ್ – ಡೌರಾದಲ್ಲಿನ ತ್ಯಾಜ್ಯದ ಡಂಪ್‌ನಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿತು ಎಂದು ಉಲ್ಲೇಖಿಸಲಾಗಿದೆಯೇ ಹೊರತು, ಇಸ್ರೇಲ್‌ ದಾಳಿಯ ಬಗ್ಗೆ ಎಲ್ಲಿಯೂ ಉಲ್ಲೇಖವೇ ಇಲ್ಲ.

ಇದಾದರ ನಂತರದ ಹುಡುಕಾಟದಲ್ಲಿ ಸೆಪ್ಟೆಂಬರ್ 12 ರಂದು ಹಲವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ಗಳು ಕಂಡು ಬಂದಿದೆ. ಅದರಲ್ಲಿ ಕೂಡ ಈ ಘಟನೆ ಬೆಂಕಿ ಅವಘಡದಿಂದ ಸಂಭವಿಸಿದೆ ಎಂಬ ಅಂಶ ಉಲ್ಲೇಖವಾಗಿರುವುದು ಕಂಡು ಬಂದಿದೆ. ಕೆಲ ವರದಿಗಳಲ್ಲಿ ಬುರ್ಜ್ ಹಮ್ಮೌಡ್‌ನಲ್ಲಿನ ಭೂಕುಸಿತದಲ್ಲಿ ಸಂಭವಿಸಿದ ದುರಂತದ ಪ್ರಮಾಣ ಹೀಗಿತ್ತು ಎಂಬ ಅಂಶವನ್ನು ಕೂಡ ಉಲ್ಲೇಖಿಸಿದ್ದಾರೆ. ಇನ್ನು ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಲೆಬನಾನ್‌ನಲ್ಲಿನ ಪೇಜರ್ ದಾಳಿಯು ಸೆಪ್ಟೆಂಬರ್ 17 ಮತ್ತು 18 ರಂದು ನಡೆಯಿತು. ಆದರೆ ಇದಕ್ಕೂ ಮೊದಲೆ ಅಂದರೆ ಸೆಪ್ಟೆಂಬರ್ 12 ಮತ್ತು 13 ರಂದು ಈ ಅಗ್ನಿದುರಂತ ನಡೆದಿದೆ. ಹಾಗಾಗಿ ವೈರಲ್‌ ಪ್ರತಿಪಾದನೆಯಲ್ಲಿ ಹುರುಳಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ, ಇಸ್ರೇಲ್‌ನ ಭೀಕರ ದಾಳಿಯಿಂದಾಗಿ ಲೆಬನಾನ್‌ನಲ್ಲಿ ಬಹುದೊಡ್ಡ ಅಗ್ನಿ ದುರಂತ ಸಂಭವಿಸಿದೆ ಎಂಬುದು ಸುಳ್ಳು. ಇದಕ್ಕೆ ಪೂರಕವಾದ ಯಾವುದೇ ವರದಿಗಳು ಕೂಡ ಕಂಡು ಬಂದಿಲ್ಲ. ವೈರಲ್‌ ಪೋಸ್ಟ್‌ ಭೂಕುಸಿತದ ಸಂದರ್ಭದಲ್ಲಿ ಉಂಟಾದ ಅವಘಡವಾಗಿದೆ ಎಂಬುದು ಹಲವು ವರದಿಗಳಿಂದ ಸಾಬೀತಾಗಿದೆ. ಹಾಗಾಗಿ ವೈರಲ್‌ ವಿಡಿಯೋ ಸಂಪೂರ್ಣ ಸುಳ್ಳು ನಿರೂಪಣೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ಯಾವುದೇ ವೈರಲ್‌ ವಿಡಿಯೋ ಕಂಡು ಬಂದರು ಅವುಗಳ ಕುರಿತು ಪರಿಶೀಲನೆ ನಡೆಸುವುದು ಉತ್ತಮವಾಗಿದೆ.


ಇದನ್ನೂ ಓದಿ : Fact Check | A.R.ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್‌ನ ಎಲ್ಲಾ ನೌಕರರು ಮುಸಲ್ಮಾನರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *