ಇತ್ತೀಚೆಗೆ ಲೆಬನಾನ್‌ನಲ್ಲಿ ಸೌರ ಫಲಕಗಳು ಸ್ಪೋಟಗೊಂಡಿದ್ದು, ಅಲ್ಲಿ ಅನೇಕ ಜನರು ಸತ್ತಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ ಎಂಬ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
“ಲೆಬನಾನ್: ಸೌರ ಫಲಕಗಳು ವಿದ್ಯುತ್ ಬೆಂಕಿಯಿಂದ ಸ್ಪೋಟಗೊಳ್ಳುತ್ತಿವೆ. ಇದರಿಂದಾಗಿ ಇಲ್ಲಿಯವರೆಗೆ 500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಫೇಸ್‌ಬುಕ್ ಬಳಕೆದಾರರು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ಪೋಸ್ಟರ್‌ನ್ನು Google ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2023ರ ಜುಲೈ 21ರಂದು ಮಾಧ್ಯಮಗಳಲ್ಲಿ ಹಂಚಿಕೊಂಡ “ಸೌರ ಶಕ್ತಿ…ಬೆಂಕಿಗಳು ಮತ್ತು ಸ್ಫೋಟಗಳು ” ಎಂಬ ಶೀರ್ಷಿಕೆಯ ವರದಿ ಲಭಿಸಿದೆ. ಸೌರ ಫಲಕಗಳು ಮತ್ತು ವಿವಿಧ ಇನ್ವರ್ಟರ್‌ಗಳು ಮತ್ತು ಬ್ಯಾಟರಿಗಳಂತಹ ಸಂಬಂಧಿತ ಘಟಕಗಳನ್ನು ಒಳಗೊಂಡ, ಲೆಬನಾನ್ ಪ್ರದೇಶಗಳಲ್ಲಿ ಸೌರ ಶಕ್ತಿ ಫಲಕಗಳು ಸ್ಪೋಟಗೊಂಡು, ಮುಗಿಲೆತ್ತರದ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಲ್ಲಿ ಪ್ರಕಟವಾಗಿದೆ.
ಈ ವೈರಲ್ ಚಿತ್ರದ ಕುರಿತು ಮತ್ತಷ್ಟು ಹುಡುಕಿದಾಗ, 2020ರ ಜನವರಿ 10ರಂದು ಫೈರ್ ಸೇಫ್ಟಿ ರಿಸರ್ಚ್ ಇನ್‌ಸ್ಟಿಟ್ಯೂಟ್ X ನಲ್ಲಿ ಮತ್ತೊಂದು ಪೋಸ್ಟ್‌ನ್ನು ಹಂಚಿಕೊಂಡಿದೆ. ಈ ಪೋಸ್ಟರ್‌ನ ಚಿತ್ರವು ವೈರಲ್ ಆದ ಚಿತ್ರವನ್ನು ಹೋಲುತ್ತದೆ. 2019 ಡಿಸೆಂಬರ್‌ನ ನಂತರ ಮತ್ತೊಂದು ವರದಿಯನ್ನು ಹಂಚಿಕೊಳ್ಳಲಾಗಿದೆ. ಅದು ಕೂಡ ಅದೇ ಚಿತ್ರವನ್ನು ಹೋಲುತ್ತದೆ.
As today is #CutYourEnergyCostsDay, many citizens may be considering installing #solarpanels on their homes. What does that mean for #firefightersafety? Check out our research on Firefighter Safety and Photovoltaic Systems here: https://t.co/eStzrXFPPC pic.twitter.com/YL4xB3YsIP
— Fire Safety Research Institute (@FSRI_org) January 10, 2020
ಒಟ್ಟಾರೆಯಾಗಿ ಹೇಳುವುದಾದರೆ, ಲೆಬನಾನ್‌ನಲ್ಲಿ ಹಿಂದೆ ಕಾಣಿಸಿಕೊಂಡ ಸ್ಪೋಟವನ್ನು, ಇತ್ತೀಚೆಗೆ ಲೆಬನಾನ್‌ನಲ್ಲಿ ಸೌರ ಫಲಕಗಳು ಸ್ಪೋಟಗೊಂಡಿವೆ ಎಂದು ತಪ್ಪು ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ ಇಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.