ಲೋಕಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಮತ್ತು ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಅಮೆರಿಕದ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡಲು ವೇದಿಕೆಗೆ ಹೋದಾಗ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಡಿದ್ದಾರೆ ಎಂಬ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
“ಭಾರತವನ್ನು ಟೀಕಿಸುವ” ಅವರ ಭಾಷಣಗಳಿಂದಾಗಿ ಕೆಲವು ಮಾಧ್ಯಮ ಬಳಕೆದಾರರು “ಗಾಂಧಿಯವರನ್ನು ಪಾಕಿಸ್ತಾನದವರು ಎಂದು ತಿಳಿದಿದ್ದಾರೆ” ಎಂದು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ಪೋಸ್ಟರ್‌ನ್ನು ಕುರಿತು ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದಾಗ, ಅಮೇರಿಕದಲ್ಲಿ ಗಾಂಧಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಡಿದ್ದಾರೆ ಎಂಬ ಯಾವುದೇ ವರದಿಗಳು ಲಭಿಸಿಲ್ಲ.
ಈ ಪೋಸ್ಟರ್‌ನಲ್ಲಿ ಹಂಚಿಕೊಂಡಿರುವ ಲಿಂಕ್‌ನ್ನು ಪರಿಶೀಲಿಸಿದಾಗ, ದಿ ಫಾಕ್ಸಿ ಎಂಬ ವಿಡಂಬನಾತ್ಮಕ ವೆಬ್‌ಸೈಟ್ ಸುಳ್ಳು ಘಟನೆಗಳು ಮತ್ತು ಸತ್ಯಗಳಿಲ್ಲದ ಪೋಸ್ಟ್‌ಗಳನ್ನು ಮಾತ್ರ ಹಂಚಿಕೊಳ್ಳುತ್ತದೆ. ಸ್ಪಷ್ಟವಾಗಿ ಹೇಳುವುದಾದರೆ, “ಈ ಫಾಕ್ಸಿ ಒಂದು ವಿಡಂಬನಾತ್ಮಕ ವೆಬ್ ಪೋರ್ಟಲ್ ಆಗಿದೆ. ಈ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವಿಷಯವು ಕಾಲ್ಪನಿಕ ಕಥೆಯನ್ನು ಆಧರಿಸಿರುತ್ತದೆ. ಹಾಗಾಗಿ ಫಾಕ್ಸಿಯಲ್ಲಿನ ಲೇಖನಗಳು ವಾಸ್ತವಿಕ ಅಥವಾ ನಿಜವೆಂದು ಪರಿಗಣಿಸದಂತೆ ಓದುಗರಿಗೆ ವಿಷಯವನ್ನು ನೀಡುತ್ತದೆ.
ಗಾಂಧಿಯವರು ಅಮೇರಿಕದ ವಿಶ್ವವಿದ್ಯಾನಿಲಯಗಳಲ್ಲಿ ಭಾಷಣಗಳನ್ನು ಮಾಡಿರುವ ವೀಡಿಯೊಗಳನ್ನು, ಗಾಂಧಿಯವರ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ವೀಕ್ಷಿಸಿದಾಗ, ಅದರಲ್ಲಿ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಡಿಲ್ಲ ಎಂಬುದು ನಿಖರವಾಗಿ ತಿಳಿದುಬಂದಿದೆ.
ಒಟ್ಟಾರೆಯಾಗಿ ಹೇಳಬಹುದಾದರೆ, ರಾಹುಲ್‌ಗಾಂಧಿಯವರು ಅಮೇರಿಕದ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡಲು ವೇದಿಕೆಗೆ ಹೋದಾಗ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಡಿದ್ದಾರೆ ಎಂದು ತಪ್ಪಾಗಿ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ ಇಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ:
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.