Fact Check: ವ್ಯಕ್ತಿಯೊಬ್ಬ ಚಪ್ಪಲಿಯನ್ನು ಧರಿಸಿ ಆಲೂಗಡ್ಡೆಗಳನ್ನು ತೊಳೆಯುತ್ತಿರುವ ವೀಡಿಯೋ ಉತ್ತರ ಪ್ರದೇಶದ್ದು ಎಂಬುದಕ್ಕೆ ಆಧಾರಗಳಿಲ್ಲ

ಕೆಲವು ದಿನಗಳಿಂದ ಒಬ್ಬ ವ್ಯಕ್ತಿಯು ತನ್ನ ಪಾದಗಳನ್ನು ಬಳಸಿ ಆಲೂಗಡ್ಡೆಯನ್ನು ತೊಳೆಯುತ್ತಿರುವುದನ್ನು ಚಿತ್ರಿಸುವ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ, ಇದು ಸಹರಾನ್‌ಪುರದ ಇತ್ತೀಚಿನ ವೀಡಿಯೊ ಎಂದು ಹೇಳಿಕೊಳ್ಳಲಾಗಿದೆ. ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಚಪ್ಪಲಿಯನ್ನು ಧರಿಸಿ ಆಲೂಗೆಡ್ಡೆಗಳನ್ನು ತುಳಿಯುವ ವೀಡಿಯೋ ಎಕ್ಸ್‌(ಟ್ವಿಟರ್)ನಲ್ಲಿ ವೈರಲ್ ಆಗಿದೆ.

ಅನೇಕರು ಈ ವೀಡಿಯೋ ತುಣುಕನ್ನು ಹಂಚಿಕೊಂಡು “ಅಂಗಡಿ- “ಕುಮಾರ್ ಸ್ವೀಟ್”. ಗುಣಮಟ್ಟ- ಸಮೋಸ, ಆಲೂ ಪುರಿ ಸಬ್ಜಿ. ವಿಳಾಸ- ಘಂಟಾಘರ್ ಹತ್ತಿರ, ಸಹರಾನ್ಪುರ್, ಯುಪಿ. ಈಗ “ಕುಮಾರ್ ಸ್ವೀಟ್” ಆಗಿರುವುದರಿಂದ ಯಾರ ಭಾವನೆಗಳಿಗೂ ಧಕ್ಕೆಯಾಗುವುದಿಲ್ಲ.” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಅನೇಕರು ಈ ವೀಡಿಯೋವನ್ನು ಹಂಚಿಕೊಂಡಿದ್ದು ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್ಚೆಕ್

ಈ ಮಾಹಿತಿ ಸುಳ್ಳಾಗಿದ್ದು, ಸಹರಾನ್‌ಪುರ ಪೊಲೀಸರು ಹೇಳಿಕೆಯನ್ನು ನಿರಾಕರಿಸಿದ್ದಾರೆ. ನಾವು ವೈರಲ್ ವೀಡಿಯೋವನ್ನು ಕೀಫ್ರೆಮ್‌ಗಳಾಗಿ ವಿಂಗಡಿಸಿ ರಿವರ್ಸ್‌ ಇಮೇಜ್ ಸರ್ಚ್‌ನಲ್ಲಿ ಹುಡುಕಿದಾಗ ಈ ವೀಡಿಯೋ ತಪ್ಪುದಾರಿಗೆಳೆಯುತ್ತಿದೆ ಎಂದು ಕಂಡುಕೊಂಡಿದ್ದೇವೆ. ಮತ್ತು ಇದೇ ವೈರಲ್ ವೀಡಿಯೊವನ್ನು ಜನವರಿ 2023 ರಿಂದ ಹಂಚಿಕೊಳ್ಳಲಾಗುತ್ತಿದೆ. ಆ ಸಮಯದಲ್ಲಿ, ಇದು ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಆದರೆ ಅಂಗಡಿಯವನು ಮತ್ತು ಮೀರತ್ ಪೊಲೀಸರು ಅಂತಹ ಯಾವುದೇ ಘಟನೆಯನ್ನು ದೃಢವಾಗಿ ನಿರಾಕರಿಸಿದ್ದಾರೆ.

ತನ್ನ ಪ್ರತಿಷ್ಠೆಗೆ ಮಸಿ ಬಳಿಯುವ ಉದ್ದೇಶದಿಂದ ಈ ವಿಡಿಯೊ ನಿರ್ಮಿಸಲಾಗಿದೆ ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ. ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ, ಅವರು ಮಾನನಷ್ಟಕ್ಕಾಗಿ ಅಪರಿಚಿತ ವ್ಯಕ್ತಿಯ ವಿರುದ್ಧ ಔಪಚಾರಿಕ ದೂರು ದಾಖಲಿಸಿದ್ದಾರೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.

ಸದ್ಯಕ್ಕೆ, ವೀಡಿಯೊ ಎಲ್ಲಿಯದು ಎಂದು ಮೂಲವನ್ನು ಪರಿಶೀಲಿಸಲಾಗಿಲ್ಲ ಮತ್ತು ಈ ವೀಡಿಯೋವನ್ನು ಹಂಚಿಕೊಂಡಿರುವವರು ಮಾಡಿದ ಹಕ್ಕುಗಳನ್ನು ಯಾವುದೇ ಪರಿಶೀಲಿಸಿದ ಮೂಲಗಳು ಬೆಂಬಲಿಸುವುದಿಲ್ಲ.

ಈ ವೀಡಿಯೋ ಹಂಚಿಕೊಂಡಿರುವವರು ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ತಮ್ಮ ನಿರೂಪಣೆಯನ್ನು ಹೊಂದಿಸಲು ಇವರೇ ರಚಿಸಿದ ಪ್ರತಿಪಾದನೆಗಳೊಂದಿಗೆ ಹಳೆಯ ವೀಡಿಯೊಗಳನ್ನು ಪ್ರಸಾರ ಮಾಡಲಾಗುತ್ತಿದೆ.


ಇದನ್ನು ಓದಿ: ಇತ್ತೀಚೆಗೆ ಲೆಬನಾನ್ನಲ್ಲಿ ಸೌರ ಫಲಕಗಳು ಸ್ಪೋಟಗೊಂಡಿವೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *