ಗಣೇಶನಿಗೆ ಪೂಜೆ ಮಾಡುವಾಗ ಅರ್ಚಕರೊಬ್ಬರು ಹೃದಯಾಘಾತದಿಂದ ಬಳಲುತ್ತಿರುವ ಸಿಸಿಟಿವಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಈ ವೀಡಿಯೊದಲ್ಲಿ, ಗಣೇಶನಿಗೆ ಪೂಜೆ ಮಾಡುವಾಗ ಅರ್ಚಕನೊಬ್ಬನು ಹೃದಯಘಾತದಿಂದ ನೆಲಕ್ಕೆ ಕುಸಿದು ಬೀಳುತ್ತಾನೆ. ಆಗ ಗಣೇಶನ ವಿಗ್ರಹದಿಂದ ಧಾರ್ಮಿಕ ಧ್ವಜವು ಅರ್ಚಕನ ಮೇಲೆ ಬೀಳುತ್ತದೆ, ಆಗ ಅರ್ಚಕನಿಗೆ ಎಚ್ಚರವಾಗುತ್ತದೆ. ದೇವರ ಪವಾಡದಿಂದ ಅರ್ಚಕ ಬದುಕಿ ಉಳಿದಿದ್ದಾನೆ ಎಂದು ಬಳಕೆದಾರರು ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್ ಚೆಕ್:
ಈ ವೈರಲ್ ವೀಡಿಯೋದ ಕೀವರ್ಡ್‌ಗಳ ಸಹಾಯದಿಂದ Google ನಲ್ಲಿ ಹುಡುಕಿದಾಗ, ಅದೇ ತರಹದ ವೀಡಿಯೊವನ್ನು ಹೋಲುವ ಫೇಸ್‌ಬುಕ್ ಪೋಸ್ಟರ್ ಲಭಿಸಿದೆ. ಈ ಪೋಸ್ಟರ್‌ನಲ್ಲಿ ,ಮೂಲ ವೀಡಿಯೊವನ್ನು ವೀಕ್ಷಿಸಿದಾಗ ಇದನ್ನು ಸಂಜನಾ ಗಲ್ರಾನಿ’ ಎಂಬುವವರು ಅತಿ ಹೆಚ್ಚು ಬಾರಿ ವೀಕ್ಷಿಸಿರುವ ಟ್ಯಾಗ್ ದೊರೆತಿದೆ.
ಸಂಜನಾ ಗಲ್ರಾನಿ ಎಂಬ ಹೆಸರಿನ ಫೇಸ್‌ಬುಕ್ ಪುಟದಲ್ಲಿ, ವೈರಲ್ ವೀಡಿಯೊವನ್ನು ಕುರಿತು ಹುಡುಕಿದಾಗ, 2024ರ ಸೆಪ್ಟೆಂಬರ್ 19ರಂದು ಮೂಲತಃ ಅವರೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.
ಈ ಪೋಸ್ಟ್‌ನ ವಿವರಣೆಯು ಸುಳ್ಳಿನಿಂದ ಕೂಡಿದ್ದು, “ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು! ಈ ಪುಟವು ಸ್ಕ್ರಿಪ್ಟ್ ಮಾಡಿದ ನಾಟಕಗಳು ಮತ್ತು ವಿಡಂಬನೆಗಳನ್ನು ಸಹ ಒಳಗೊಂಡಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಕಿರುಚಿತ್ರಗಳು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ! ಈ ವೀಡಿಯೊದಲ್ಲಿನ ಪಾತ್ರಗಳು ಮನರಂಜನೆಯ ಉದ್ದೇಶಗಳಾಗಿವೆ. ‘
ವೈರಲ್ ವೀಡಿಯೊ ನಿಜವಾದ ಸಿಸಿಟಿವಿ ದೃಶ್ಯಗಳನ್ನು ತೋರಿಸುವುದಿಲ್ಲ ಆದರೆ ಸ್ಕ್ರಿಪ್ಟ್ ಮಾಡಿದ ವೀಡಿಯೊವನ್ನು ತೋರಿಸುತ್ತದೆ. ವೈರಲ್ ವೀಡಿಯೊ ಕೊನೆಯಲ್ಲಿ 3:07 ಮಾರ್ಕ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಪ್ರಸಿದ್ಧ ನಟಿಯಾದ ಸಂಜನಾ ಗಲ್ರಾನಿ ತಮ್ಮ ಫೇಸ್‌ಬುಕ್ ಪುಟದಲ್ಲಿ ನಿಯಮಿತವಾಗಿ ಸ್ಕ್ರಿಪ್ಟ್ ನಾಟಕಗಳನ್ನು ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಮನರಂಜನೆಗಾಗಿ ಮಾಡಿರುವ ಸ್ಕ್ರಿಪ್ಟ್ ವೀಡಿಯೊವನ್ನು, ನೈಜ ಘಟನೆಯ ವೀಡಿಯೊ ಎಂದು ಸಿಸಿಟಿವಿಯ ವೀಡಿಯೊ ಎಂದು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ವೀಡಿಯೊಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ:
Fact Check : ಇತ್ತೀಚೆಗೆ ಲೆಬನಾನ್‌ನಲ್ಲಿ ಸೌರ ಫಲಕಗಳು ಸ್ಪೋಟಗೊಂಡಿವೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ