ರಾಜ್ಯಸಭಾ ಸಂಸದೆ ಸುಧಾ ಮೂರ್ತಿಯವರು ಹೂಡಿಕೆ ಅಪ್ಲಿಕೇಶನ್ ಕುರಿತು ಪ್ರಚಾರ ಮಾಡುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಸುಧಾ ಮೂರ್ತಿಯವರು ತಮ್ಮ ಪತಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರೊಂದಿಗೆ ವೇದಿಕೆಯಲ್ಲಿ ಮಾತನಾಡುವಾಗ ದಿನಕ್ಕೆ ₹ 21,000 ಆರಂಭಿಕ ಹೂಡಿಕೆಯನ್ನು ಮಾಡಿದರೆ ₹35,000 ವರೆಗೆ ಗಳಿಸಬಹುದು ಎಂದು ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ವೀಡಿಯೋದ ಸ್ಕ್ರೀನ್‌ಸಾಟ್ ಚಿತ್ರಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು, ವೀಡಿಯೊದ ಕೀಫ್ರೇಮ್‌ಗಳನ್ನು ಹಾಕಿ ಹುಡುಕಿದಾಗ, 2023ರ ಜುಲೈ 7ರಂದು YouTube ಚಾನಲ್‌ನಲ್ಲಿ ಹಂಚಿಕೊಳ್ಳಲಾದ ಮನಿ ಕಂಟ್ರೋಲ್‌ನ ಮೂಲ ವೀಡಿಯೊ ಲಭಿಸಿದೆ. ಸುಧಾ ಮೂರ್ತಿಯವರು ಈ ವೀಡಿಯೊದಲ್ಲಿ ಉದ್ಯಮಿಗಳ ಪತ್ನಿಯರ ಬಗ್ಗೆ ಮಾತನಾಡುತ್ತಿದ್ದಾರೆ.
ಮೂಲ ವೀಡಿಯೊ ಮತ್ತು ವೈರಲ್ ವೀಡಿಯೊಗಳಲ್ಲಿನ ಅನೇಕ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸುಧಾ ಮೂರ್ತಿಯವರು ಯಾವುದೇ ಹೂಡಿಕೆ ಅಪ್ಲಿಕೇಶನ್ ಕುರಿತು ಮಾತನಾಡಿಲ್ಲ ಎಂಬುದು ನಿಕಟವಾಗಿ ತಿಳಿದುಬಂದಿದೆ.
ವೈರಲ್ ವೀಡಿಯೊ ಕುರಿತು ಮತ್ತಷ್ಟು ಹುಡುಕಿದಾಗ, ಡೀಪ್‌ಫೇಕ್ ಉಪಕರಣವಾದ ಟ್ರೂಮೀಡಿಯಾದ ಡೀಪ್‌ಫೇಕ್ ಡಿಟೆಕ್ಟರ್ – ಈ ವೀಡಿಯೊ ತಿರುಚಿದ್ದು ಎಂಬ ಬಗ್ಗೆ 97% ಖಾತರಿಯನ್ನು ನೀಡುತ್ತದೆ. ಇದು AI- ರಚಿತವಾದ ಧ್ವನಿಯಾಗಿದ್ದು, ಡೀಪ್‌ಫೇಕ್ ತಂತ್ರಜ್ಞಾನದ ಬಳಕೆ ಮಾಡಲಾಗಿದೆ. ವೀಡಿಯೊದಲ್ಲಿ 76% ವರೆಗಿನ ಮುಖಭಾವಗಳಿಗೆ AI- (Artificial intelligence) ಚಾಲಿತ ಬದಲಾವಣೆ ಮಾಡಲಾಗಿದೆ ಎಂದು ನಿಖರವಾದ ವರದಿಯನ್ನು ನೀಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸುಧಾ ಮೂರ್ತಿಯವರ ವೀಡಿಯೊವನ್ನು ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿಕೊಂಡು ಸುಳ್ಳು ನಿರೂಪಣೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸುಧಾಮೂರ್ತಿಯವರು ಹೂಡಿಕೆ ಅಪ್ಲಿಕೇಶನ್ ಕುರಿತು ಮಾತನಾಡಿಲ್ಲ. ಹಾಗಾಗಿ ಇಂತಹ ವಿಷಯಗಳನ್ನು ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ